ಕಥೆ ಖಜಾನೆ - ಕನ್ನಡ

ಅರಸರಾಯನ ಹಲ್ಲು ನೋವು


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್
ನಿರೂಪಕರು : ಬಸವರಾಜು ಟಿ.ಡಿ
ಸಂಪಾದಕರು : ಮನಿಷ್

ಕಾಡಿಗೆ ರಾಜನೇ ಆದರೂ ಸಿಂಹಕ್ಕೆ ಹಲ್ಲು ಉಜ್ಜುವುದು ತಪ್ಪಲಿಲ್ಲ. ಕಥೆ ಓದುವ ಮೂಲಕ ಸಿಂಹಕ್ಕೆ ಹಲ್ಲು ಉಜ್ಜುವುದನ್ನ ಹೇಳಿ ಕೊಟ್ಟವರು ಯಾರು ಹಾಗು ಏಕೆ ಎಂಬುದನ್ನ ತಿಳಿದುಕೊಳ್ಳಿ..

ಈ ಕಥೆಯ ಮೂಲಕ ಮಕ್ಕಳಲ್ಲಿ ಉತ್ತಮ ದೈನಂದಿನ ಅಭ್ಯಾಸಗಳನ್ನು ಮೂಡಿಸಬಹುದಲ್ಲದೇ ಮಾಂಸಾಹಾರಿ ಪ್ರಾಣಿಗಳು ಹಾಗೂ ಶಾಖಾಹಾರಿ ಪ್ರಾಣಿಗಳ ಬಗ್ಗೆ ತಿಳಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

  1. ಕಾಡಿನಲ್ಲಿ ವಾಸಿಸುವ ಹಾಗೂ ನಾಡಿನಲ್ಲಿ ವಾಸಿಸುವ ಪ್ರಾಣಿಗಳನ್ನು ಪಟ್ಟಿ ಮಾಡಲು ಹೇಳುವುದು.
  2. ಹಲ್ಲಿನ ನೋವುಂಟಾಗಲು ಕಾರಣಗಳನ್ನು ಚರ್ಚಿಸಿ.
  3. ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ನಿಮ್ಮ ಪೋಷಕರು ನಿಮಗೆ ನೀಡುವ ಸಲಹೆಗಳೇನು?
  4. ನಿಮ್ಮ ಹಲ್ಲುಗಳನ್ನು ನೀವು ಆರೋಗ್ಯವಾಗಿ ಕಾಪಾಡಿಕೊಂಡು ಹೋಗಲು ಏನೆಲ್ಲಾ ಕ್ರಮಗಳನ್ನು ಅನುಸರಿಸುತ್ತೀರಿ.
  5. ಮಕ್ಕಳ ದೈನಂದಿನ ಉತ್ತಮ ಅಭ್ಯಾಸಗಳ ಕುರಿತು ಚರ್ಚಿಸುವುದು.
  6. ದೈನಂದಿನ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳದೇ ಹೋದರೆ ಆಗುವ ಪರಿಣಾಮಗಳೇನೆಂದು ಚರ್ಚಿಸುವುದು.
  7. ಒಂದು ವೇಳೆ ಸಿಂಹದ ಸಹಾಯಕ್ಕೆ ಇಲಿ ಬಾರದೇ ಇದ್ದಿದ್ದರೆ ನಿರೀಕ್ಷಿಬಹುದಾದ ಪರಿಣಾಮಗಳೇನು?
  8. ಕಥೆಯಲ್ಲಿನ ಸಿಂಹಕ್ಕೆ ನೀವು ನೀಡುವ ಸಲಹೆಗಳೇನು?
  9. ಈ ಕಥೆಯಿಂದ ನೀವು ಏನನ್ನು ಕಲಿತಿರೀ?
     

ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಆರೊಗ್ಯ ಮತ್ತು ಸ್ವಚ್ಚತೆ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಸಹಾಯ - ಸಹಕಾರ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change