ಶ್ರೀರಾಮನು ಏಳು ಸಾಲವೃಕ್ಷಗಳನ್ನೂ ಭೇದಿಸಿದುದು; ಶ್ರೀರಾಮನ ಆಜ್ಞೆಯಂತೆ ಸುಗ್ರೀವನು ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದುದು; ಯುದ್ಧದಲ್ಲಿ ಸುಗ್ರೀವನ ಪರಾಜಯ; ಸುಗ್ರೀವನಿಗೆ ಶ್ರೀರಾಮನ ಆಶ್ವಾಸನೆ; ಗುರುತಿಗಾಗಿ ಸುಗ್ರೀವನು ನಾಗಪುಷ್ಪೀಲತೆಯನ್ನು ಕತ್ತಿನಲ್ಲಿ ಹಾಕಿಕೊಂಡು ಪುನಃ ವಾಲಿಯೊಡನೆ ಯುದ್ಧಕ್ಕೆ ಹೋದುದು.