SatisHFaction
Kannada Podcast from the US

ನಮ್ಮ ದೀಪಾವಳಿಯ ಆಚರಣೆ (84)


Listen Later

ನಮ್ಮ ದೀಪಾವಳಿಯ ಆಚರಣೆ


ಒಂದು ಕಾಲದಲ್ಲಿ ನರಕಚತುರ್ದಶಿಯ ದಿನ ಬೆಳಗ್ಗೆ ಬೇಗ ಎದ್ದು, ಚುಮು ಚುಮು ಚಳಿಯಲ್ಲೇ ಕಾಸಿದ ಎಣ್ಣೆಯ ಲೇಪನದ ನಂತರ ಅಭ್ಯಂಜನ ಸ್ನಾನ ಮಾಡಿ, ನಂತರ ಆಟೋಟಗಳಲ್ಲಿ ಮೊದಲಾಗುತ್ತಿದ್ದ ದಿನಗಳು ಈಗಂತೂ ಇಲ್ಲ.


ಆಗೆಲ್ಲ ಚಳಿಗೆ ಬೈದುಕೊಂಡಿದ್ದರ ದೆಸೆಯಿಂದಲೋ ಏನೋ ಇಂದು ಚಳಿದೇಶದಲ್ಲಿ ಬಂದು ನೆಲೆಸುವಂತಾಗಿದೆ.


ಎಂತಹ ಗಮ್ಮತ್ತು ಇರ್ತಾ ಇತ್ತು ಆಗೆಲ್ಲ?

ದೀಪಾವಳಿ ದಿನಗಳಲ್ಲಿ

ಪುಂಡಿ ಕೋಲಿನ ಆಟ ಆಡ್ತಿದ್ವಿ.

ಬೂರೆ ಕದಿಯೋದಕ್ಕೆ ಹೋಗ್ತಿದ್ವಿ.

ಗೂಪೂಜೆ ಮಾಡುವುದರ ಜೊತೆಗೆ ದನಬೆದರಿಸೋ ಆಟಗಳನ್ನು ದೂರದಿಂದ ಕುತೂಹಲ ಮತ್ತು ಜಾಗರೂಕತೆಯೊಂದಿಗೆ ನೋಡ್ತಾ ಇದ್ವಿ.

ಲಕ್ಷ್ಮೀ ಪೂಜೆ ದಿನ ಅಂಗಡಿ, ಮಿಲ್ಲು, ಮತ್ತೊಂದು ಅಂತ ಹೋದಲ್ಲೆಲ್ಲ ಸ್ವೀಟ್ಸ್, ಮಂಡಕ್ಕಿ, ಹಣ್ಣು ಕೊಡೋರು, ಅದನ್ನೆಲ್ಲ ಕಲೆಕ್ಟ್ ಮಾಡ್ತಾ ಇದ್ವಿ.

ಪಟಾಕಿಗಳನ್ನ, ಸುರುಸುರು ಬತ್ತಿ, ಗರ್ನಾಲು, ಕುಡಿಕೆ ಪಟಾಕಿಗಳನ್ನ ಅತ್ತೋ-ಕರೆದೋ ಕೊಡಿಸಿಕೊಳ್ತಿದ್ವಿ.

ಎಲ್ಲಕ್ಕಿಂತ ಮುಖ್ಯವಾಗಿ ಹೊಸಬಟ್ಟೆ ಹಾಕಿ ಸಂಭ್ರಮಿಸ್ತಿದ್ವಿ.


ನಮಗೆ ಏನಿಲ್ಲವೆಂದರೂ, ನಮ್ಮ ಹಿರಿಯರು ಒಂದಿಷ್ಟು ಸಂಪ್ರದಾಯ, ಪರಂಪರೆ ಅಂತ ಕಲಿಸಿದ್ರು, ಅದರ ಬಗ್ಗೆ ಕತೆಗಳನ್ನ ಹೇಳಿಕೊಟ್ಟಿದ್ರು.


