ಮುಗ್ಧ ರೈತನೊಬ್ಬನು ರಾಜಕೀಯ ಕುತಂತ್ರಕ್ಕೆ ಬಲಿಯಾಗುವ ಸಂಕೀರ್ಣ ಚಿತ್ರಣ ಈ ಕತೆಯಲ್ಲಿದೆ. ಭಾಷಣ ಮನಸ್ಸಿಗೆ ಹಿತವಾಗುವುದು ವಿನಹ ಹಸಿದ ಹೊಟ್ಟೆ ತುಂಬಲಾರದು ಯುವ ಮುಗ್ಧ ರೈತ ಪಟ್ಟಣದ ಸಭೆಯೊಂದರಲ್ಲಿ ಕೇಳಿದ 'ಕಟ್ಟುವೆವು ನಾವು...' ಎಂಬ ಹಾಡಿಗೆ ಆಕರ್ಷಿತನಾಗಿ ಸೋರುವ ಮನೆ, ಮಡದಿಯನ್ನು ಮರೆತುಬಿಡುತ್ತಾನೆ. ಅಧಿಕಾರಿಗಳ, ರಾಜಕಾರಣಿಗಳ, ಕಾರ್ಯಕರ್ತರ, ಜ್ಯೋತಿಷಿಗಳ, ಕೈಗೊಂಬೆಯಾಗಿ ತನ್ನ ಅಸ್ತಿತ್ವವನ್ನು ಮರೆತುಬಿಡುತ್ತಾನೆ. ಎಲ್ಲಾ ವೇದಿಕೆಯಲ್ಲಿ ಹೆಂಚು, ಬಿದಿರುಗಳ ಕುರಿತು ಗಮನ ಸೆಳೆಯುತ್ತಾನೆ. ಪ್ರಾರಂಭದಲ್ಲಿ ಇವನ ಮಾತಿಗೆ ಮೆಚ್ಚುಗೆ ವ್ಯಕ್ತವಾದರೂ ತದನಂತರ ವೇದಿಕೆಯಿಂದ ಹೊರತಳ್ಳಲ್ಪಡುತ್ತಾನೆ. ಇದು ಕಥಾನಾಯಕನ ವಿಪರ್ಯಾಸವೇ ಸರಿ. ರೈತ ಮಗ್ನರಾಗಿರುವುದು ಮಾತ್ರವಲ್ಲ ಬದಲಿಗೆ ಬೇರೆಯವರ ಮೋಸ, ಕಪಟವನ್ನು ಅರ್ಥಮಾಡಿಕೊಳ್ಳುವುದರ ಮಟ್ಟಿಗಾದರೂ ಶಕ್ತನಾಗಬೇಕು.