ಕಲಿಕೆಯ ನ್ಯೂನತೆಯನ್ನು ಗುರುತಿಸಲಾಗದ ಕಾರಣಕ್ಕೆ ಅಂತ ಮಕ್ಕಳು ಪೋಷಕರು ಮತ್ತು ಶಿಕ್ಷಕರರಿಂದ ಬೈಗುಳು ಪಡೆಯುತ್ತಾರೆ. ಕೆಲವು ಸಲ ಹೆತ್ತವರೂ ಮಕ್ಕಳಿಂದಾಗಿ ಶಿಕ್ಷಕರ ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಜೈವಿಕ ಕಾರಣಕ್ಕಾಗಿ ನಿರ್ದಿಷ್ಟ ಕಲಿಕೆಯಲ್ಲಿ ತೊಂದರೆ ಅನುಭವಿಸುವ ಮಕ್ಕಳು ಸುಖಾಸುಮ್ಮನೆ ಅವಮಾನಕ್ಕೊಳಗಾಗುವುದು ತೀರಾ ಸಾಮಾನ್ಯ ಎಂಬಂತಾಗಿದೆ. ಇದು ಅಂತಹ ಮಗುವಿನ ತಾಯಿಯೊಬ್ಬರ ಮಾತು.