ಜಾಗತಿಕ ಅನುಭಾವ ಮಂಟಪದಲ್ಲಿ ಶನಿವಾರ ಮತ್ತು ರವಿವಾರ ಸಾಯಂಕಾಲ 5 PM ರಿಂದ 6 PM ರ ವರೆಗೆ ಜರುಗುವ ವಚನಾನುಭಾವಕ್ಕೆ ಇಂಟರ್ನೆಟ್ ಮೂಲಕ ನೇರವಾಗಿ ಸೇರಲು
ಕೆಳಗಿನ ಲಿಂಕ್ ನ್ನು ಒತ್ತಿರಿ
https://join.freeconferencecall.com/shivasharana
ಡೈಯಲ್ ಮಾಡುವದರ ಮೂಲಕ ಕಾನ್ಫರೆನ್ಸ್ ಕಾಲ್ ನಲ್ಲಿ ಭಾಗವಹಿಸಲು: ಶುಲ್ಕ ರಹಿತ ದೂರವಾಣಿ ಸಂಖ್ಯ: 0172 510 0945 ಮೀಟಿಂಗ ಅಕ್ಸೆಸ್ ಕೋಡ್: 119500#
Free Conference Call App install ಮಾಡಲು ಈ ಕೆಳಗಿನ ಲಿಂಕ್ ಒತ್ತಿ.
https://play.google.com/store/apps/details?id=com.freeconferencecall.fccmeetingclient
ದಿನಾಂಕ 22-08-2020, ಶನಿವಾರ 5 PM ರಿಂದ 6 PM ರ ವರೆಗೆ *ವಚನಾನುಭಾವ*: ಶಿವಶರಣಪ್ಪ ಮದ್ದೂರ್ ರವರಿಂದ *
ಈ ವಾರದಂಚಿನ ಅನುಭಾವಿಕ ಶಬ್ದಗಳು: ಹೆಣನೆದ್ದು ನಗುತ್ತಿದೆ, ಭವಬಂಧನ, ಇನ್ನು ಹುಟ್ಟಿದಡೆ ನಿಮ್ಮಾಣೆ. ಸಂಸಾರಸಾಗರ, ಮುಂದುಗೆಡಿಸಿತ್ತು ಮಾಯೆ, ಕಾಡಿತ್ತು ಮಾಯೆ, ನಾಳಿಂಗೆಂತು, ಜಗದ ನಂಟ, ಧರೆ ಹತ್ತಿ ಉರಿದಡೆ, ಅಂದಣವನೇರಿದ ಸೊಣಗ, ಮನೋವಿಕಾರ, ತನ್ನ ವಿಚಾರಿಸಲೊಲ್ಲದ ಮನ, ನಚ್ಚದ ಮನವ ಕಿಚ್ಚಿನೊಳಗಿಕ್ಕು, ವಿಷಯವೆಂಬ ಹಸುರು, ಅಕಟಕಟಾ, ಕಿವುಡನ ಮಾಡಯ್ಯಾ, ಆಸೆಯೆಂಬ ಪಾಶ, ವ್ಯಸನದಿಂದ ಕುದಿಯುವುದು, ಕುಲದಲಧಿಕನು, ಅಸ್ತಿ ಭಾತಿಯೆಂಬ. ಇದುವರೆಗೆ ನಾವು ಪಿಂಡಸ್ಥಲ ಮತ್ತು ಪಿಂಡಜ್ಞಾನ ಮತ್ತು ಮಾಯಾವಿಲಾಸ ವಿಡಂಬನಸ್ಥಲದ ವಚನಗಳನ್ನು ನೋಡಿದೆವು. ಇನ್ನು ಮುಂದೆ ಸಂಸಾರ ಹೇಯಸ್ಥಲದ ವಚನಗಳನ್ನು ನೋಡೋಣ. ಸಂಸಾರ ಹೇಯಸ್ಥಲ ವೆಂದರೇನು?. ಮಾಯೆಯ ವಿಲಾಸದಲ್ಲಿ ರೂಪುಗೊಂಡವುಗಳೇ ದೇಹ, ಮನಸ್ಸು ಮತ್ತು ಶಬ್ದಾದಿ ವಿಷಯಂಗಳು. ಇವೆಲ್ಲ ಆತ್ಮನಿಗೆ ಎದುರಾಗಿ ಕಾಣುವ ತೋರಿಕೆಗಳು. ಆದರೆ ಮಾಯೆಯ ಪರಿಣಾಮದಿಂದಾಗಿ ಅವನು ಈ ತೋರಿಕೆಯ ದೇಹಾದಿಗಳಲ್ಲಿ ಆತ್ಮ ಭಾವ ತಾಳುತ್ತಾನೆ. ಆಗ ದೇಹದ ಜನ್ಮ-ಮರಣ ಮುಂತಾದ ವಿಕಾರಗಳು, ಮನಸ್ಸಿನ ಕಾಮಾದಿ ಆವೇಗಗಳು ಅವನಲ್ಲಿ ಭಾಸವಾಗುತ್ತವೆ. ಅವು ತನಗೆಯೆ ಎಂದು ಭ್ರಮಿಸುತ್ತಾನೆ. ಈ ಭ್ರಮೆಯೆ ಸಂಸಾರ. ಈ ಭ್ರಮೆಯು ಆತ್ಮನಿಗೆ ತರವಲ್ಲ. ಇದು ತ್ಯಜನೀಯ, ಹೇಯ. ಇದು ಹೇಯವದಲ್ಲದೆ ಆತ್ಮನು ಸ್ವಸ್ಥನಾಗಲಾರ. ತನ್ನತಾನರಿವ ಪಥದಲ್ಲಿರುವ ಸಾಧಕನಿಗೆ ಇದು ಸಂಸಾರ ಹೇಯಸ್ಥಲ.
