ನಿರ್ದಿಷ್ಟ ಸಂದರ್ಭಗಳಲ್ಲಿ ತಾನು ವೈವಾಹಿಕ ಸಂಬಂಧವನ್ನು ಪರಿಸಮಾಪ್ತಿಗೊಳಿಸಬಹುದು ಎಂದು
ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಈಚೆಗೆ ನೀಡಿರುವ ಮಹತ್ವದ ಆದೇಶವೊಂದರಲ್ಲಿ
ಹೇಳಿದೆ. ಸಂಬಂಧವು ಇನ್ನು ಸರಿಪಡಿಸಲಾಗದು ಎಂಬಷ್ಟರಮಟ್ಟಿಗೆ ಹಾಳಾಗಿದ್ದರೆ, ಅದನ್ನು
ಆಧಾರವಾಗಿ ಇಟ್ಟುಕೊಂಡು ವಿಚ್ಛೇದನಕ್ಕೆ ಆದೇಶ ಕೊಡಬಹುದು, ಸಂವಿಧಾನದ 142ನೆಯ ವಿಧಿಯ
ಅಡಿಯಲ್ಲಿ ತನಗೆ ಆ ಅಧಿಕಾರ ಇದೆ ಎಂದು ಕೋರ್ಟ್ ಹೇಳಿದೆ. ಇದು ವಿವಾಹ ವಿಚ್ಛೇದನಕ್ಕೆ
ಸಂಬಂಧಿಸಿದ
ನ್ಯಾಯಶಾಸ್ತ್ರಕ್ಕೆ ಹೊಸ ಆಯಾಮವೊಂದನ್ನು ನೀಡಿದಂತೆ. ಯಾವುದೇ
ಪ್ರಕರಣದಲ್ಲಿ ಸಂಪೂರ್ಣ ನ್ಯಾಯವನ್ನು ಒದಗಿಸಲು ಸೂಕ್ತವಾದ ಆದೇಶವನ್ನು ಹೊರಡಿಸುವ
ಅಧಿಕಾರವು ಸುಪ್ರೀಂ ಕೋರ್ಟ್ಗೆ ಇದೆ ಎಂದು 142ನೆಯ ವಿಧಿಯು ಹೇಳುತ್ತದೆ.
ಕಕ್ಷಿದಾರರನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಕಳುಹಿಸದೆಯೂ ತಾನು ಅವರಿಗೆ ವಿಚ್ಛೇದನ
ನೀಡಬಹುದು ಎಂದು ಐವರು ನ್ಯಾಯಮೂರ್ತಿಗಳಿದ್ದ
ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೌಟುಂಬಿಕ
ನ್ಯಾಯಾಲಯದ ಮೂಲಕ ಸಹಮತದ ವಿಚ್ಛೇದನ ಪಡೆಯಲು ಪತಿ, ಪತ್ನಿ ಆರರಿಂದ ಹದಿನೆಂಟು
ತಿಂಗಳವರೆಗೆ ಕಾಯಬೇಕಾಗುತ್ತದೆ. ಪತಿ, ಪತ್ನಿ ಪೈಕಿ ಯಾರಾದರೊಬ್ಬರು ವಿಚ್ಛೇದನಕ್ಕೆ
ಒಪ್ಪಿಗೆ ನೀಡದೆ ಇದ್ದರೂ, ತಾನು ಅಂತಿಮ ನಿರ್ಣಯ ನೀಡುವ ಅಧಿಕಾರ ಹೊಂದಿದ್ದೇನೆ ಎಂದು