ಕುವೆಂಪು ಅವರ ಅಜ್ಜಯ್ಯನ ಅಭ್ಯಂಜನ . ಭಾರತೀಯ ಪರಂಪರೆಯಲ್ಲಿ ಎಣ್ಣೆಸ್ನಾನಕ್ಕೆ ತನ್ನದೇ ವಿಶೇಷ ಮಹತ್ವವಿದೆ. ಹಬ್ಬ- ಹರಿದಿನಗಳಲ್ಲಿ ಮನೆಯವರೆಲ್ಲರೂ ಸಂತಸದಿಂದ ಇದರಲ್ಲಿ ಭಾಗಿಗಳಾಗುತ್ತಾರೆ. ಸಂಸ್ಕೃತಿಯ ಭಾಗವಾಗಿ ಅನೂಚಾನವಾಗಿ ಬೆಳೆದುಬಂದಿರುವ ಈ ಅಭ್ಯಂಜನಕ್ಕೆ ಭಾರತೀಯ ವೈದ್ಯಚಿಕಿತ್ಸೆ ಹಾಗೂ ಯೋಗ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ದೈಹಿಕ ಆರೋಗ್ಯದ ದೃಷ್ಟಿಯಿಂದಲೂ ಇಂದೂ ತನ್ನದೇ ಆದ್ಯತೆಯನ್ನು ಪಡೆದುಕೊಂಡಿದೆ. ವೈಜ್ಞಾನಿಕವಾಗಿಯೂ ಅಭ್ಯಂಜನ ಉತ್ತಮ ಆರೋಗ್ಯವನ್ನು ಪಡೆಯಲು ಉತ್ತಮ ವಿಧಾನವೆಂದು ಪರಿಗಣಿಸಲ್ಪಟ್ಟಿದೆ. ಪ್ರಸ್ತುತ ಗದ್ಯಭಾಗ ಮಲೆನಾಡಿನ ಗ್ರಾಮೀಣ ಬದುಕಿನ ಚಿತ್ರಣವನ್ನು ಪ್ರತಿಬಿಂಬಿಸುವಲ್ಲಿ ಸಫಲವಾಗಿದೆ. ಒತ್ತಡ ಹಾಗೂ ಯಾಂತ್ರಿಕ ಜೀವನ ನಡೆಸುವ ಇಂದಿನ ದಿನಗಳಲ್ಲಿ ಅಭ್ಯಂಜನ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ.