(ಮತ್ತಾ. 21.4-9; ಮಾರ್ಕ. 11.7-10; ಲೂಕ. 19.35-38)
12 ಮರುದಿವಸ ಜಾತ್ರೆಗೆ ಬಂದಿದ್ದ ಜನಸಮೂಹವು ಯೇಸು ಯೆರೂಸಲೇವಿುಗೆ ಬರುತ್ತಾನೆಂದು ಕೇಳಿ ಖರ್ಜೂರದ ಗರಿಗಳನ್ನು ತಕ್ಕೊಂಡು
13 ಆತನನ್ನು ಎದುರುಗೊಳ್ಳುವದಕ್ಕೆ ಹೊರಗೆ ಬಂದು -ಜಯ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ;ಇಸ್ರಾಯೇಲಿನ ಅರಸನಿಗೆ ಆಶೀರ್ವಾದಎಂದು ಆರ್ಭಟಿಸಿದರು.
14 ಮತ್ತು ಯೇಸು ಕತ್ತೆಮರಿಯನ್ನು ತರಿಸಿಕೊಂಡು ಅದರ ಮೇಲೆ ಕೂತುಕೊಂಡನು. ಇದರಿಂದ -
15 ಚೀಯೋನ್ ನಗರಿಯೇ, ಹೆದರಬೇಡ;ಇಗೋ, ನಿನ್ನ ಅರಸನು ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾನೆಎಂಬ ಶಾಸ್ತ್ರದ ಮಾತು ನೆರವೇರಿತು.