ಕಥೆ ಖಜಾನೆ - ಕನ್ನಡ

ಸಂತೆಯಲ್ಲಿ ಮಗ್ಗಿ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಕವಿತ ಮಂದಣ್ಣ
ನಿರೂಪಕರು : ಕುಮಾರ್
ಸಂಪಾದಕರು : ಸೌಮ್ಯ ಕೆ.ಎನ್

ಲೀಲು ತನ್ನ ತರಗತಿಯ 36 ವಿದ್ಯಾರ್ಥಿಗಳ ಜೊತೆಗೆ ಸಂತೆಗೆ ಹೋದಳು. ಟಿಕೆಟ್ ಖರೀದಿಸಲು ಎಷ್ಟು ಮಕ್ಕಳಿದ್ದಾರೆ ಎಂದು ಸರ್ ಆಗಾಗ ಎಣಿಸಬೇಕಾಗುತ್ತಿತ್ತು. 1, 2, 3, ಎಂದು 36ರವರೆಗೆ ಎಣಿಸುವ ಬದಲು ಇನ್ನೂ ಸುಲಭವಾಗಿ ಎಣಿಸಲು ಆಗುವುದೇ? ಜೊತೆ, ಜೊತೆಯಾಗಿ ಎಣಿಸುವುದನ್ನು ಕಥೆ ಮೂಲಕ ತಿಳಿಸುತ್ತಾ ಮಗ್ಗಿಯನ್ನು ಕತೆಯಲ್ಲಿ ಪರಿಚಯಿಸಿದೆ.

ಕಥೆಯ ಮೂಲಕ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಅಂಶಗಳು, ದಿನನಿತ್ಯ ಅವುಗಳ ಬಳಕೆ ಮತ್ತು ಪ್ರಾಮುಖ್ಯತೆ ಕುರಿತು ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.

  1. ಶಾಲಾ ಪ್ರವಾಸದಲ್ಲಿ ಮಕ್ಕಳ ಅನುಭವಕ್ಕೆ ಬಂದ ಗಣಿತ ಅಂಶಗಳ ಕುರಿತು ಚರ್ಚಿಸುವುದು. ಉದಾ: ಪ್ರವಾಸಕ್ಕೆ ಎಷ್ಟು ಮಕ್ಕಳು ಬಂದದ್ದರು? ಶಿಕ್ಷಕರು ಎಷ್ಟು ಮಂದಿ ? ಪ್ರವಾಶ ಶುಲ್ಕ ಎಷ್ಟು? ನಿಮ್ಮ ತರಗತಿಯಿಂದ ಸಂಗ್ರಹವಾದ ಶುಲ್ಕ ಎಷ್ಟು? ಇತರೆ.
  2. ಮಕ್ಕಳಿಗೆ ತಿಳಿದಿರುವಷ್ಟು ಮಗ್ಗಿ ಹೇಳುವಂತೆ ತಿಳಿಸುವುದು.
  3. ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಗಣಿತಾಂಶಗಳನ್ನು ಬಳಸುವ ಅನುಭವಗಳನ್ನು ಹೇಳಲು ತಿಳಿಸುವುದು.
  4. ಗಣಿತ ವಿಷಯಕ್ಕೆ ಸಂಭಂದಿಸಿದಂತೆ ಕೆಲವು ಚಟುವಟಿಕಾ ಪ್ರಶ್ನೆಗಳನ್ನು ನೀಡಿ ಉತ್ತರಿಸುವಂತೆ ತಿಳಿಸುವುದು. ಉದಾ: ನಿಮ್ಮ ತರಗತಿಗೆ ಇಬ್ಬರು ವಿದ್ಯಾರ್ಥಿಗಳು ಹೊಸದಾಗಿ ಸೇರಿಕೊಂಡರೆ ಆಗ ನಿಮ್ಮ ತರಗತಿಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು. ಉದಾ: ಆರು ವಿಷಯಗಳನ್ನು ಮೂರು ಶಿಕ್ಷಕರು ಸಮನಾಗಿ ವಿಭಾಗಿಸಿಕೊಂಡು ಬೋಧಿಸುವುದಾದರೆ ಒಬ್ಬೊಬ್ಬ ಶಿಕ್ಷಕರಿಗೆ ಬೋಧಿಸಲು ಎಷ್ಟು ವಿಷಯಗಳು ಸಿಗುತ್ತದೆ. ತರಗತಿಯಲ್ಲಿ ಒಂದು ಬೆಂಚಿಗೆ 4 ವಿದ್ಯಾರ್ಥಿಗಳಂತೆ
  5. ಬೆಂಚಿನಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಕುಳಿತುಕೊಳ್ಳುವರು.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಗಣಿತ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change