ಅಧ್ಯಾಯ 95: ಅತ್ತೀನ್ (ಅಂಜೂರ)
ಸೂಕ್ತ : 1
ಅಂಜೂರದಾಣೆ ಹಾಗೂ ಝೈತೂನ್‌ನ ಆಣೆ.
ಸೂಕ್ತ : 2
ಸೀನೀನ್ (ಸಿನಾಯ್) ಪರ್ವತದಾಣೆ.
ಸೂಕ್ತ : 3
ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ.
ಸೂಕ್ತ : 4
ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು.
ಸೂಕ್ತ : 5
ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು.
ಸೂಕ್ತ : 6
ವಿಶ್ವಾಸಿಗಳಾದವರು ಹಾಗೂ ಸತ್ಕರ್ಮಗಳನ್ನು ಮಾಡುವವರ ಹೊರತು - ಅವರಿಗೆ ಅಪಾರ ಪ್ರತಿಫಲವಿದೆ.
ಸೂಕ್ತ : 7
(ಮಾನವನೇ,) ಇಷ್ಟಾಗಿಯೂ ನೀನು ಪ್ರತಿಫಲದ ದಿನವನ್ನು ತಿರಸ್ಕರಿಸುವುದೇಕೆ?
ಸೂಕ್ತ : 8
ಎಲ್ಲ ತೀರ್ಪುಗಾರರಿಗಿಂತ ದೊಡ್ಡ ತೀರ್ಪುಗಾರನು ಅಲ್ಲಾಹನಲ್ಲವೇ?
(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran