ಲೇಖಕರು : ಸ್ಟೋರಿವೀವರ್ರಿಗಾಗಿ ಸೋರಿತ್ ಗುಪ್ತೋ
ನಿರೂಪಕರು : ಪ್ರದೀಪ್
ಸಂಪಾದಕರು : ಚಂದ್ರಶೇಖರ್
ಬಂಟಿ ಎಂಬ ಹುಡುಗಿಗೆ ಸೋಪು ಹಚ್ಚಿ ಸ್ನಾನ ಮಾಡುವುದು ಎಂದರೆ ಚೂರು ಇಷ್ಟವಿಲ್ಲ. ಬಂಟಿ ಒಂದು ರಾತ್ರಿ ಕನಸನ್ನು ನೋಡುತ್ತಾಳೆ. ಕನಸಿನಲ್ಲಿ ಅವಳು ಏನನ್ನು ನೋಡುತ್ತಾಳೆಂದು ತಿಳಿಯೋಣಾ ಬನ್ನೀ?
ಮಕ್ಕಳಿಗೆ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಮತ್ತು ಆರೋಗ್ಯದ ಬಗ್ಗೆ ಅರಿವುಂಟಾಗುವಂತೆ ಮಾಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
- ನೀವು ಸ್ನೇಹಿತರೊಡನೆ ಯಾವೆಲ್ಲಾ ಆಟಗಳನ್ನು ಆಡುತ್ತೀರ? ಎಲ್ಲಿ ಆಡುತ್ತೀರ?
- ಆಟವಾಡುವಾಗ ಸಾಮಾನ್ಯವಾಗಿ ಬಿಳಿ ಬಣ್ಣದ ಉಡುಪು ಅಥವಾ ಹೊಸ ಉಡುಪುಗಳನ್ನು ತೊಡದಂತೆ ಪೋಷಕರು ಸಲಹೆ ನೀಡುತ್ತಾರೆ. ಇದಕ್ಕೆ ಕಾರಣವೇನು?
- ಆಟವಾಡುವ ಮೊದಲು ಮತ್ತು ಆಟವಾಡಿದ ನಂತರ ನಿಮ್ಮ ದೇಹದಲ್ಲಿ ಆಗುವ ಬದಲಾವಣೆಗಳೇನು? ನಿಮ್ಮ ಅನುಭವವನ್ನು ತಿಳಿಸಿ.
- ಆಟವಾಡುವಾಗ ನಿಮ್ಮ ಬಟ್ಟೆಗಳು ಹೇಗೆ ಕೊಳಕಾಗುತ್ತವೆ?
- ಬಟ್ಟೆಗಳಂತೆ ನಿಮ್ಮ ದೇಹವೂ ಕೂಡ ಕೊಳಕಾಗುವ ಸಾದ್ಯತೆ ಇದೆಯೇ? ಹೇಗೆ?
- ದೇಹ ಅಥವಾ ಬಟ್ಟೆಗಳು ಕೊಳಕಾಗುವುದರಿಂದ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರುತ್ತದೆಯೇ ? ಏನೆಲ್ಲಾ ಪರಿಣಾಮಗಳು ಬೀರಬಹುದೆಂದು ಗುಂಪಿನೊಂದಿಗೆ ಚರ್ಚಿಸಿ.
- ಆಟವಾಡುವುದಕ್ಕೂ ಮುನ್ನ ನಿಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ನಿಮ್ಮ ದೇಹದ ಸ್ವಚ್ಛತೆಗಾಗಿ ನೀವು ಅನುಸರಿಸುತ್ತಿರುವ ಅಥವಾ ಅನುಸರಿಸಬಹುದಾದ ಮುಂಜಾಗ್ರತಾ ಕ್ರಮಗಳೇನು ? ಗುಂಪಿನಲ್ಲಿ ಚರ್ಚಿಸಿ ತಿಳಿಸಿ.
- ಆಡವಾಡಿ ಮರಳಿದ ನಂತರ ದೇಹವನ್ನು ಸ್ವಚ್ಛವಾಗಿಸಿಕೊಳ್ಳಲು ನೀವು ಅನುಸರಿಸಬೇಕಾದ ಕ್ರಮಗಳೇನು?
- ಆರೋಗ್ಯ ಮತ್ತು ಸ್ವಚ್ಛತೆಗಾಗಿ ನಿಮ್ಮ ಮನೆಯವರು ನಿಮಗೆ ಅನುಸರಿಸುವಂತೆ ನೀಡುವ ಸಲಹೆಗಳೇನು?
- ನಿಮ್ಮ ಕುಟುಂಬದಲ್ಲಿ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಪ್ರತಿನಿತ್ಯ ಅನುಸರಿಸುತ್ತಿರುವ ಅಭ್ಯಾಸಗಳು ಯಾವುವು?
- ನಿಮ್ಮ ಮನೆಯವರು ಸೂಚಿಸಿದರೂ ನಿಮಗೆ ಅನುಸರಿಸಲು ಕಷ್ಟವಾಗುವ ಅಥವಾ ಇಷ್ಟವಾಗದ ಅಭ್ಯಾಸವೇನು?
- ಕಣ್ಣಿಗೆ ಕಾಣದ ಕ್ರಿಮಿ-ಕೀಟಗಳು, ಅವುಗಳಿಂದ ಉಂಟಾಗುವ ಪರಿಣಾಮಗಳು ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
- ಆರೋಗ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ದೃಶ್ಯವನ್ನು ತರಗತಿಯಲ್ಲಿ ಪ್ರದರ್ಶಿಸಬಹುದು.
ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಆರೊಗ್ಯ ಮತ್ತು ಸ್ವಚ್ಚತೆ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಕುಟುಂಬ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