Kelirondu Katheya  ಕೇಳಿರೊಂದು ಕಥೆಯ

Kelirondu Katheya ಕೇಳಿರೊಂದು ಕಥೆಯ

By Kelirondu Katheya TeamKids & FamilyStories for Kids
Download on the App Store

Kelirondu Katheya ಕೇಳಿರೊಂದು ಕಥೆಯ episodes

  • Ep112 - [ ವ್ಯಕ್ತಿ ಪರಿಚಯ ] ಮೇರಿ ಕೋಮ್

    "ವ್ಯಕ್ತಿ ಪರಿಚಯ " ಸರಣಿಯ  ಮೊದಲನೇ ಕಂತು .  ಪ್ರಸಿದ್ಧ ವ್ಯಕ್ತಿಗಳ ಜೀವನದ ತುಣುಕುಗಳನ್ನು   ಮಕ್ಕಳಿಗೆ ಅವರದೇ  ರೀತಿಯಲ್ಲಿ  ತಿಳಿ ಹೇಳುವ ಪ್ರಯತ್ನ  ಇದು .  

    ಈ ಸಲದ ವ್ಯಕ್ತಿ ಪ್ರಪಂಚದೆಲ್ಲೆಡೆ "Confident Mary " ಅಂತಲೇ ಕರೆಸಿಕೊಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ . 

    ಮೇರಿ ಬಾಕ್ಸಿಂಗ್ ನಲ್ಲಿ  ಎಷ್ಟು ಪ್ರಸಿದ್ದರೋ ಅವರ ಹಿನ್ನಲೆ  ಕೂಡ ಅಷ್ಟೇ ರೋಚಕವಾದದ್ದು . 

    http://kelirondukatheya.org/stories/ep112 ರಲ್ಲಿ ಮೇರಿ ಅವರ  ಕೆಲವು  ಚಿತ್ರಗಳನ್ನೂ , ಅವರ  ಬಗ್ಗೆ ಇನ್ನೂ  ಕೆಲವು ವಿಷಯಗಳನ್ನು ತಿಳಿದುಕೊಳ್ಳಬಹುದು . 

    6 min
  • Ep111 - ಸೂರ್ಯ, ಚಂದ್ರ, ಮತ್ತು ಸಮುದ್ರಗಳ ಕತೆ

    ಸೂರ್ಯ ಚಂದ್ರರು ಒಂದು  ಕಾಲದಲ್ಲಿ  ನಮ್ಮ  ನಿಮ್ಮ  ಥರ  ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ?  ಹೌದು , ಸೂರ್ಯ ಚಂದ್ರರು ಮನುಷ್ಯರ ಥರ  ಮನೆಯಲ್ಲಿ  ಇರ್ತಿದ್ರು ಅಂತ  ಆಫ್ರಿಕನ್ನರು  ನಂಬುತ್ತಾರಂತೆ . 

    ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ  ಇರ್ತಾರೆ ? ತಿಳಿಯೋಕೆ , ಈ ಕತೆ  ಕೇಳಿ . 

    6 min
  • Ep110 - ಸಿಡುಕ ಸಿದ್ದ ಹಾಗೂ ಗುಹೆಯ ಮನುಷ್ಯ

    ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ.  ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ.

     

    ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.

    14 min
  • Repeat - ಪಾತ್ರೆ ಮರಿ ಇಟ್ಟ ಕತೆ

    ಕೇಳಿರೊಂದು  ಕಥೆಯ  ಸರಣಿಯ  ಕತೆಗಳಲ್ಲಿ  ನಾಸ್ರುದ್ದೀನ್  ಹೊಡ್ಜಾನ ಕತೆಗಳು ಅತಿ  ಜನಪ್ರಿಯ.  2019 ರಲ್ಲಿ ಪ್ರಕಟವಾಗಿದ್ದ  ಈ ಕತೆಯ ಮರು  ಪ್ರಸಾರ . 

    ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ  ? 

    ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ  . 

     

    7 min
  • Ep109 - ಹಸು ಮತ್ತು ನೊಣ

    ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ  ( Pink Eye ) ಬರುವುದು ಸಹಜವಾದರೂ ,  ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ .  !

     

    8 min
  • Ep108 - ಬಾವಲಿಗಳು ರಾತ್ರಿಯಷ್ಟೇ ಹೊರಗೇಕೆ ಬರುತ್ತವೆ?

    ಬಾವಲಿ ( Bat ) ವಿಚಿತ್ರ  ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ . 

    ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ  ತರಂಗಗಳ ನೆರವಿನಿಂದ ದಾರಿ , ಊಟ  ಹುಡುಕುತ್ತವೆ  .

    ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ  ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ .  

    ಕೇಳೋಣ ಬನ್ನಿ . 

     

    6 min
  • [ ವಿಶೇಷ ] - ದೀಪಾವಳಿ ಹಬ್ಬ

    ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ .  

    ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ . 

    ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ  ಮೂರು ಕತೆಗಳನ್ನು  ಕೇಳೋಣ .

     

     

    8 min
  • Ep107 - ಗುಡುಗು ಮತ್ತು ಸಿಡಿಲು

    ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ .  ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ .  ಆದರೆ , ಸಾವಿರಾರು ವರ್ಷಗಳ ಹಿಂದೆಯೇ  ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ ,  ಸಿಡಿಲನ್ನು ಚೂಟಿ ಟಗರಿಗೂ ,  ಗೂಡುಗನ್ನು  ಮಗನನ್ನು ಸರಿ ಹಾದಿಗೆ  ತರುವ ಅಮ್ಮನಿಗೂ  ಹೋಲಿಸುವ  ಮೂಲಕ ಕೇಳುವುದಕ್ಕೆ  ವಿಶಿಷ್ಟ  ಅನುಭವ  ಕೊಡುತ್ತದೆ . 

     

    Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs.  A unique story. 

    7 min
  • Ep106 - ಸುಳ್ಳು ಹೇಳದಿರುವ ಮನುಷ್ಯ

    ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ  ಮನುಷ್ಯ  ಒಬ್ಬ  ಬದುಕಿದ್ದ  ಅಂದರೆ ಆಶ್ಚರ್ಯ  ಆಗುತ್ತೆ  ಅಲ್ವಾ ? 

    ಈ ಕತೆಯಲ್ಲಿ ಆ ಮನುಷ್ಯನನ್ನ  ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ 

    7 min
  • Ep105 - ಸಿಂಹವನ್ನು ಸೋಲಿಸಿದ ತೋಳ ( ಉತ್ತರ ಕರ್ನಾಟಕ ಶೈಲಿ)

    ಕಳೆದ  ವಾರ ಇದೇ  ಕತೆಯ ಸರಳ  ಗನ್ನಡ  ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ . 

    ನೀವೂ , ನಾವೂ ಕೇಳಿ  ಮಜಾ ತಗಳ್ಳೋಣಾಂತ ? ಏನಂತೀರಿ ? 

    7 min

About Kelirondu Katheya ಕೇಳಿರೊಂದು ಕಥೆಯ

From the publisher's feed

Kannada Stories for children.