***


ಆದರೆ ಇಂದಿನ ದೀಪಾವಳಿ ಆಚರಣೆ ಅದಕ್ಕೆ ತದ್ವಿರುದ್ಧವಾಗಿದೆ ಅನ್ನಬಹುದು.

ನಮ್ಮ ಈ ಉತ್ತರ ಅಮೇರಿಕದ ಚೌಕಟ್ಟಿನಲ್ಲಿ ನಾವೂ ದೀಪಾವಳಿಯನ್ನ ಗ್ರ್ಯಾಂಡ್ ಆಗೇ ಆಚರಿಸ್ತೀವೆ, ಆದರೆ, ನಮಗೆ ಬೇಕಾದ ರೀತಿ ಮತ್ತು ಅನುಕೂಲಗಳೊಂದಿಗೆ.


ಒಂದಂತೂ ನಿಜ, ದೀಪಾವಳಿ ಹಬ್ಬ ವಾರದ ಯಾವುದೇ ದಿನಾನೇ ಬರಲಿ, ನಾವು ಅಂದಿನ ದಿನವನ್ನೇ ಆಚರಿಸ್ತೀವಿ. ಈ ಹಬ್ಬವನ್ನ ವೀಕೆಂಡ್‌ಗೆ ತಳ್ಳೋದಿಲ್ಲ.


ಒಂದು cul de sac ಗೆ ಹೊಂದಿಕೊಂಡ ನೆರೆಹೊರೆಯವರೆಲ್ಲ, ನಮ್ಮ ಅಂಗಳದಲ್ಲಿ ಸೇರಿಕೊಳ್ತೀವಿ.

ಸುಮಾರು ಒಂದು ಮೂವತ್ತು-ಮುವತೈದು ಫ಼್ಯಾಮಿಲಿಗಳಾಗಬಹುದು.

ಪಕ್ಕಾ ಸೌತ್ ಇಂಡಿಯನ್ ತಿಂಡಿ-ತಿನಿಸುಗಳಾದ ಇಡ್ಲಿ, ವಡೆ, ಉಪ್ಪಿಟ್ಟು, ಶ್ಯಾವಿಗೆ, ಕೇಸರಿಬಾತ್ ಹಾಗೂ ಕಿಚಡಿಯ ಜೊತೆಗೆ ಶೇಂಗಾ ಚಟ್ಣಿ, ಕೊಬ್ಬರಿ ಚಟ್ಣಿ ಮತ್ತು ಟೊಮ್ಯಾಟೋ ಚಟ್ಣಿಯನ್ನು ಮಾಡಿಟ್ಟಿರುತ್ತೇವೆ.

ಪ್ರತಿಯೊಂದು ಫ಼್ಯಾಮಿಲಿಯವರೆಲ್ಲ, ಕುಡಿಕೆ ಪಟಾಕಿಗಳನ್ನ ಹಾರಿಸಿ, ಅದರ ಮುನ್ನೆಲೆಯಲ್ಲಿ ಹ್ಯಾಪಿ ದೀಪಾವಳಿ/ದಿವಾಲೀ ಎಂದು ಸಂತೋಷದಿಂದ ತೆಗೆದುಕೊಳ್ಳುವ ಅನೇಕ ಗ್ರೂಪ್ ಫ಼ೋಟೋಗಳು, ವಿಡಿಯೋಗಳು ಬಹಳ ವಿಶೇಷ.

ನಾವು ಸುಮಾರು 11 ವರ್ಷಗಳಿಂದ ಈ ರೀತಿಯಾಗಿ ದೀಪಾವಳಿಯನ್ನ ಕಮ್ಯೂನಿಟಿ ಇವೆಂಟ್ ಆಗಿ ಆಚರಿಸಿಕೊಂಡು ಬಂದಿದ್ದೇವೆ. ಇದು ಹೀಗೆ ಮುಂದುವರೆಯಲಿ ಅನ್ನೋದು ನನ್ನ ಆಶಯ.

...more
View all episodesView all episodes
Download on the App Store

SatisHFaction
Kannada Podcast from the USBy Satish Hosanagara