Procrastination. ಅಂದ್ರೆ "ಮಾಡಿದ್ರೆ ಆಯ್ತು ಬಿಡು ಗುರು.ಅರ್ಜಂಟೇನಿದೆ?" ಅನ್ಕೊಂಡು ಮುಂದೂಡೋ ಚಟ. ಎಸ್ ಇದೊಂದು ಚಟಾನೆ. ಅಷ್ಟೇ ಅಲ್ಲ,ನಿಮಗೆ ನೀವೇ ಮಾಡಿಕೊಳ್ಳುವ ದೊಡ್ಡ ದ್ರೋಹ. ನಿಮ್ ಬೆನ್ನಿಗೆ ನೀವೇ ಹಾಕಿಕೊಳ್ಳುತ್ತಿರೋ ಚೂರಿ. ನಿಮ್ ಬದುಕಿಗೆ ನಿಮ್ಮ ಕೈಯಾರೆ ಇಟ್ಟುಕೊಳ್ಳುತ್ತಾ ಇರೋ ಬೆಂಕಿ!
ಡಿಯರ್ ಫ್ರೆಂಡ್ಸ್. ಯಾವನೋ ಹುಡುಗ ಅಥವಾ ಯಾವಳೋ ಹುಡುಗಿ ಕೈ ಕೊಟ್ಟು ಹೋದಾಗ ಅಥವಾ ಕ್ಲೋಸ್ ಫ್ರೆಂಡಗಳೇ ಮಿತ್ರದ್ರೋಹ ಮಾಡಿದಾಗಾ, ಅಯ್ಯೋ ನನ್ಗೆ ಮೋಸ ಆಯ್ತು. ಅಯ್ಯೋ ನನ್ಗೆ ಹಾಗಾಯಿತು. ಅಯ್ಯೋ ನನಗೆ ಹೀಗ್ ಆಯ್ತು ಅಂತ ಊರೆಲ್ಲಾ ಬೊಬ್ಬೆ ಹೊಡೀತಾ ಗೊಳೋ ಅಂತ ರಾದ್ಧಾಂತಾ ಮಾಡ್ತೀರಿ. ಅದ್ಯಾವುದೋ ಯೂಸ್ಲೆಸ್ ಫೆಲೋಗಾಗಿ ಅಮೂಲ್ಯವಾದ ಕಣ್ಣೀರ್ ವೇಸ್ಟ್ ಮಾಡ್ತೀರಿ. ತಿಂಗಳಲ್ಲ, ವರ್ಷಾನುಗಟ್ಟಲೆ ಅವರ ನೆನಪಿನಲ್ಲಿ
ಅವರು ಮಾಡಿದ್ದು ದ್ರೋಹ ಯಾಕೆ ಹೇಳಿ?
ಯಾಕಂದ್ರೆ "ನಾನು ನೀನು ಸೇರಿ ಅದು ಇದು ಏನೇನೋ ಮಾಡೋಣ" ಅಂತ ಕನಸು ಕಟ್ಟಿ ಇವತ್ತು ಓಡಿಹೋದರು.
ಹಾಗೇನೆ, ಅದನ್ನ ಮಾಡ್ತೀನಿ ಇದನ್ನ ಮಾಡ್ತೀನಿ ಅಂತ ನಿಮಗೆ ನೀವೇ ಹೇಳ್ಕೊಂಡು, ಈಗ ಏನು ಮಾಡ್ದೆ, ಮುಂದೂಡುತ್ತಾ ಕುಂತ್ರೆ ಅದು ದ್ರೋಹ ಅಲ್ವಾ? ನಿಮ್ಮ ಮನಸ್ಸಿಗೆ ಕೊಟ್ಟ ಮಾತನ್ನು ನೀವು ತಪ್ಪಿದಂತೆ ಅಲ್ವಾ? ನಿಮ್ಮ ಆತ್ಮಸಾಕ್ಷಿಗೆ ನೀವು ದ್ರೋಹ ಬಗೆದಂತೆ ಅಲ್ವಾ?
;Legendary Epic Heroic | Heroic by Alex-Productions | https://onsound.eu/
Music promoted by https://www.chosic.com/free-music/all/
Creative Commons CC BY 3.0
https://creativecommons.org/licenses/by/3.0/