Quran In Kannada

Surah 91 Ash-Shams ಅಧ್ಯಾಯ 91: ಅಶ್ಶಮ್ಸ್ (ಸೂರ್ಯ)


Listen Later

ಅಧ್ಯಾಯ 91: ಅಶ್ಶಮ್ಸ್ (ಸೂರ್ಯ)
ಸೂಕ್ತ : 1
ಸೂರ್ಯನ ಹಾಗೂ ಅದರ ಬೆಳಕಿನಾಣೆ.
ಸೂಕ್ತ : 2
ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ.
ಸೂಕ್ತ : 3
ಮತ್ತು ಹಗಲಿನ ಹಾಗೂ ಅದು ಅನಾವರಣಗೊಳ್ಳುವಾಗಿನ ಆಣೆ.
ಸೂಕ್ತ : 4
ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ.
ಸೂಕ್ತ : 5
ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ.
ಸೂಕ್ತ : 6
ಭೂಮಿಯ ಹಾಗೂ ಅದನ್ನು ಹರಡಿದವನಾಣೆ.
ಸೂಕ್ತ : 7
ಮನುಷ್ಯ ಚಿತ್ತದ ಹಾಗೂ ಅದನ್ನು ರೂಪಿಸಿದವನಾಣೆ.
ಸೂಕ್ತ : 8
ಆ ಬಳಿಕ ಅದಕ್ಕೆ ದುಷ್ಟತನದ ಹಾಗೂ ಧರ್ಮ ನಿಷ್ಠೆಯ ಅರಿವು ನೀಡಿದವನಾಣೆ.
ಸೂಕ್ತ : 9
ಅದನ್ನು ನಿರ್ಮಲವಾಗಿಟ್ಟವನು ವಿಜಯಿಯಾದನು.
ಸೂಕ್ತ : 10
ಅದನ್ನು ಮಲಿನಗೊಳಿಸಿದವನು ಸೋತನು.
ಸೂಕ್ತ : 11
ಸಮೂದ್ ಜನಾಂಗದವರು ತಮ್ಮ ಅಹಂಕಾರದ ಕಾರಣ (ದೂತರನ್ನು) ತಿರಸ್ಕರಿಸಿದರು.
ಸೂಕ್ತ : 12
ಅವರಲ್ಲಿನ ತೀರಾ ದುಷ್ಟನೊಬ್ಬನು ಎದ್ದು ನಿಂತನು.
ಸೂಕ್ತ : 13
ಆಗ ಅಲ್ಲಾಹನ ದೂತರು - ಅಲ್ಲಾಹನ ಒಂಟೆ ಮತ್ತು ಅದರ ನೀರು ಕುಡಿಯುವ ಸರದಿಯ ಕುರಿತು ಎಚ್ಚರವಿರಲಿ - ಎಂದರು.
ಸೂಕ್ತ : 14
ಆದರೆ ಅವರು ಅವರ (ದೂತರ) ಮಾತನ್ನು (ಸುಳ್ಳೆಂದು) ತಿರಸ್ಕರಿಸಿದರು ಹಾಗೂ ಅದರ (ಒಂಟೆಯ) ಕಾಲುಗಳನ್ನು ಕಡಿದು ಬಿಟ್ಟರು. ಆಗ ಅವರ ಪಾಪದ ಕಾರಣ ಅವರ ಒಡೆಯನು ಅವರ ಮೇಲೊಂದು ಶಿಕ್ಷೆಯನ್ನು ಎರಗಿಸಿದನು ಹಾಗೂ ಅವರನ್ನು ನೆಲಸಮ ಗೊಳಿಸಿಬಿಟ್ಟನು.
ಸೂಕ್ತ : 15
ಅದರ ಪರಿಣಾಮವೇನಾದೀತು ಎಂದು ಅವನು ಅಂಜಲಿಲ್ಲ.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
...more
View all episodesView all episodes
Download on the App Store

Quran In KannadaBy Quran Kannada Podcast