Sign up to save your podcasts
Or
In this special edition of Noorakke Nooru Karnataka in observance of Karnataka Rajyotsava, we celebrate Karnataka’s rich musical heritage with a selection of old classics and contemporary favourites. Hosted by Shraddha and peppered with special messages from the artists, Kannada Geetamale embodies the spirit of Kannada. This playlist of eleven soulful tracks span decades and emotions, showcasing the beauty of our language and the diversity of our people.
As we commemorate Karnataka Rajyotsava, let’s embrace the inclusivity, warmth, and resilience that define Karnataka’s spirit. May our music, language, and culture continue to thrive.
Jai Karnataka!
Acknowledgements:
Raghavendra Herle for Kannada translation
Shridevi Kalasad for research and compilation
Credits
Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar.
ಕನ್ನಡ ಗೀತಮಾಲೆ
“ನೂರಕ್ಕೆ ನೂರು ಕರ್ನಾಟಕ”ದ ಈ ವಿಶೇಷ ಸಂಚಿಕೆಯನ್ನು, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರಸ್ತುತಪಡಿಸುತ್ತಿದ್ದೇವೆ. ನಮ್ಮ ಕರ್ನಾಟಕದ ನಾಡು ನುಡಿ, ಪರಂಪರೆ ಮತ್ತು ವೈಭವವನ್ನು ಸಾರುವ ಸಂಗೀತದ ಹೊಳೆಯೇ ಇಲ್ಲಿ ಹರಿದಿದೆ. ಹಾಡು ಹಳೆಯದಾದರೇನು ಭಾವ ನವನವೀನ ಎಂಬ ಕವಿವಾಣಿಯಂತೆ ಸುಂದರವಾದಂಥ ಹತ್ತು ಹಾಡುಗಳನ್ನು “ಕನ್ನಡ ಗೀತಮಾಲೆ”ಯಲ್ಲಿ ನಿಮಗಾಗಿ ಪೋಣಿಸಿ ತಂದಿದ್ದೇವೆ. ಈ ಕಾರ್ಯಕ್ರಮವನ್ನು ಶ್ರದ್ಧಾ ನಿರೂಪಿಸಿದ್ದಾರೆ. ವಿವಿಧ ಕಲಾವಿದರ ಸಂದೇಶಗಳನ್ನೂ ಇದು ಒಳಗೊಂಡಿದೆ. ಈ “ಕನ್ನಡ ಗೀತೆಮಾಲೆ” ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಹತ್ತು ಹಾಡುಗಳನ್ನು ಕೇಳುತ್ತಿದ್ದರೆ, ನಮ್ಮ ಭಾಷೆ, ಮತ್ತದರ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ವಿಶೇಷ ಅಭಿಮಾನ ಮೂಡುತ್ತದೆ. ಮೈ ನವಿರೇಳುತ್ತದೆ. ಕೇಳುತ್ತಾ ಹೋದಂತೆ ಈ ಹಾಡುಗಳೊಂದಿಗೆ ನಮಗರಿವಿಲ್ಲದೆಯೇ ಭಾವನಾತ್ಮಕ ಬಂಧ ಬೆಸೆಯುತ್ತದೆ.
ಈ ಹತ್ತೂ ಹಾಡುಗಳು ಕಳೆದ ಹತ್ತು ವರ್ಷಗಳಲ್ಲಿ ಮೂಡಿಬಂದಂಥವು “ಕನ್ನಡ ಜೀವಸ್ವರ” ಎಂಬ ಅದ್ಭುತವಾದ ಗೀತೆಯೊಂದಿಗೆ ಈ ಕಾರ್ಯಕ್ರಮ ಶುರುವಾಗುತ್ತದೆ. ಸಂಗೀತ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಧ್ವನಿ ಮೈಮನಸ್ಸನ್ನು ಪುಳಕಗೊಳಿಸುತ್ತದೆ. ನಮ್ಮ ನಾಡನ್ನು ಮತ್ತಷ್ಟು ಪ್ರೀತಿಸುವಂತೆ ಮಾಡುತ್ತದೆ. ಜೊತೆಗೆ ಈ ಹಾಡಿನಲ್ಲಿ ಕವಿತಾ ಕೃಷ್ಣಮೂರ್ತಿ, ಫಯಾಝ್ ಖಾನ್ ಮುಂತಾದ ಪ್ರಸಿದ್ಧ ಗಾಯಕ ಗಾಯಕಿಯರ ಧ್ವನಿಯನ್ನೂ ಕೇಳಬಹುದಾಗಿದೆ. ಈ ಗೀತೆಯ ಸಾಹಿತ್ಯ ಜಯಂತ ಕಾಯ್ಕಿಣಿ ಅವರದು. ಮೈಸೂರು ಎಕ್ಸ್ ಪ್ರೆಸ್ನ “ನಮ್ಮೂರು” ಹಾಡಂತೂ ಯುವಜನರನ್ನು ಗುಂಗಿನಲ್ಲಿ ತೇಲಿಸುವಂತಿದೆ. “ಪೀಪಲ್ ಟ್ರೀ”ಯ “ತಾನಿತಂದಾನಾ” ಎಂಬ ಜಾನಪದ ಹಾಡು, ರಾಕ್ ಶೈಲಿಯಲ್ಲಿ ಆಕರ್ಷಕವಾಗಿ ಹೊಮ್ಮಿದೆ. ಕುಳಿತಲ್ಲೇ ಕುಣಿಯುವಂತೆ ಮಾಡುತ್ತದೆ.
ಕವಿ ಜಿ. ಪಿ. ರಾಜರತ್ನಂ ಅವರ ಮಕ್ಕಳ ಕವಿತೆಗಳಲ್ಲಿ ಪ್ರಸಿದ್ಧವಾದ ”ಬಣ್ಣದ ತಗಡಿನ ತುತ್ತೂರಿ”ಯಂತೂ ಇಂದಿನ ಪೀಳಿಗೆಗೂ ಆಪ್ತವೆನ್ನಿಸುವಂತಿದೆ. ಸಂತ ಶಿಶುನಾಳ ಶರೀಫರ “ಗುಡಿಯ ನೋಡಿರಣ್ಣ” ಹಾಡನ್ನು ಡೊಳ್ಳಿನ ಪದದ ಶೈಲಿಯಲ್ಲಿ ಇಮಾಂಸಾಬ್ ವಲ್ಲೆಪ್ಪನವರ ಕಂಠದಲ್ಲಿ ಕೇಳುತ್ತಿದ್ದರಂತೂ ಅಧ್ಯಾತ್ಮಲೋಕ ನಿಮ್ಮನ್ನು ಆವರಿಸಿಕೊಂಡುಬಿಡುತ್ತದೆ.
“ಭಕ್ತಿ ರಿಪಬ್ಲಿಕ್” ನಡಿ ಹೊಮ್ಮಿದ, ಶರಣ ಮಾರಿತಂದೆಯ “ಕತ್ತಲೆಯ” ವಚನವನ್ನು ಎಮ್. ಡಿ. ಪಲ್ಲವಿ ಮತ್ತು ಬ್ರೂಸ್ ಲೀ ಮಣಿ ತಮ್ಮ ಸೃಜನಶೀಲತೆ ಮತ್ತು ಕಂಠಸಿರಿಯಿಂದ ವಿಶೇಷ ಮೆರುಗನ್ನು ಕೊಟ್ಟಿದ್ದಾರೆ. ರಾಷ್ಟ್ರಕವಿ ಕುವೆಂಪು ವಿರಚಿತ “ಬಾರಿಸು ಕನ್ನಡ ಡಿಂಢಿಮವಾ” ಗೀತೆಗೆ ಪೂರ್ಣಚಂದ್ರ ತೇಜಸ್ವಿ ಎಸ್. ವಿ. ಅನನ್ಯವಾಗಿ ಸಂಗೀತ ಸಂಯೋಜಿಸಿದ್ದಾರೆ.
ಸುಮಧುರವಾದಂಥ ಈ ಎಲ್ಲ ಹಾಡುಗಳ ರಸದೌತಣವನ್ನು ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಅನುಭವಿಸುವಂಥ ಸೌಭಾಗ್ಯ ನಮ್ಮನಿಮ್ಮೆಲ್ಲರದ್ದು. ಕರ್ನಾಟಕದಲ್ಲಿರುವ ಮತ್ತು ಕನ್ನಡದ ಬಗ್ಗೆ ಪ್ರೀತಿ ಇರುವ ಸರ್ವರನ್ನೂ ಮಮತೆ, ಸಮತೆ ಪೊರೆಯಲಿ. ಅದಕ್ಕೆ ನಮ್ಮ ಸಂಗೀತ, ಭಾಷೆ, ಸಂಸ್ಕೃತಿ ಇಂಬು ಕೊಡಲಿ. ಈ ಕಾರ್ಯಕ್ರಮದ ಮೂಲಕ ನಾವೆಲ್ಲ ರಾಜ್ಯೋತ್ಸವವನ್ನು ಸಂಭ್ರಮಿಸುವಂತಾಗಲಿ.
ಜೈ ಕರ್ನಾಟಕ!
ಕೃತಜ್ಞತೆ:
ಸಂಶೋಧನೆ ಮತ್ತು ನಿರೂಪಣಾ ಸಾಹಿತ್ಯ : ಶ್ರೀದೇವಿ ಕಳಸದ
ಧನ್ಯವಾದಗಳು:
ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ನಾರಾಯಣ ಕೃಷ್ಣ ಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್ ಗುಪ್ತ, ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ ಮತ್ತು ವೇಲು ಶಂಕರ್
For detailed notes, a playlist, and track information, visit our website: https://bit.ly/3UtHYbm