Quran In Kannada

Surah 87 Al-A'la ಅಧ್ಯಾಯ 87: ಅಲ್ ಆಲಾ(ಉನ್ನತ)


Listen Later

ಅಧ್ಯಾಯ 87: ಅಲ್ ಆಲಾ(ಉನ್ನತ)
ಸೂಕ್ತ : 1
(ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರ್ಯವನ್ನು ಜಪಿಸಿರಿ.
ಸೂಕ್ತ : 2
ಅವನು (ನಿಮ್ಮನ್ನು) ಸೃಷ್ಟಿಸಿದವನು ಮತ್ತು ರೂಪಿಸಿದವನು,
ಸೂಕ್ತ : 3
ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು.
ಸೂಕ್ತ : 4
ಮೇವನ್ನು ಬೆಳೆಸಿದವನು.
ಸೂಕ್ತ : 5
ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು.
ಸೂಕ್ತ : 6
ನಾವು ನಿಮಗೆ ಓದಿಸುವೆವು ಮತ್ತೆ ನೀವು ಮರೆಯಲಾರಿರಿ.
ಸೂಕ್ತ : 7
ಅಲ್ಲಾಹನು ಇಚ್ಛಿಸಿದ್ದರ ಹೊರತು. ಅವನು ಬಹಿರಂಗವಾದುದನ್ನು ಮತ್ತು ಗುಪ್ತವಾದುದನ್ನು ಖಂಡಿತ ಬಲ್ಲನು.
ಸೂಕ್ತ : 8
ನಾವು ನಿಮ್ಮ ಪಾಲಿಗೆ ಸುಲಭದ ಹಾದಿಯನ್ನು ಸುಗಮ ಗೊಳಿಸುವೆವು.
ಸೂಕ್ತ : 9
ಉಪದೇಶದಿಂದ ಲಾಭವಿದ್ದಲ್ಲಿ ನೀವು ಉಪದೇಶಿಸಿ.
ಸೂಕ್ತ : 10
(ದೇವರ) ಭಯ ಉಳ್ಳವನು ಉಪದೇಶ ಸ್ವೀಕರಿಸುವನು.
ಸೂಕ್ತ : 11
ದುಷ್ಟನು ಅದರಿಂದ ದೂರ ಉಳಿಯುವನು.
ಸೂಕ್ತ : 12
ಅವನು (ಪರಲೋಕದಲ್ಲಿ) ಮಹಾ ಅಗ್ನಿ ಕುಂಡವನ್ನು ಸೇರುವನು.
ಸೂಕ್ತ : 13
ಅದರಲ್ಲಿ ಅವನಿಗೆ ಸಾಯಲಿಕ್ಕೂ ಆಗದು ಬದುಕಲಿಕ್ಕೂ ಆಗದು.
ಸೂಕ್ತ : 14
ಖಂಡಿತ ವಿಜಯಿಯಾದನು - ಶುದ್ಧನಾದವನು.
ಸೂಕ್ತ : 15
ಹಾಗೂ ತನ್ನೊಡೆಯನ ಹೆಸರನ್ನು ಸ್ಮರಿಸಿದವನು ಮತ್ತು ನಮಾಝನ್ನು ಸಲ್ಲಿಸಿದವನು.
ಸೂಕ್ತ : 16
ಆದರೆ ನೀವು ಇಹಲೋಕದ ಜೀವನಕ್ಕೆ ಪ್ರಾಶಸ್ತ್ಯ ನೀಡುತ್ತೀರಿ.
ಸೂಕ್ತ : 17
ನಿಜವಾಗಿ ಪರಲೋಕವು ಉತ್ತಮವಾಗಿದೆ - ಮತ್ತು ಅದು ಸದಾ ಉಳಿದಿರುತ್ತದೆ.
ಸೂಕ್ತ : 18
ಗತಕಾಲದ ಹೊತ್ತಗೆಗಳಲ್ಲಿ (ಗ್ರಂಥಗಳಲ್ಲಿ) ಇದನ್ನೇ ಹೇಳಲಾಗಿದೆ -
ಸೂಕ್ತ : 19
- ಇಬ್ರಾಹೀಮ್ ಮತ್ತು ಮೂಸಾರ ಹೊತ್ತಗೆಗಳಲ್ಲಿ (ಗ್ರಂಥಗಳಲ್ಲಿ).
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
...more
View all episodesView all episodes
Download on the App Store

Quran In KannadaBy Quran Kannada Podcast