100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University

Sundar Raj’s Theatre Roots at ರವೀಂದ್ರ ಕಲಾಕ್ಷೇತ್ರ | A Bengaluru Legacy | Noorakke Nooru Karnataka


Listen Later

In this episode of Noorakke Nooru Karnataka, we sit down with veteran Kannada actor Sundar Raj to explore the cultural legacy of Ravindra Kalakshetra — Bengaluru’s iconic theatre auditorium, only on Radio Azim Premji University. Like many of his generation, Sundar Raj’s journey into cinema began here, under the stage lights of Kalakshetra. For him and countless others, this wasn’t just a venue — it was a launchpad, a learning ground, and a vital chapter in the history of Kannada performing arts.

ನೂರಕ್ಕೆ ನೂರು ಕರ್ನಾಟಕದ ಈ ಸಂಚಿಕೆಯಲ್ಲಿ, ಹಿರಿಯ ನಟ ಸುಂದರ್ ರಾಜ್ ಅವರು ಬೆಂಗಳೂರಿನ ಹೃದಯಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದ ಜೊತೆಗಿನ ನಂಟು ಮತ್ತು ನೆನಪುಗಳನ್ನು ವರ್ಷಾ ರಾಮಚಂದ್ರ ಜೊತೆ ಹಂಚಿಕೊಳ್ಳುತ್ತಾರೆ. ಅವರ ಪೀಳಿಗೆಯ ಅನೇಕರಂತೆ ಅವರ ಪ್ರಯಾಣವು ಕಲಾಕ್ಷೇತ್ರದ ಪ್ರಜ್ವಲಿಸುವ ವೇದಿಕೆಯ ದೀಪಗಳ ಅಡಿಯಲ್ಲಿ ಪ್ರಾರಂಭವಾಯಿತು. ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ಶತಮಾನೋತ್ಸವವನ್ನು ಗುರುತಿಸಲು ನಿರ್ಮಿಸಲಾದ ರವೀಂದ್ರ ಕಲಾಕ್ಷೇತ್ರದ ಕಥೆಯು 1961 ರಿಂದ ಪ್ರಾರಂಭವಾಗುತ್ತದೆ. ಆಗಿನ ಕೇಂದ್ರ ಸರ್ಕಾರವು ಟ್ಯಾಗೋರ್ ಅವರ ಗೌರವಾರ್ಥವಾಗಿ ಸಾಂಸ್ಕೃತಿಕ ಸ್ಥಳಗಳನ್ನು ನಿರ್ಮಿಸಲು ನಿರ್ಧರಿಸಿ, ಬೆಂಗಳೂರಿನ ಟೌನ್ ಹಾಲ್ ಪಕ್ಕದಲ್ಲಿ 3 ಎಕರೆ ಜಾಗವನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಯಿತು. ಆದರೆ ಇದು ಕೇವಲ ರಾಜ್ಯದ ಉಪಕ್ರಮವಾಗಿರಲಿಲ್ಲ - ಇದು ಒಂದು ಸಾಮೂಹಿಕ ಪ್ರಯತ್ನವಾಗಿತ್ತು. ಸರ್ಕಾರಿ ನಿಧಿಯ ಜೊತೆಗೆ, ಪ್ರಮುಖ ಕಲಾವಿದರು ಮತ್ತು ಉದ್ಯಮಿಗಳು ಈ ಉದ್ದೇಶವನ್ನು ಬೆಂಬಲಿಸಲು ಮುಂದೆ ಬಂದರು. ವಿಶೇಷ ಎಂದರೆ ತಮಿಳಿನ ಶಿವಾಜಿ ಗಣೇಶನ್ ಅವರು ತಮ್ಮ 'ವೀರ ಪಾಂಡ್ಯ ಕಟ್ಟಬೊಮ್ಮನ್' ನಾಟಕವನ್ನು ಟೌನ್ ಹಾಲ್‌ನಲ್ಲಿ ಪ್ರದರ್ಶಿಸಿ, ಸಂಗ್ರಹಿಸಲಾದ 22,000 ರೂಪಾಯಿಗಳನ್ನು ಕಲಾಕ್ಷೇತ್ರದ ನಿರ್ಮಾಣಕ್ಕೆ ದಾನ ಮಾಡಿದ್ದರು. ಇದು ಕಲಾವಿದರಿಗಾಗಿ ಕಲಾವಿದರಿಂದ ನಡೆಸಲ್ಪಟ್ಟ ಪ್ರೀತಿಯ ಶ್ರಮವಾಗಿತ್ತು. ಮಾರ್ಚ್ 9, 1963 ರಂದು ರವೀಂದ್ರ ಕಲಾಕ್ಷೇತ್ರ ಅಧಿಕೃತವಾಗಿ ತನ್ನ ಬಾಗಿಲುಗಳನ್ನು ತೆರೆದಾಗ, ಅದು ಕೇವಲ ಒಂದು ಸಭಾಂಗಣದ ಜನನವಷ್ಟೇ ಆಗಿರಲಿಲ್ಲ, ನಗರದ ನವ ಸಾಂಸ್ಕೃತಿಕ ಹೃದಯ ಬಡಿತದ ಸೃಷ್ಟಿಯೂ ಆಗಿತ್ತು. 1970 ರ ದಶಕದಲ್ಲಿ, ಹೊಸ ಅಲೆಯ ಸಿನಿಮಾಗಳು ಪರದೆಯನ್ನು ಪುನರ್ರೂಪಿಸಿದಾಗ, ಅಂತಹುದೇ ಒಂದು ಚಳುವಳಿ ವೇದಿಕೆಯನ್ನು ವ್ಯಾಪಿಸಿತು. ರವೀಂದ್ರ ಕಲಾಕ್ಷೇತ್ರವು ಹವ್ಯಾಸಿ ರಂಗಭೂಮಿಯ ಅಲೆಗೆ ಕೇಂದ್ರವಾ ಗಿ ರಂಗಭೂಮಿಯ ರೂಪ ಮತ್ತು ರಾಜಕೀಯದ ಗಡಿಗಳನ್ನು ತಳ್ಳಿತು.1972 ರಲ್ಲಿ ಸಿ.ಆರ್. ಸಿಂಹ ಅವರು ಲೋಕೇಶ್ ಮತ್ತು ಶ್ರೀನಿವಾಸ್ ಕಪ್ಪಣ್ಣ ಅವರಂತಹ ನಟರೊಂದಿಗೆ ಸ್ಥಾಪಿಸಿದ ನಟರಂಗ ಮೊದಲ ಪ್ರಮುಖ ತಂಡವಾಯಿತು. ಅವರ ನಿರ್ಮಾಣಗಳು – ‘ಕಾಕನ ಕೋಟೆ’, ‘ಸಂಕ್ರಾಂತಿ’, ‘ತುಘಲಕ್’ - ಸಾಹಿತ್ಯಿಕ ಆಳದೊಂದಿಗೆ ಮನೋರಂಜನೆಯನ್ನೂ ಪ್ರದರ್ಶನದ ಶೈಲಿಯೊಂದಿಗೆ ಸಂಯೋಜಿಸಿ, ಮನೆ ಮಾತಾದವು. ನಂತರ ಬಿ.ವಿ. ಕಾರಂತ್ ನೇತೃತ್ವದ ಬೆನಕ ತಂಡ, ವಿಭಿನ್ನ ಪ್ರಕಾರದ ಸೆಟ್ ವಿನ್ಯಾಸ, ರಂಗಗೀತೆಗಳು ಮತ್ತು ಶೈಲೀಕೃತ ನೃತ್ಯ ಸಂಯೋಜನೆಯನ್ನು ಬಳಸಿದ ಪ್ರದರ್ಶನಗಳಿಗೆ ಹೆಸರುವಾಸಿಯಾಯಿತು. ಬೆನಕ ಅವರ ನಿರ್ಮಾಣಗಳು ಕನ್ನಡ ರಂಗಭೂಮಿಗೆ ಹೊಸ ಆಯಾಮವನ್ನು ತಂದುಕೊಟ್ಟವು. ತುರ್ತು ಪರಿಸ್ಥಿತಿಯ ಬಿರುಸಿನ ರಾಜಕೀಯ ವಾತಾವರಣದಲ್ಲಿ, ಪ್ರಸನ್ನ, ಡಾ. ವಿಜಯಮ್ಮ, ಡಾ. ಬಿ.