ಕನ್ನಡದ ನುಡಿಯೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಏಕಶಿಲೆಯಂತಹ ಭಾಷೆಯಲ್ಲ. ಹಾಗೆ ನೋಡಿದರೆ, ಕನ್ನಡವೆಂಬುದು ಒಂದೇ ಒಂದು ಭಾಷೆಯೂ ಅಲ್ಲ. ಈ ಮಾತನ್ನು ಎಲ್ಲ ಭಾಷೆಗಳಿಗೂ ಅನ್ವಯಿಸಬಹುದು. ಹಲವು ಆಡುರೂಪುಗಳು, ಹತ್ತಾರು ಭಾಷೆಗಳಿಂದ ಎರವಲು ಪಡೆದ ಪದಗಳು, ಹಲವು ಬಗೆಯ ಧ್ವನಿ ಸಂಚಾರಗಳು, ಭಿನ್ನ ದೇಹಭಾಷೆಗಳು ಹೀಗೆ, ಕನ್ನಡಕ್ಕೆ ದಕ್ಕಿರುವ ಬಹು ಆಯಾಮಗಳ ಚೆಂದವನ್ನು ಕನ್ನಡ ಮಾಸ ನವೆಂಬರಿನಲ್ಲಿ ಟೀಚರ್ ಪತ್ರಿಕೆ ಸಂಭ್ರಮಿಸುತ್ತದೆ. ಕವಿಯತ್ರಿ ಸುಧಾ ಆಡುಕಳ ಅವರ ಹವ್ಯಕ ಕನ್ನಡದ ಬರೆಹಕ್ಕೆ ಶಿಕ್ಷಕಿ, ಬರೆಹಗಾರ್ತಿ ಪ್ರತಿಮಾ ಕೋಮಾರ್ ದನಿಯಾಗಿದ್ದಾರೆ