Kannada Storyteller

ಕುವೆಂಪು ಅವರ ಯಾರೂ ಅರಿಯದ ವೀರ


Listen Later

ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ ಲಿಂಗ ಮನೆಗೆ ಬರುತ್ತಾನೆ. ಸುಬ್ಬಣ್ಣ ಗೌಡರು ಏನಾಯ್ತೋ ಎಂದು ಕೇಳುತ್ತಾರೆ. ತಾನು ತನ್ನ ಪ್ರಾಣದ ಹಂಗು ತೊರೆದು ಅವರೆಲ್ಲರ ಪ್ರಾಣ ಉಳಿಸಿದ್ದರೂ ಅದನ್ನು ಮುಚ್ಚಿಟ್ಟು “ಯಾರೂ ಅರಿಯದ ವೀರ”ನಾಗಿ ಉಳಿಯುತ್ತಾನೆ.
...more
View all episodesView all episodes
Download on the App Store

Kannada StorytellerBy Kannada Storyteller