Dr. Sri Ramachandra Guruji

Paanchaliyolu panchendriyangalu (ಪಾಂಚಾಲಿಯೊಳು ಪಂಚೇಂದ್ರಿಯಂಗಳು) Yoglet - 2.


Listen Later

ದ್ರುಪದನ ಸುತೆ ಪಾಂಡು ಸುತರೈವರ ಸತಿ .. ಪಂಚೇಂದ್ರಿಯಗಳೊಡತಿ ಪಂಚರೊಳೀ ಮಹಾಪತಿವ್ರತೆ..  ಯಮಸುತಂಗಿತ್ತಳು ಮಧುರ ಗಾನದಿ ಕರ್ಣೇಂದ್ರಿಯಂಗೆ ಸೊಗವನು.. ಸೌಗಂಧವನರುಹಿ ಪರಿಮಳದಿ ವಾಯುಪುತ್ರನೊಡನೆ ಸಲ್ಲಾಪಂಗೈದಳು ನಾಸಿಕದಿ.. ನಿಸರ್ಗದೊಳಾನಂದದಿ ಫಲ್ಗುಣನೊಡಗೂಡಿ ಸರಸವನೆಸಗಿ ತಣಿಸಿದಳು ಚಕ್ಷೇಂದ್ರಿಂಯಂಗಂದದಿ.. ಭಕ್ಷ್ಯವನಿತ್ತು ಭೋಜನಾಸ್ವಾದದಿ ಜಿಹ್ವೇಂದ್ರಿಯ ನಕುಲನೆನಸಿಹಳು.. ಶಿಶುವಿನೋಪಾದಿಯಲಿ ಆಲಂಗಿಸಿ ಸಹದೇವನಿಂ ಸೊಗಯಿಸಿದಳು.. ಚಿತ್ತಶುದ್ಧಿಯಿಂ,ಭಾವಶುದ್ಧಿಯಿಂ  ಪಂಚೇಂದ್ರಿಯಂಗೊಡತಿ  ಪಂಚ ಮಹಾಪತಿವ್ರತೆಯಿವಳು ಪಾಂಚಾಲರಸನ ಪ್ರಿಯ ಕುವರಿ..

...more
View all episodesView all episodes
Download on the App Store

Dr. Sri Ramachandra GurujiBy Bharath Babu R