ಶ್ರೀ ಜೀವಣ್ಣ ಮಸಳಿ ಅವರು ಬರೆದ ಮಹಾಮನು ಕಾದಂಬರಿಯನ್ನು ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಓದುವವರು ಶ್ರೀ ಬಸವರಾಜ ಬಡಿಗೇರ ಬೋರಗಿ. ಪಾಡ್ಕಾಸ್ಟ್ ನಿರ್ವಹಣೆ: ಕುಮಾರ ವಿನ್ಯಾಸ ಬಡಿಗೇರ. ತಾಂತ್ರಿಕ ನೆರವು: ಈಶ್ವರ ಬಡಿಗೇರ
_________________________
"ಮಹಾಮನು" ಕಾದಂಬರಿ ವಾಚನ ಸರಣಿ ಕಾರ್ಯಕ್ರಮ ದಿನಾಂಕ. 09–10–2020 ಶುಕ್ರವಾರ ಮೊದಲ ಸಂಚಿಕೆ ಪ್ರಸಾರಗೊಡು 29–10–2021ರಂದು 100ನೇ ಸಂಚಿಕೆಯೊಂದಿಗೆ ಸಂಪನ್ನಗೊಂಡಿತು.
ನನ್ನ ಬದುಕಿನ ಏಳು ಬೀಳುಗಳ ಜೊತೆಗೆ ಅದನ್ನು ಹಾಗೇ ಕರೆದು ತಂದಿದ್ದೇನೆ.
ಈ ಒಂದು ಕಾರ್ಯ ನಾನು ಬಯಸದಿದ್ದರೂ ನನಗೆ ಜನಪ್ರಿಯತೆಯ ಜೊತೆಗೆ ಮನೋ ಪಕ್ವತೆಯನ್ನೂ ತಂದುಕೊಟ್ಟಿತು.
ಈ ಸೇವೆಯು ಕಾದಂಬರಿಯ ಕರ್ತೃ ಕವಿಶ್ರೇಷ್ಟ ಜೀವಣ್ಣ ಮಸಳಿ, ಡಾ.ವೀರೇಶ ಬಡಿಗೇರ ಗುರೂಜಿಯವರು ಹಾಗೂ ನೀವೆಲ್ಲರೂ (ವೇದಿಕೆಯ ಮಹನೀಯರು) ನನಗೆ ನೀಡಿದ ಮಹಾಪ್ರಸಾದವೆಂದೇ ಸ್ವೀಕರಿಸಿದ್ದೇನೆ...
ನನ್ನನ್ನು ಸದಾ ಹರಸಿ-ಹಾರೈಸಿದ (ಹಾರೈಸುತ್ತಲಿರುವ) ಪೂಜ್ಯ ಗುರು-ಮಹನೀಯ ವೃಂದಕ್ಕೂ ಅಭಿವಂದಿಸುವೆ....
ಮತ್ತೆ ಇನ್ನೊಂದು ಮಹತ್ವದ ಮಹಾಸೇವೆಯೊಂದಿಗೆ ಅತೀ ಶೀಘ್ರದಲ್ಲೇ ನಿಮ್ಮೊಂದಿಗಿರುತ್ತೇನೆ...