ಕನ್ನಡದ ಬದುಕೆಂದರೆ ಒಂದು ಭಾಷಿಕ ಸಮುದಾಯವಷ್ಟೇ ಅಲ್ಲ. ಕನ್ನಡವೆಂಬುದು ಪಡಿಯಚ್ಚಿನಲ್ಲಿ ಒಡಮೂಡಿದ ಒಂದೇ ಒಂದು ಭಾಷೆಯಲ್ಲ. ಕನ್ನಡದ ಅನುಭವದಲ್ಲಿ ಹಲವು ಆಡುರೂಪಗಳಿವೆ. ಎಲ್ಲ ಆಡುರೂಪಗಳೂ ಮುಖ್ಯ. ಕೃಷ್ಣ ಡಿ.ಎಸ್ ಕುಂದಾಪ್ರ ಕನ್ನಡದ ತಮ್ಮದೇ ಬರೆಹವನ್ನು ವಾಚಿಸಿದ್ದಾರೆ. ಈ ಬರೆಹ ಹೇಗೆ ಮಕ್ಕಳ ಮೇಲೆ ಸಮಾಜವು ಮೇಲು- ಕೀಳೆಂಬ ಜಾತಿಪ್ರಜ್ಞೆಯನ್ನು ತುಂಬಿಸುತ್ತದೆ ಎಂಬುದನ್ನು ಪುಟ್ಟ ಪ್ರಸಂಗದ ಮೂಲಕ ಕಟ್ಟಿಕೊಡುತ್ತದೆ.