‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿರುವ ಶ್ರೀಮತಿ. ಮಧುರಾಣಿ ಹೆಚ್.ಎಸ್ ಅವರು ಮೂಲತಃ ದಾವಣಗೆರೆ ಸೀಮೆಯವರಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಹೆಮ್ಮೆಯ ಕವಿ ಡಾ. ಎಚ್. ಎಸ್ ಶಿವಪ್ರಕಾಶ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿದೆ.