ಮೋಚಿ ಕನ್ನಡದ ಶ್ರೇಷ್ಠ ಕಥೆಗಳಲ್ಲಿ ಒಂದು. ಈ ಕಥೆಯನ್ನು ಬರೆದವರು ಭಾರತೀಪ್ರಿಯ. ಅವರ ನಿಜವಾದ ಹೆಸರು ಎಸ್.
ವೆಂಕಟರಾವ್.ಇವರು ಮೈಸೂರಿನಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ.ಎ ಪದವಿ ಪಡೆದ ನಂತರ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದರು. ಜನವಾಣಿ, ಮಾತೃಭೂಮಿ, ಪೌರವಾಣಿ, ತಾಯಿನಾಡು, ಮುಂತಾದಂತಹ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದರು ಇವರು ಮೂರು ಕಾದಂಬರಿಗಳನ್ನು ಮತ್ತು ಮೂರು ಅನುವಾದಿತ ಕಥೆಗಳನ್ನು ರಚಿಸಿದ್ದಾರೆ.ಇವರು ಒಟ್ಟು ಹತ್ತು ಕಥೆಗಳನ್ನು ಬರೆದಿದ್ದಾರೆ. ಇವರ ರುದ್ರವೀಣೆ ಎಂಬ ಕಥಾ ಸಂಕಲನದಿಂದ ಮೋಚಿ ಎಂಬ ಕಥೆಯನ್ನು ಆಯ್ದುಕೊಳ್ಳಲಾಗಿದೆ.