ನಿರ್ವಚಿಸಲ್ಪಡುವ ವಚನಗಳು: 1. ಸಂಸಾರವೆಂಬ ಹೆಣ ಬಿದ್ದಿದ್ದಡೆ, ತಿನಬಂದ ನಾಯ ಜಗಳವ ನೋಡಿರೆ ! ನಾಯ ಜಗಳವ ನೋಡಿ ಹೆಣನೆದ್ದು ನಗುತ್ತಿದೆ. ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೆ.
2. ಭವಬಂಧನ ಭವಪಾಶವಾದ ಕಾರಣವೇನಯ್ಯಾ ಹಿಂದಣ ಜನ್ಮದಲ್ಲಿ ಲಿಂಗವ ಮರೆದೆನಾಗಿ, ಹಿಂದಣ ಸಿರಿಯಲ್ಲಿ ಜಂಗಮವ ಮರೆದೆನಾಗಿ. ಅರಿದಡೀ ಸಂಸಾರವ ಹೊದ್ದಲೀವೆನೆ, ಕೂಡಲಸಂಗಮದೇವಾ
3. ಅರಿಯದೆ ಜನನಿಯ ಜಠರದಲ್ಲಿ ಬಾರದ ಭವಂಗಳ ಬರಿಸಿದೆ ತಂದೆ, ಹುಟ್ಟಿತ್ತೆ ತಪ್ಪಾಯಿತ್ತೆ, ಎಲೆ ಲಿಂಗವೆ ? ಮುನ್ನ ಹುಟ್ಟಿದುದಕ್ಕೆ ಕೃಪೆಯ ಮಾಡು ಲಿಂಗವೆ ! ಇನ್ನು ಹುಟ್ಟಿದಡೆ ಕೂಡಲಸಂಗಮದೇವಾ, ನಿಮ್ಮಾಣೆ.
4. ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಲಿದೆ, ಸಂಸಾರಸಾಗರ ಉರದುದ್ದವೆ ಹೇಳಾ ! ಸಂಸಾರಸಾಗರ ಕೊರಳುದ್ದವೆ ಹೇಳಾ ! ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ ! ಅಯ್ಯಾ ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ ಕೂಡಲಸಂಗಮದೇವಾ ನಾನೇವೆನೇವೆನಯ್ಯಾ !
5. ನಾನೊಂದ ನೆನೆದಡೆ ತಾನೊಂದ ನೆನೆವುದು, ನಾನಿತ್ತಲೆಳೆದಡೆ ತಾನತ್ತಲೆಳೆವುದು. ತಾ ಬೇರೆ ಎನ್ನನಳಲಿಸಿ ಕಾಡಿತ್ತು, ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು. ಕೂಡಲಸಂಗನ ಕೂಡಿಹೆನೆಂದಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.
6. ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ, ನೀವೆ ಬಲ್ಲಿರಿ ಕೂಡಲಸಂಗಮದೇವಾ ! 15
7. ಇಂದಿಂಗೆಂತು ನಾಳಿಂಗೆಂತು ಎಂದು- ಬೆಂದ ಒಡಲ ಹೊರೆಯ ಹೋಯಿತ್ತೆನ್ನ ಸಂಸಾರ ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ, ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ. ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದುದಯ್ಯಾ ಈ ಮಾಯೆ, ಕೂಡಲಸಂಗಮದೇವಾ.
8. ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ, ಚಂದ್ರ ಕುಂದೆ, ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾ ಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ, ಅಯ್ಯಾ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೆ, ಅಯ್ಯಾ, ಕೂಡಲಸಂಗಮದೇವಯ್ಯಾ!
9. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ !
10. ಅಂದಣವನೇರಿದ ಸೊಣಗನಂತೆ ಕಂಡಡೆ ಬಿಡದು ತನ್ನ ಮುನ್ನಿನ ಸ್ವಭಾವವನು. ಸುಡು, ಸುಡು, ಮನವಿದು ವಿಷಯಕ್ಕೆ ಹರಿವುದು, ಮೃಡ ನಿಮ್ಮನನುದಿನ ನೆನೆಯಲೀಯದು. ಎನ್ನೊಡೆಯ ಕೂಡಲಸಂಗಮದೇವಾ ನಿಮ್ಮ ಚರಣವ ನೆನೆವಂತೆ ಕರುಣಿಸು- ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.