Sandurina Kathana

Sandurina Kathana

By Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Download on the App Store

Sandurina Kathana episodes

  • ಸೊಂಡೂರಿನ ಕಗ್ಗತ್ತಲೆಯ ಕಥನಗಳು-12 ನಂಬಲಾರದ ದು:ಸ್ವಪ್ನ
    “ದುಡುದ್ವಿ ಸಾರ್,ಹಗಲೂ ರಾತ್ರಿ ಕೂಡ ದುಡುದ್ವಿ ನಾನ್ ಇಲ್ಲಾ ಅಂಬಕುಲ್ಲ…ರಕ್ಕ ಹೆಂಗ್ ಬಂದ್ವು,ಹಾಂಗಾ ಹೋದ್ವು..! ದೊಡ್ಡೋರ್ ಹೇಳೋದ್ ಸತ್ಯ ಸರ್,ಮಣ್ಣನ್ನ,ಗಂಗಮ್ಮನ್ನ,ಮತ್ತೆ ಕಲ್ಲುನ ಮಾರಿಕ್ಯಾಬಾರದು.  ಮಾರಿಕ್ಯಂಡನು ಉದ್ಧಾರ ಆಗಾಂಗಿಲ್ಲ … ಯಾಕಂದ್ರ ನಾವಿದೀವಲ್ಲ …ಅಷ್ಟಾಕಂದು ರಕ್ಕ ಇಟಕಂಡೂ, ನಾಕು ಟಾಟಾ ಟಿಪ್ಪರ್ ಗಾಡಿಗುಳು,ಕೈತುಂಬಾ ರಕ್ಕ , ಎಲ್ಲ ಇದ್ವು.ಆದ್ರೇನಾತು ಇವತ್ತಿಂದಿಸ ಹುಡುಕ್ಯಾಡಿದ್ನಪ ಅಂದ್ರೆ ಐಪಸ ಸೈತ ಇಲ್ಲ.” ಎಂದು ನಕ್ಕು, ಹೇಳುತ್ತಿದ್ದವನನ್ನೆ ನೋಡಿದೆ.  ಕಾಲದ ಕರಾಳ ಅನುಭವಗಳು ಮೂವತ್ತರ ಆ ಹುಡುಗನನ್ನು ಮಾಗಿಸಿದಂತಿದ್ದವು.
    4 min
  • ಸೊಂಡೂರಿನ ಕಗ್ಗತ್ತಲೆಯ ಕಥನಗಳು-11: ನಾಳೆಗಳ ಕಥೆಗಳನ್ನು ಅವ್ವಂದಿರು ಇಂದೇ ಹೇಳಿಬಿಡುತ್ತಾರೆ
    ಇಲ್ಲಿ ದ್ವೇಷವಿಲ್ಲ. ಜಗಳವಿಲ್ಲ. ಹತ್ಯಾಕಾಂಡಗಳೂ ನಡೆದಿಲ್ಲ. ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ  ಊರ ಬೆನ್ನು ಬಾಗಿದೆ. ಒಂದೂರಿನಲ್ಲಿ ಒಬ್ಬ ರಾಜನಿದ್ದ.ಅವನೊಂದು ದಿನ ಬೇಟೆಗೆಂದು ‌ಅಗೋ…ಅಲ್ಲಿ ಕಾಣಿಸುತ್ತಲ್ಲ,ಆ ಬೆಟ್ಟಗಳ ಸಾಲು,ಅಲ್ಲಿ ಕುದುರೆ ಮ್ಯಾಲೆ ಹೋಗುತ್ತಿರಬೇಕಾದರೆ ಹಚ್ಚಹಸುರಿನ ಗಿಡಮರಗಳಿಂದ ತಂಗಾಳಿ ಬೀಸುತ್ತಿತ್ತು.ಘಮಘಮಿಸುವ ವನಸುಮಗಳು, ರಾಜಕುಮಾರೀನೂ ಇದ್ಲಂತೆ !. ಹೀಗೆ ಶುರುವಾದ ಕಥೆ,ಸೊಂಡೂರಿನ ಬೀದಿ ಹಳ್ಳಕೊಳ್ಳಗಳ ದಾಟಿ,ನದಿಯನ್ನು ಸೇರಿ ಅಲ್ಲಿಂದ ಸಮುದ್ರ ಸೇರುವ ವರೆಗೂ …ನಿಲ್ಲುವ ಹಾಗಿರಲಿಲ್ಲ. ಪೂರ್ಣ ಲೇಖನ ಓದಿ: ಸಂಡೂರಿನ […]
    5 min
  • ಸೊಂಡೂರಿನ ಕಗ್ಗತ್ತಲೆಯ ಕಥನಗಳು: ವೇಷಗಾರರ ಸಂಕಟ Episode 10
    ಗಣಿಗಾರಿಕೆಯನ್ನೆ ನಂಬಿ ಬದುಕಿದ್ದ ಕುಟುಂಬಗಳು ಒಂದು ಕಡೆಯಾದರೆ ಅಂತಹ ಕುಟುಂಬಗಳನ್ನೆ ಅವಲಂಬಿಸಿ ಬದುಕುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳೂ ಇದ್ದವು. ಇವರನ್ನೆ ನಂಬಿ ಬದುಕುತ್ತಿದ್ದ ಕರಡಿ ಆಡಿಸುವವರು, ಯಾವುದೋ ವೇಷ ಧರಿಸಿ ಬರುವ ಹಗಲುವೇಷ ಗಾರರು, ಸುಡುಗಾಡು ಸಿದ್ಧರು, ಕುರ್ರಮಾಮುಡುಗಾರು, ಮೈಗೆ ಚಾಟಿ ಬೀಸಿಕೊಳ್ಳುವ ದುರುಗ ಮುರಿಗಿಯವರು ಗಂಗಿ ಬಾರೆ.. ಗೌರಿ ಬಾರೆ ಎಂದು ಶಿವನ ಪಾಡನು ಮನೆಮನೆಗೆ ತಲುಪಿಸುವವರು..,ಇಂತಹ ಇನ್ನೂ ಎಷ್ಟೋ ಸಮುದಾಯಗಳಿದ್ದವು. ಬಿ.ಶ್ರೀನಿವಾಸ್
    4 min
  • ಸೊಂಡೂರಿನ ಕಗ್ಗತ್ತಲೆಯ ಕಥನಗಳು: ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಕೇಳಿ Episode -1
    ಗಣಿಗಾರಿಕೆಯೆಂಬ ಆಧುನಿಕ ಯುದ್ಧ ಸೃಷ್ಟಿಸಿದ ತಲ್ಲಣಗಳಿಗೆ ಬಳ್ಳಾರಿ ಜಿಲ್ಲೆಯ ಸೊಂಡೂರು ಸುತ್ತಮುತ್ತಲಿನ ಛಿದ್ರಗೊಂಡ ಅಭಿನ್ನ ಜಗತ್ತಿನ ಕರಾಳ ಕಥನಗಳ ಸರಣಿ.  
    15 min