ಶಾಲೆ, ಅಂಗನವಾಡಿ ಮತ್ತು ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ, ಘನ ತ್ಯಾಜ್ಯ ವರ್ಗೀಕರಣ, ಸಂಸ್ಕರಣೆ ಪ್ರಕ್ರಿಯೆಗಳಿಂದ, ಮರು ಬಳಕೆಯ ಅವಕಾಶಗಳಕುರಿತು ಒಕ್ಕೂಟಗಳ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಮನೋಧೋರಣೆ ಧನಾತ್ಮಕವಾಗಿಸಲು ಸಾಮರ್ಥ್ಯಾಭಿವೃದ್ಧಿ ಮಾಡುವುದು, ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗೆ ತೊಡಗಿಸುವುದರಿಂದ ಉದ್ಯಮಶೀಲತೆ ವೃದ್ಧಿಸಲು ನೆರವಾಗುವುದು. ತ್ಯಾಜ್ಯ ಸಂಗ್ರಹಣೆಯ ವಾಹನ ಚಾಲಕರಾಗಿ ಮಹಿಳೆಯರು ಭಾಗವಹಿಸುವಂತೆ ಮಾಡುವುದರಿಂದ , ಘನತೆಯ ಬದುಕು ಸಾಧ್ಯ ಎನ್ನುವುದನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರು ಅಭಿಪ್ರಾಯಿಸಿದ್ದಾರೆ.