Quran In Kannada

Surah 92 Al-Layl ಅಧ್ಯಾಯ 92: ಅಲ್ಲೈಲ್ (ಇರುಳು)


Listen Later

ಅಧ್ಯಾಯ 92: ಅಲ್ಲೈಲ್ (ಇರುಳು)
ಸೂಕ್ತ : 1
ರಾತ್ರಿಯಾಣೆ - ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ.
ಸೂಕ್ತ : 2
ಹಗಲಿನಾಣೆ - ಅದು ಬೆಳಗಿದಾಗ.
ಸೂಕ್ತ : 3
ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ.
ಸೂಕ್ತ : 4
ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ.
ಸೂಕ್ತ : 5
ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು.
ಸೂಕ್ತ : 6
ಮತ್ತು ಒಳಿತನ್ನು ಸಮರ್ಥಿಸಿದವನು -
ಸೂಕ್ತ : 7
- ಅವನ ಪಾಲಿಗೆ ನಾವು ಸರಳವಾದ ಮಾರ್ಗವನ್ನು ಸುಲಭ ಗೊಳಿಸುವೆವು.
ಸೂಕ್ತ : 8
ಮತ್ತು ಜಿಪುಣತೆ ತೋರಿದ ಹಾಗೂ ನಿರ್ಲಕ್ಷಿಸಿದವನು.
ಸೂಕ್ತ : 9
ಮತ್ತು ಒಳಿತನ್ನು ತಿರಸ್ಕರಿಸಿದವನು -
ಸೂಕ್ತ : 10
- ಅವನ ಪಾಲಿಗೆ ನಾವು ಕಠಿಣವಾದ ಮಾರ್ಗವನ್ನು ಸುಲಭಗೊಳಿಸುವೆವು.*
ಸೂಕ್ತ : 11
ಅವನು ಉರುಳಿ ಬಿದ್ದಾಗ ಅವನ ಸಂಪತ್ತು ಅವನ ಯಾವ ಕೆಲಸಕ್ಕೂ ಬಾರದು.
ಸೂಕ್ತ : 12
ದಾರಿ ತೋರುವ ಹೊಣೆಯು ಖಂಡಿತ ನಮ್ಮ ಮೇಲಿದೆ.
ಸೂಕ್ತ : 13
ಪರಲೋಕವೂ ಇಹಲೋಕವೂ ಖಂಡಿತ ನಮಗೇ ಸೇರಿವೆ.
ಸೂಕ್ತ : 14
ನಾನು ನಿಮಗೆ ಧಗಧಗಿಸುವ ಅಗ್ನಿಯ ಕುರಿತು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ.
ಸೂಕ್ತ : 15
ಭಾಗ್ಯಹೀನನು ಮಾತ್ರ ಅದರೊಳಗೆ ಪ್ರವೇಶಿಸುವನು -
ಸೂಕ್ತ : 16
- ಅವನು (ಸತ್ಯವನ್ನು) ತಿರಸ್ಕರಿಸಿದವನು ಹಾಗೂ ಅದರಿಂದ ಮುಖ ತಿರುಗಿಸಿ ಕೊಂಡವನು.
ಸೂಕ್ತ : 17
ಅಲ್ಲಾಹನು ಧರ್ಮ ನಿಷ್ಠನನ್ನು ಅದರಿಂದ ರಕ್ಷಿಸುವನು.
ಸೂಕ್ತ : 18
ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು (ಸನ್ಮಾರ್ಗದಲ್ಲಿ) ದಾನ ಮಾಡುತ್ತಾನೆ.
ಸೂಕ್ತ : 19
ಯಾರಿಗಾದರೂ ಮರುಪಾವತಿಸಬೇಕಾದ ಯಾವ ಋಣವೂ ಅವನ ಮೇಲಿರುವುದಿಲ್ಲ.
ಸೂಕ್ತ : 20
ಅವನು (ಮಾಡುವ ದಾನವೆಲ್ಲಾ) ಕೇವಲ ತನ್ನ ಪರಮೋನ್ನತ ಒಡೆಯನನ್ನು (ಅಲ್ಲಾಹನನ್ನು) ಮೆಚ್ಚಿಸುವುದಕ್ಕಾಗಿ ಮಾತ್ರವಾಗಿರುತ್ತದೆ.
ಸೂಕ್ತ : 21
ಮತ್ತು ಅವನು ಬಹು ಬೇಗನೇ ಸಂತೃಪ್ತನಾಗುವನು.
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
...more
View all episodesView all episodes
Download on the App Store

Quran In KannadaBy Quran Kannada Podcast