Radio Azim Premji University

Kannada Geetamaale | ಕನ್ನಡ ಗೀತಮಾಲೆ | Noorakke Nooru Karnataka Ep 5


Listen Later

In this special edition of Noorakke Nooru Karnataka in observance of Karnataka Rajyotsava, we celebrate Karnataka’s rich musical heritage with a selection of old classics and contemporary favourites. Hosted by Shraddha and peppered with special messages from the artists, Kannada Geetamale embodies the spirit of Kannada. This playlist of eleven soulful tracks span decades and emotions, showcasing the beauty of our language and the diversity of our people. As we commemorate Karnataka Rajyotsava, let’s embrace the inclusivity, warmth, and resilience that define Karnataka’s spirit. May our music, language, and culture continue to thrive. Jai Karnataka! Acknowledgements: Raghavendra Herle for Kannada translation Shridevi Kalasad for research and compilation Credits Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar. ಕನ್ನಡ ಗೀತಮಾಲೆ ‘ನೂರಕ್ಕೆ ನೂರು ಕರ್ನಾಟಕ’ ದ ಈ ಒಂದು ವಿಶೇಷ ಸಂಚಿಕೆಯನ್ನು , ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ಪ್ರತಿಬಿಂಬಿಸುವ ಹಳೆಯ ಮಧುರವಾದ ಶಾಸ್ತ್ರೀಯ ಹಾಡುಗಳು ಮತ್ತು ಸಮಕಾಲೀನ ಅಚ್ಚುಮೆಚ್ಚಿನ ಗೀತೆಗಳನ್ನು ಒಳಗೊಂಡ ಕನ್ನಡ ಗೀತಮಾಲೆಯನ್ನು ಪ್ರಸ್ತುತಪಡಿಸುವ ಮೂಲಕ ಆಚರಿಸುತ್ತಿದ್ದೇವೆ. ಈ ಕಾರ್ಯಕ್ರಮವನ್ನು ಶ್ರದ್ಧಾ ಅವರು ಕಲಾವಿದರ/ಕಲಾಕಾರರ ವಿಶೇಷವಾದ ಸಂದೇಶಗಳೊಂದಿಗೆ ರುಚಿಕಟ್ಟಾಗಿ ನಡೆಸಿಕೊಡಲಿದ್ದಾರೆ. ಕನ್ನಡ ಗೀತೆಮಾಲೆ ಕಾರ್ಯಕ್ರಮವು ಕನ್ನಡ ಸ್ಫೂರ್ತಿಯನ್ನು ಸಾಕಾರಗೊಳಿಸುವಂತಹ ಹನ್ನೊಂದು ಹಾಡುಗಳ ಮೂಲಕ ಪ್ರಸ್ತುತವಾಗಲಿದ್ದು ಈ ಭಾವಪೂರ್ಣವಾದ ಹತ್ತು ಹಾಡುಗಳು ದಶಕಗಳ ವ್ಯಾಪ್ತಿಯನ್ನು ಹೊಂದಿದ್ದು ಭಾವನಾತ್ಮಕವಾಗಿ ನಮ್ಮನ್ನು ಬೆಸೆಯುತ್ತವೆ. ಜೊತೆಗೆ ಇವು ನಮ್ಮ ಭಾಷೆಯಸೌಂದರ್ಯ ಮತ್ತು ಜನತೆಯ ವೈವಿಧ್ಯಮಯ ಬದುಕನ್ನು ಅನಾವರಣಗೊಳಿಸುತ್ತವೆ. ಕನ್ನಡದ ಜೀವಸ್ವರವೆಂದೇ ಮಾನ್ಯರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಕವಿತಾ ಕೃಷ್ಣಮೂರ್ತಿ ಮುಂತಾದಗಾಯಕ ಶ್ರೇಷ್ಠರಿಂದ ಮೊದಲ್ಗೊಂಡು ಯುವ ಮನಸ್ಸನ್ನು ಸಂಚಲನಗೊಳಿಸುವ ಮೈಸೂರು ಎಕ್ಸ್ ಪ್ರೆಸ್ ನ ನಮ್ಮೂರುವರೆಗೆ, ಪೀಪಲ್ ಟ್ರೀಯವರ ಚೈತನ್ಯದಾಯಿಯಾದ ಜನಪದ ಮತ್ತು ರಾಕ್ ಶೈಲಿಯ ತಾನಿ ತಂದಾನಾ ದವರೆಗೆ ಪ್ರತಿಯೊಂದು ಹಾಡೂ ತನ್ನ ಅನನ್ಯತೆಯಿಂದ ನಮ್ಮ ನಾಡಿಗೆ ಗೌರವ ಸಮರ್ಪಣೆ ಸಲ್ಲಿಸುತ್ತದೆ. ಜಿ. ಪಿ. ರಾಜರತ್ನಂ ಅವರ ಮಕ್ಕಳ ಕವಿತೆಗಳಿಗೆ ಜೀವಂತಿಕೆ ತಂದುಕೊಟ್ಟ ಕಸ್ತೂರಿ ಎಂಬ ತುತ್ತೂರಿಯ ಹುಡುಗನ‘ಬಣ್ಣದ ತಗಡಿನ ತುತ್ತೂರಿ’ಯಂತಹ ಕಾಲಾತೀತವಾದ ಗೀತರಚನೆಗಳಿಂದ ಹಿಡಿದು ಇಮಾಂಸಾಬ್ ವಾಲ್ಲೇಪ್ಪನವರ್ಅವರು ಹಾಡಿ ಲೋಕಪ್ರಿಯಗೊಳಿಸಿದ ನಮ್ಮೆಲ್ಲರ ನೆಚ್ಚಿನ ಸೂಫಿ ಪಂಥದ ಕವಿ ಶಿಶುನಾಳ ಶರೀಫರ ಡೊಳ್ಳಿನ ಪದಶೈಲಿಯ ಆಧ್ಯಾತ್ಮಿಕ ತತ್ತ್ವಪದವಾದ ‘ಗುಡಿಯ ನೋಡಿರಣ್ಣ’ದವರೆಗಿನ ಹಾಡುಗಳನ್ನು ಇಲ್ಲಿ ಕೇಳಬಹುದಾಗಿದೆ. ‘ಭಕ್ತಿ ರಿಪಬ್ಲಿಕ್’ ನ ಶ್ರೋತ್ರುಗಳಿಗೆ ವಚನಕಟ್ಟೆಯಲ್ಲಿ ಚಿರಪರಿಚಿತವಾಗಿರುವ ಎಮ್. ಡಿ. ಪಲ್ಲವಿ ಮತ್ತು ಬ್ರೂಸ್ ಲೀಮಣಿ ಅವರು ಹಾಡಿರುವ ಗೀತೆಗಳನ್ನು ಇಲ್ಲಿ ಆಲಿಸಲು ಅವಕಾಶವಿದೆ. ಜೊತೆಗೆ ಸಹಜವಾಗಿಯೇ ಸಾರ್ವಕಾಲಿಕವಾಗಿಕನ್ನಡಿಗರೆಲ್ಲರನ್ನೂ ಏಕತ್ರಗೊಳಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ಮತ್ತು ಅವರ ಪುತ್ರ ಪೂರ್ಣಚಂದ್ರತೇಜಸ್ವಿಯವರಿಂದ ಸಂಗೀತ ಸಂಯೋಜಿಸಲ್ಪಟ್ಟ ‘ಬಾರಿಸು ಕನ್ನಡ ಡಿಂಡಿಮವಾ’ ಗೀತೆಯನ್ನೂ ಸವಿಯಬಹುದಾಗಿದೆ. ಈ ಕರ್ನಾಟಕ ರಾಜ್ಯೋತ್ಸವವನ್ನು ನಾವು ಕರ್ನಾಟಕದ ಸ್ಫೂರ್ತಿಶಕ್ತಿಯನ್ನು ನಿರೂಪಿಸುವ ಎಲ್ಲರನ್ನೂ ಒಳಗೊಳ್ಳುವ, ಬೆಚ್ಚನೆಯ ಮಡಿಲಿನ ಆಸರೆಗೆ ಇಂಬು ನೀಡುವ, ನಮನೀಯ ದೃಷ್ಟಿಯ, ಪರಸ್ಪರ ಸಾಮರಸ್ಯದಿಂದ ಕೂಡಿದಅಪ್ಪುಗೆಯ ಭಾವದಿಂದ ಸಂಭ್ರಮಿಸುತ್ತಾ ಅವಿಸ್ಮರಣೀಯಗೊಳಿಸೋಣ. ನಮ್ಮ ಸಂಗೀತ, ಭಾಷೆ ಮತ್ತುಸಂಸ್ಕೃತಿಗಳು ನಿರಂತರವಾಗಿ ಅಭಿವೃದ್ಧಿ ಹೊಂದಿ ನೂರ್ಕಾಲ ಬಾಳಲಿ. ಜೈ ಕರ್ನಾಟಕ! ಕೃತಜ್ಞತೆ : ಸಂಶೋಧನೆ ಮತ್ತು ಸಂಕಲನದ ಕಾರ್ಯಗಳಿಗಾಗಿ ಶ್ರೀದೇವಿ ಕಲಾಸದ್ ಅವರಿಗೆ. ವಿಶ್ವಾಸಪೂರ್ವಕ ನುಡಿಗಳು : ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ನಾರಾಯಣ ಕೃಷ್ಣ ಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್ ಗುಪ್ತ, ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ ಮತ್ತು ವೇಲು ಶಂಕರ್ For detailed notes and other information, visit our website:
...more
View all episodesView all episodes
Download on the App Store

Radio Azim Premji UniversityBy Radio Apu