Prajavani

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 14 ಮಾರ್ಚ್ 2023


Listen Later

ಪ್ರಜಾವಾಣಿ


ವಾರ್ತೆಗಳ ವಿವರ


––––––


ಭಾರತದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತಿರುವುದರಿಂದ ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳು ಮಧ್ಯಪ್ರವೇಶಿಸಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಚೆಗೆ ಲಂಡನ್‌ನಲ್ಲಿ ನೀಡಿದ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ಸಂಸತ್ತಿನ ಉಭಯ ಸದನಗಳಲ್ಲಿ ಸತತ ಎರಡನೇ ದಿನವಾದ ಮಂಗಳವಾರವೂ ಬಿಜೆಪಿ ಸದಸ್ಯರು ಗದ್ದಲ ನಡೆಸಿದ್ದರಿಂದ ಕಲಾಪವನ್ನು ಮುಂದೂಡಬೇಕಾಯಿತು.


ಮಂಗಳವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಗದ್ದಲ ಆರಂಭವಾಗಿತ್ತು. ಹೀಗಾಗಿ ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಲಾಗಿತ್ತು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆಯೇ ಗದ್ದಲ ಮುಂದುವರಿದಿದ್ದರಿಂದ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು. ರಾಹುಲ್ ಕ್ಷಮೆಗೆ ಕೋರಿ ಬಿಜೆಪಿ ಪಟ್ಟು ಬಿಗಿಗೊಳಿಸಿದಂತೆಯೇ, ಕಾಂಗ್ರೆಸ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ನೀಡಿದ ಹೇಳಿಕೆಯನ್ನು ಒಳಗೊಂಡ ಭಿತ್ತಿಫಲಕ ಪ್ರದರ್ಶಿಸಿದರು. ಹೀಗಾಗಿ ಗದ್ದಲ ತಾರಕಕ್ಕೇರಿ ಕಲಾಪ ನಡೆಸುವುದು ಅಸಾಧ್ಯವಾಯಿತು.


––––


ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಹಲವೆಡೆ ಮಂಗಳವಾರ ಮಳೆಯಾಗಿದೆ. ಗುಡುಗು ಮಿಂಚಿನ ಆರ್ಭಟ ಇತ್ತು, ಕೆಲವೆಡೆ ಆಲಿಕಲ್ಲುಗಳು ಬಿದ್ದಿವೆ.


ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾಗಿ ಅರ್ಧತಾಸು ಸುರಿದಿದೆ. ಕಳಸ ತಾಲ್ಲೂಕಿನ ಬಾಳೆಹೊಳೆ, ಹೊರನಾಡು, ಬಲಿಗೆ, ಕಳಕೊಡು, ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ಬಿರುಸಾಗಿ ಮಳೆ ಸುರಿದಿದ್ದರೆ,  ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಕುಂದೂರು ಭಾಗದಲ್ಲಿ ಸಾಧಾರಣ ಮಳೆಯಾಯಿತು. ಹೊರನಾಡು, ಬೆಟ್ಟಗೆರೆ ಪ್ರದೇಶದಲ್ಲಿ ಆಲಿಕಲ್ಲು ಬಿದ್ದಿದೆ.


ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯಿತು. 


–––––


ಏಷ್ಯಾದ ಮೊದಲ ಮಹಿಳಾ ಲೋಕೊಪೈಲಟ್ ಸುರೇಖಾ ಯಾದವ್ ಅವರು, ಹೊಸದಾಗಿ ಪರಿಚಯಿಸಿರುವ ಸೆಮಿ ಹೈಸ್ಪೀಡ್ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ ರೈಲನ್ನು ಚಾಲನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ’ ಎಂದು ಕೇಂದ್ರ ರೈಲ್ವೆಯು ತಿಳಿಸಿದೆ. 


ಸುರೇಖಾ ಅವರು ಸೋಮವಾರ ಸೊಲ್ಲಾಪುರ ನಿಲ್ದಾಣ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ವಂದೇ ಭಾರತ್‌ ರೈಲನ್ನು ಯಶಸ್ವಿಯಾಗಿ ಚಲಾಯಿಸಿದರು. ಅವರು 450 ಕಿ.ಮೀ. ದೂರ ತಮ್ಮ ಚಾಲನಾ ಚಾಕಚಕ್ಯತೆಯನ್ನು ಮೆರೆದರು ಎಂದು ಪ್ರಕಟಣೆ ತಿಳಿಸಿದೆ.


----


ತೋಶಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಬಂದ ಪೊಲೀಸರನ್ನು ತಡೆಯಲು ಖಾನ್‌ ಬೆಂಬಲಿಗರು ಯತ್ನಿಸಿದ ಘಟನೆ ಲಾಹೋರ್‌ನಲ್ಲಿ ಮಂಗಳವಾರ ನಡೆದಿದ್ದು, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಹಾಗೂ ಅಶ್ರುವಾಯು ಬಳಸಿದರು.


ತೋಶಖಾನಾ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಅವರಿಗೆ ನ್ಯಾಯಾಲಯವೊಂದು ಜಾಮೀನು ರಹಿತ ಬಂಧನ ವಾರೆಂಟ್ ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅವರ ನಿವಾಸದ ಬಳಿಗೆ ಬಂದಿದ್ದರು ಹಾಗೂ ಬಂಧಿಸುವ ತಯಾರಿ ನಡೆಸಿದ್ದರು. ಆದರೆ ಕೆಲವು ದಿನಗಳ ಹಿಂದೆ ನಡೆದ ಪ್ರಸಂಗದಂತೆಯೇ ಮತ್ತೆ ಬೆಂಬಲಿಗರು ಇಮ್ರಾನ್‌ ಖಾನ್‌ ಅವರಿಗೆ ಗುರಾಣಿಯಾಗಿ ನಿಂತರು. ಬೆಂಬಲಿಗರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಹಲವು ಕಾರ್ಯಕರ್ತರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾದರೂ ಇಮ್ರಾನ್ ಖಾನ್‌ ಅವರು ಶರಣಾಗುವುದಿಲ್ಲ ಎಂದು ಪಿಟಿಐ ಪಕ್ಷದ ನಾಯಕ ಫಾರೂಕ್‌ ಹಬೀಬ್‌ ತಿಳಿಸಿದ್ದಾರೆ.


–––––


ಕನ್ನಡ ಧ್ವನಿ ಪ್ರಜಾವಾಣಿ ವಾರ್ತೆಗಳನ್ನು ಕೇಳಿದಿರಿ.


ಮುಂದಿನ ವಾರ್ತಾ ಪ್ರಸಾರ ನಾಳೆ ಬೆಳಿಗ್ಗೆ 8 ಗಂಟೆಗೆ


ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಡಾಟ್‌ ನೆಟ್‌ ನೋಡಿ.


...more
View all episodesView all episodes
Download on the App Store

PrajavaniBy Prajavani

  • 4.7
  • 4.7
  • 4.7
  • 4.7
  • 4.7

4.7

3 ratings


More shows like Prajavani

View all
3 Things by Express Audio

3 Things

57 Listeners

The Rest Is Politics by Goalhanger

The Rest Is Politics

3,858 Listeners