ಕಥೆ ಖಜಾನೆ - ಕನ್ನಡ

ಹುಲಿ ಬಂತು ಹುಲಿ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಸೆಜಲ್ ಮೆಹ್ತಾ
ನಿರೂಪಕರು : ವಸಂತ್ ಕುಮಾರ್ ಡಿ
ಸಂಪಾದಕರು : ಪ್ರಸಾದ್ ಕೆ.ವಿ

ಹುಲಿರಾಯ ಕಾಡಿಗೆ ಬಂದಿದ್ದು ಅದು ಹೇಗೋ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಗೊತ್ತಾಯಿತು! ಆಗ ಅವೆಲ್ಲವೂ ಹೇಗೆ ಮಾತ್ನಾಡಿದ್ವು ಅಂಥಾ ತಿಳ್ಕೋಬೇಕಾ ಹಾಗಿದ್ರೆ ಈ ಕಥೆ ಕೇಳಿ.

ಈ ಕಥೆಯ ಮೂಲಕ ಮಕ್ಕಳಿಗೆ ಕಾಡಿನ ವಿವಿಧ ರೀತಿಯ ಪ್ರಾಣಿಗಳ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದು ಅಲ್ಲದೇ ಕಾಡಿನಲ್ಲಿ ಪ್ರಾಣಿಗಳಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅವುಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಹಾಗೂ ಇತರೆ ಪ್ರಾಣಿಗಳನ್ನು ಎಚ್ಚರಿಸುವ ರೀತಿಯನ್ನು ತಿಳಿಸಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

  1. ಕಾಡಿನ ಪ್ರಾಣಿಗಳ ಬಗ್ಗೆ ಚರ್ಚಿಸಿ, ಮಕ್ಕಳಿಗೆ ಪರಿಚಯವಿರುವ ಪ್ರಾಣಿಗಳ ಕೂಗುವಿಕೆಯ ಶಬ್ದದಗಳನ್ನು ಅನುಕರಿಸಲು ಹೇಳಬಹುದು
  2. ಕಾಡಿನಲ್ಲಿನ ವಿವಿಧ ಪ್ರಾಣಿಗಳ ದೈನಂದಿನ ಜೀವನ ಹಾಗೂ ಬದುಕಲು ಅನಿವಾರ್ಯವಾದ ಜೀವನ ಕೌಶಲ್ಯಗಳ ಕುರಿತು ಚರ್ಚಿಸಬಹುದು
  3. ಸಿಂಹ ಹಾಗೂ ಹುಲಿಯ ಗುಣಲಕ್ಷಣಗಳನ್ನ ಪಟ್ಟಿ ಮಾಡಿ ಎರಡನ್ನೂ ಹೋಲಿಸಿದಾಗ ಕಾಡಿನ ರಾಜನೆಂದು ಕರೆಸಿಕೊಳ್ಳಲು ಯಾರು ಯೋಗ್ಯರೆಂಬ ಪ್ರಶ್ನೆಗೆ ಮಕ್ಕಳಲ್ಲಿ ಎರಡು ಗುಂಪುಗಳನ್ನು ಮಾಡಿ ವಾಗ್ವಾದ ನಡೆಸಬಹುದು
  4. ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಅವಲಂಬಿಸಿರುವ ಆಹಾರ ಚಕ್ರದ ಕುರಿತಂತೆ ಮಕ್ಕಳು ಪರಿಸರದಲ್ಲಿ ಗಮನಿಸಿರುವ ಅಂಶಗಳನ್ನು ತರಗತಿಯಲ್ಲಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು.
  5. ಪ್ರತಿನಿತ್ಯ ತಮ್ಮ ಆಹಾರಕ್ಕಾಗಿ ಹಾಗೂ ಜೀವ ಉಳಿಸಿಕೊಳ್ಳಲು ಪ್ರಾಣಿಗಳು ಮಾಡುವ ಸಾಹಸಗಳ ಕುರಿತಂತೆ ಚರ್ಚಿಸಬಹುದು.
     

ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಜೀವನ ಕೌಶಲ್ಯ,ಪರಿಸರ ಮತ್ತು ವಾತಾವರಣ,ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change