ಬೆರಗಿನ ಕಣ್ಣುಗಳಿಂದ, ನಿತ್ಯದ ಅನುಭವಗಳಿಂದ, ಒಡನಾಟದಿಂದ; ಪ್ರಶ್ನೆಗಳು,ಪ್ರಯೋಗಗಳು, ನಿಖರಊಹೆಗಳನ್ನು ತರ್ಕದ ಮೂಸೆಯಲ್ಲಿ ಪರಿಕ್ಷಿಸಿ ನೋಡುವುದರಿಂದ ನಾವು ಜಗತ್ತನ್ನು ಅರಿಯುತ್ತೇವೆ. ಹೀಗೆ ಪಡೆದ ಅರಿವನ್ನು ಭಾಷೆಯ ಹಂದರದಲ್ಲಿ ಸಂರಚಿಸಿಕೊಳ್ಳುತ್ತೇವೆ. ಆಪ್ತವಾದ ಶ್ರವ್ಯಾನುಭವದ ಮೂಲಕ ಈ ಕೌತುಕಕ್ಕೆ ಕಿವಿಯರಳಿಸುವಂತೆ ಮಾಡುವುದಷ್ಟೇ ಈ ಧ್ವನಿಮುದ್ರಿಕೆಗಳ ಕೆಲಸ.. ಉಳಿದಿದ್ದು ನಿಮ್ಮ ಬುದ್ಢಿಗೆ..ನಿಮ್ಮ ಭಾವಕ್ಕೆ