ಆರ್. ನಾಗರಾಜ್ ಮತ್ತು ಕೀರಂ ನಾಗರಾಜ್ ರೂಪಿಸಿದ ತಂಡ ಸಮುದಾಯ ಹೊರಹೊಮ್ಮಿತು. ‘ಹುತ್ತವ ಬಡಿದರೆ’ ನಂತಹ ನಿರ್ಮಾಣಗಳೊಂದಿಗೆ, ಸಮುದಾಯ ವೇದಿಕೆಯನ್ನು ಸಮಾಜದ ಎಲ್ಲಾ ವರ್ಗದ ಒಗ್ಗಟ್ಟಿನ ಸ್ಥಳವನ್ನಾಗಿ ಪರಿವರ್ತಿಸಿತು. ಈ ಉತ್ಸಾಹದ ನಡುವೆಯೇ ಸುಂದರ್ ರಾಜ್ ‘ಸತ್ತವರ ನೆರಳು’, ‘ಜೋಕುಮಾರಸ್ವಾಮಿ’ ಮತ್ತು ‘ಹಯವದನ’ ದಂತಹ ನಿರ್ಮಾಣಗಳಲ್ಲಿ ರವೀಂದ್ರ ಕಲಾಕ್ಷೇತ್ರದ ವೇದಿಕೆ ಏರಿ, ಕಲಿಕೆ, ವಿಫಲತೆ ಮತ್ತು ಸುಧಾರಣೆ ಮೂಲಕ ತಮ್ಮ ಕಲೆಯನ್ನು ಪರಿಷ್ಕರಿಸಿದರು. ಇವರಂತಹ ಅನೇಕರಿಗೆ, ಇದು ಕೇವಲ ಒಂದು ಕಟ್ಟಡವಾಗಿರಲಿಲ್ಲ…ಇದು ರಂಗ ತರಬೇತಿ ಮೈದಾನ ಮತ್ತು ಸಿನಿಮಾ ಪ್ರಪಂಚಕ್ಕೆ ಒಂದು ದ್ವಾರವಾಗಿತ್ತು. ಮೊದಲ ಚಪ್ಪಾಳೆಯ ಸದ್ದು, ವೈಫಲ್ಯದ ಮೊದಲ ರುಚಿ, ವೃತ್ತಿಜೀವನದ ಆರಂಭ, ಜೀವಮಾನದ ಗೆಳೆತನಗಳು, ಮುಂಬರುವ ಜೀವನದ ಕನಸುಗಳು - ಇವೆಲ್ಲದಕ್ಕೂ ಸಾಕ್ಷಿಯಾಗಿದ್ದು ರವೀಂದ್ರ ಕಲಾಕ್ಷೇತ್ರ.

Special thanks to our guest Sundar Raj for his valuable insights.

Credits Akshay Ramuhalli, Bruce Lee Mani, Gorveck Thokchom, Kishor Mandal, Narayan Krishnaswamy, Prashant Vasudevan, Ram Seshadri, Sananda Dasgupta, Seema Seth, Shraddha Gautam, Supriya Joshi, and Velu Shankar.

For more information, visit our website: https://bit.ly/3SgllG8.

...more
View all episodesView all episodes
Download on the App Store

100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji UniversityBy Radio Azim Premji University