ಭಾಗ 3: ದೇವರ ಅದ್ವಿತೀಯ ಗುಣಲಕ್ಷಣಗಳು
ಕರ್ತನ ಪವಿತ್ರ ಹೆಸರಿಗೆ ಮಹಿಮೆಯುಂಟಾಗಲಿ. ಕರ್ತನ ಹೆಸರಿನಲ್ಲಿ ನಿಮ್ಮೆಲ್ಲರಿಗೂ ವಂದನೆಗಳು. ದೇವರಲ್ಲಿ ಮಾತ್ರ ಕಂಡು ಬರುವ ಗುಣಲಕ್ಷಣಗಳಲ್ಲಿ ಐದು ಪ್ರಮುಖವಾದುವುಗಳನ್ನು ಗಮನಿಸೋಣ: 1. ನಿತ್ಯನು, 2. ಮಾರ್ಪಡದವನು, 3. ಸರ್ವಶಕ್ತನು, 4. ಸರ್ವಜ್ಞಾನಿ, 5. ಸರ್ವವ್ಯಾಪಿ. ಸ್ನೇಹಿತರೇ, ಈ ಐದರಲ್ಲಿ ಒಂದು ಕೂಡ ದೇವರಲ್ಲಿ ಅಲ್ಲದೆ, ಇತರ ಯಾರಲ್ಲೂ ಕಂಡು ಬರುವುದಿಲ್ಲ. ದೇವರ ವಾಕ್ಯದಿಂದ ಈ ಗುಣಲಕ್ಷಣಗಳನ್ನು ಇನ್ನೂ ಆಳವಾಗಿ ನೋಡೋಣ:
1. ನಿತ್ಯನು - ಕೀರ್ತನೆ 90:2 - "ಬೆಟ್ಟಗಳು ಉಂಟಾಗುವದಕ್ಕಿಂತ, ಭೂಮಿಯೂ ಅದರ ದೇಶಗಳೂ ನಿರ್ಮಾಣವಾಗುವದಕ್ಕಿಂತ ಮುಂಚಿನಿಂದ ಯುಗಯುಗಾಂತರಗಳಲ್ಲಿಯೂ ನೀನೇ ದೇವರು." ದೇವರಿಗೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ. ನಮ್ಮ ಆತ್ಮಗಳಿಗೂ ಅಂತ್ಯವಿಲ್ಲ. ಆದರೆ ನಮ್ಮೆಲ್ಲರಿಗೂ ಒಂದು ಆರಂಭ ಉಂಟು. ನಾವು ಈ ಲೋಕದಲ್ಲಿ ತಾಯಿಯ ಗರ್ಭದಲ್ಲಿ ಉಂಟಾಗುವುದಕ್ಕಿಂತ ಮುಂಚೆ ನಾವು ಎಲ್ಲಿದ್ದೆವು? ಅದಕ್ಕಿಂತ ಮುಂಚೆ ನಾವು ಎಲ್ಲೂ ಇರಲಿಲ್ಲ. ನಮ್ಮ ಅಸ್ಥಿತ್ವವೇ ಇರಲಿಲ್ಲ. ಆದ್ದರಿಂದ ಮನುಷ್ಯರಾದ ನಾವು ಯಾರೂ ದೇವರಲ್ಲ. ಅದಲ್ಲದೆ, ಆದಿಕಾಂಡ 1:1 - "ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು" - ಭೂಮಿಯೂ, ಭೂಮಿಯ ಮೇಲಿರುವ ಎಲ್ಲವೂ, ಆಕಾಶವೂ, ಆಕಾಶದಲ್ಲಿರುವ ಎಲ್ಲವೂ - ಸೂರ್ಯ, ಚಂದ್ರ, ನಕ್ಷತ್ರಗಳು, ಗೃಹಗಳು ಇತ್ಯಾದಿ - ಇವುಗಳನ್ನೆಲ್ಲ ದೇವರು ಉಂಟು ಮಾಡುವುದಕ್ಕಿಂತ ಮುಂಚೆ ಇವು ಯಾವುದೂ ಅಸ್ಥಿತ್ವದಲ್ಲಿ ಇರಲಿಲ್ಲ. ಅವುಗಳಿಗೂ ಒಂದು ಆರಂಭ ಉಂಟು. ಆದರೆ ದೇವರನ್ನು ಯಾರೂ ಉಂಟು ಮಾಡಲಿಲ್ಲ. ಆತನು ಅಸ್ಥಿತ್ವದಲ್ಲಿ ಇಲ್ಲದೆ ಇದ್ದ ಒಂದು ಕಾಲವೂ ಇಲ್ಲ. ಆತನು ಯಾವಾಗಲೂ ಇದ್ದವನು, ಈಗಲೂ ಇದ್ದಾನೆ, ಎಂದೆಂದಿಗೂ ಇರುತ್ತಾನೆ. ಸಮಸ್ತಕ್ಕಿಂತ ಮುಂಚೆ ಆತನೇ ಇದ್ದವನು. ಆತನಿಂದಲೇ ಸಮಸ್ತವೂ ಉಂಟಾಗಿದ್ದು. ಆಗ ಒಬ್ಬರು ಕೇಳಬಹುದು - ಹಾಗಿದ್ದಲ್ಲಿ ಕರ್ತನಾದ ಯೇಸು ಕ್ರಿಸ್ತನು ಕೂಡ ದೇವರಲ್ಲವೇ? ಆತನು ಈ ಲೋಕದಲ್ಲಿ ಹುಟ್ಟಲಿಲ್ಲವೇ? ಸ್ನೇಹಿತರೇ, ಮುಂದಿನ ಭಾಗಗಳಲ್ಲಿ ನಾನು ಕರ್ತನಾದ ಯೇಸುವಿನ ಕುರಿತು ಇನ್ನೂ ಆಳವಾಗಿ ವಿವರಿಸುತ್ತೇನೆ. ಆದರೆ ಇಲ್ಲಿನ ಸಂದರ್ಭದಲ್ಲಿ, ದೇವರ ವಾಕ್ಯ ಹೇಳುವುದೇನಂದರೆ - ದೇವರು ನಮ್ಮ ಪಾಪಗಳ ಪರಿಹಾರಕ್ಕೋಸ್ಕರ ಮನುಷ್ಯನ ರೂಪವನ್ನು ಧರಿಸಿದನು. ಅದರ ಮುಂಚೆಯೂ, ಅದರ ನಂತರವೂ ಆತನು ಸಂಪೂರ್ಣ ದೇವರಾಗಿಯೇ ಇದ್ದನು. ಆತನು ಉಂಟಾಗಲಿಲ್ಲ. ಆತನು ಮನುಷ್ಯನ ರೂಪವನ್ನು ನಮಗೋಸ್ಕರ ಧರಿಸಿಕೊಂಡನು. ಆ ಸಂದರ್ಭದಲ್ಲಿ ಆತನಿಗೆ "ಯೇಸು" (ಅಂದರೆ "ರಕ್ಷಕ") ಎಂಬ ಹೆಸರು ಇಡಲ್ಪಟ್ಟಿತು. ಆದ್ದರಿಂದ ಆತನು ಸಂಪೂರ್ಣ ದೇವರಾಗಿದ್ದಾನೆ. ಆದರೆ ಅದೇ ವೇಳೆ ಆತನು ಸಂಪೂರ್ಣ ಮನುಷ್ಯನಾಗಿಯೂ ಇದ್ದಾನೆ. ಆತನ ಮನುಷ್ಯತ್ವಕ್ಕೆ ಒಂದು ಆರಂಭವುಂಟು. ಆದರೆ ಆತನ ದೈವತ್ವಕ್ಕೆ ಯಾವ ಆರಂಭವೂ ಇಲ್ಲ. ಆತನು ನಿತ್ಯನಾದ ದೇವರಾಗಿದ್ದಾನೆ.
*2. ಮಾರ್ಪಡದವನು* - ಮಲಾಕಿ 3:6 - "ಆದರೂ ಯೆಹೋವನಾದ ನಾನು ಮಾರ್ಪಟ್ಟಿಲ್ಲ..." ಆತನ ಗುಣಲಕ್ಷಣಗಳಿಗೆ, ಆತನ ಸ್ವಭಾವಕ್ಕೆ, ಆತನ ಅಸ್ಥಿತ್ವಕ್ಕೆ ಇಂದಿಗೂ ವೆತ್ಯಾಸ ಬರುವುದಿಲ್ಲ. ಆತನು ದೇವರಾಗಿರುವ ಆ ಅವಸ್ಥೆಗೆ ಯಾವ ವೆತ್ಯಾಸವೂ ಬರುವುದಿಲ್ಲ. ಆತನು ಮನುಷ್ಯನಾಗಿ ಮಾರ್ಪಡುವುದಕ್ಕೆ ಸಾಧ್ಯವಲ್ಲ. ಕೆಲವರು ನಂಬುವುದೇನೆಂದರೆ ದೇವರು ಮನುಷ್ಯನಾಗಿ ಮಾರ್ಪಟ್ಟು ಅವತಾರಗಳಾಗಿ ಲೋಕದಲ್ಲಿ ಬಂದಿದ್ದಾನೆ. ಆ ಅವತಾರಗಳು ಮನುಷ್ಯರಾಗಿ ಇರುವ ಸಮಯದಲ್ಲಿ ದೇವರಾಗಿರಲಿಲ್ಲ. ಆ ರೀತಿ ದೇವರು ಮಾರ್ಪಡುವುದು ಇಂದಿಗೂ ಸಾಧ್ಯವಲ್ಲ. ಹಾಗಾದರೆ ಕರ್ತನಾದ ಯೇಸು ಕೂಡ ದೇವರಲ್ಲವೇ? ಮುಂಚೆ ಹೇಳಿದಂತೆ, ಕರ್ತನಾದ ಯೇಸುವಿನ ಸಂದರ್ಭದಲ್ಲಿ, ದೇವರು ಮನುಷ್ಯನಾಗಿ ಮಾರ್ಪಡಲಿಲ್ಲ - ಆತನು ಮನುಷ್ಯನ ರೂಪವನ್ನು ಧರಿಸಿದನು. ಆ ರೀತಿ ಮನುಷ್ಯನ ರೂಪವನ್ನು ಧರಿಸಿದ ನಂತರವೂ ಆತನು ಸಂಪೂರ್ಣ ದೇವರಾಗಿಯೇ ಇದ್ದನು. ಒಂದೇ ವೇಳೆ ಆತನು ಪೂರ್ಣ ದೇವರೂ, ಪೂರ್ಣ ಮನುಷ್ಯನೂ ಆಗಿದ್ದಾನೆ. ಆದರೆ ಆತನಲ್ಲದೆ ಇತರ ಎಲ್ಲರೂ ಮಾರ್ಪಡುವವರಾಗಿದ್ದರೆ, ಇತರ ಎಲ್ಲವೂ ಮಾರ್ಪಡುವವುಗಳಾಗಿವೆ. ಮನುಷ್ಯರು, ಇತರ ಪ್ರಾಣಿಗಳು, ಗಿಡ-ಮರಗಳು, ನದಿಗಳು, ಬೆಟ್ಟಗಳು, ಸಮುದ್ರಗಳು, ಸೂರ್ಯ, ಚಂದ್ರ, ನಕ್ಷತ್ರಗಳು, ಗೃಹಗಳು ಇತ್ಯಾದಿ - ಇವುಗಳೆಲ್ಲವೂ ಮಾರ್ಪಡುತ್ತವೆ. ಇಂದಿಗೂ ಮಾರ್ಪಡದೆ ಇರುವಂತವನು ದೇವರು ಮಾತ್ರವೇ.
3. ಸರ್ವಶಕ್ತನು - ಆದಿಕಾಂಡ 17:1 - "...ಯೆಹೋವನು ಅವನಿಗೆ ದರ್ಶನಕೊಟ್ಟು - ನಾನು ಸರ್ವಶಕ್ತನಾದ ದೇವರು..." ಆತನಿಗೆ ಏನನ್ನು ಮಾಡುವುದಕ್ಕೂ ಇತರ ಯಾರ ಸಹಾಯವೂ ಬೇಕಾಗಿಲ್ಲ; ಯಾವ ವ್ಯಕ್ತಿಯೂ ಅಗತ್ಯವಿಲ್ಲ, ಯಾವ ವಸ್ತುವೂ ಅಗತ್ಯವಿಲ್ಲ. ನಾವು ಒಂದು ಮನೆ ಕಟ್ಟಬೇಕೆಂದರೆ ನಮಗೆ ಇಟ್ಟಿಗೆಗಳು, ಸಿಮೆಂಟ್, ಮರಳು, ಕಬ್ಬಿಣ ಇತ್ಯಾದಿ ಬೇಕಾಗುತ್ತೆ. ಆದರೆ ದೇವರ ವಾಕ್ಯ ಹೇಳುವುದು - ಇಬ್ರಿಯರಿಗೆ 11:3 "ಲೋಕಗಳು ದೇವರ ಮಾತಿನಿಂದ ನಿರ್ಮಿತವಾದವೆಂದು ನಂಬಿಕೆಯಿಂದಲೇ ನಾವು ತಿಳಿದುಕೊಂಡು ಕಾಣಿಸುವ ಈ ಜಗತ್ತು ದೃಶ್ಯ ವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ." - ದೇವರು ಭೂಮಿಯೂ, ಆಕಾಶವೂ, ಸಮಸ್ತವನ್ನೂ ಶೂನ್ಯದಿಂದ ಉಂಟು ಮಾಡಿದನು; ತನ್ನ ಶಬ್ದದ ಶಕ್ತಿಯಿಂದ ಅವುಗಳನ್ನೆಲ್ಲಾ ಉಂಟು ಮಾಡಿದನು. ಈ ಗುಣಲಕ್ಷಣವು ಇತರ ಯಾರಲ್ಲೂ ಇಲ್ಲ. ನಮ್ಮೆಲ್ಲರಿಗೂ ಇತರ ವ್ಯಕ್ತಿಗಳ, ಇತರ ವಸ್ತುಗಳ ಸಹಾಯ ಬೇಕಾಗುತ್ತೆ. ದೇವರಿಗೆ ಮಾತ್ರವೇ ಯಾರ ಸಹಾಯವೂ ಬೇಡ. ಕರ್ತನಾದ ಯೇಸುವಿಗೆ ತನ್ನ ದೈವತ್ವದಲ್ಲಿ ಇತರ ಯಾರ ಸಹಾಯವೂ ಬೇಕಾಗಿರಲಿಲ್ಲ. ಆತನು ನಮಗೋಸ್ಕರವಾಗಿ ಸಾಯಲು ಸ್ವಂತವಾಗಿ ಒಪ್ಪಿಸಿಕೊಟ್ಟನು; ಸತ