ಇವತ್ತಿನ ದಿನ ಎಲ್ಲರೂ ಫಿಟ್ ಮತ್ತು ಫೈನ್ ಎಂದೆನಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಕೆಲವರಿಗೆ ಬೊಜ್ಜು ಇಳಿಸಿಕೊಳ್ಳುವ ಆಸೆ ಆದರೆ ಇನ್ನು ಕೆಲವರಿಗೆ ದೇಹದ ತೂಕ ಹೆಚ್ಚಿಸಿಕೊಳ್ಳುವ ತವಕ.
ದಷ್ಟಪುಷ್ಟವಾಗಲು ಕೆಲವರು ಔಷಧಿ, ವಿಟಮಿನ್ ಮಾತ್ರೆ ಇತ್ಯಾದಿ ತಿನ್ನುತ್ತಾರೆ. ಆದರ ಬದಲು ನಿಮ್ಮ ಡಯಟ್ ನಲ್ಲಿ ಕೆಲವೊಂದು ಪರಿವರ್ತನೆ ಮಾಡಿ. ದಷ್ಟಪುಷ್ಟ ಶರೀರ ನಿಮ್ಮದಾಗುತ್ತದೆ.
ದೇಹ ಬಲಗೊಳ್ಳಬೇಕಾದರೆ ಏನು ತಿನ್ನಬೇಕು.?
೧. ಬಾಳೆ ಹಣ್ಣು:
ಬಾಳೆಹಣ್ಣಿನಲ್ಲಿ (Banana) ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಇದೆ. ಬಾಳೆಹಣ್ಣನ್ನು ನಿಮ್ಮ ಡಯಟಿನಲ್ಲಿ (Diet) ಬಳಸಿಕೊಂಡರೆ, ನಿಮ್ಮ ತೂಕ ಹೆಚ್ಚುವುದರಲ್ಲಿ ಸಂದೇಹವಿಲ್ಲ
೨. ತುಪ್ಪ
ತೂಕ ಹೆಚ್ಚಿಸಿಕೊಳ್ಳಬೇಕಾದರೆ ನಿಮ್ಮ ಊಟದ ಮೆನುವಿನಲ್ಲಿ ತುಪ್ಪ (Ghee) ಇರಲಿ. ತುಪ್ಪದಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಜೊತೆಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿಡುತ್ತದೆ.
೩. ಅಲೂಗಡ್ಡೆ
ಕೃಶಕಾಯದ ಸಮಸ್ಯೆಯಿಂದ ಬಳಲುತಿದ್ದರೆ ಆಲೂಗಡ್ಡೆ (Potato) ತಿನ್ನಬೇಕು. ಆಲೂಗಡ್ಡೆ ನಿಮ್ಮ ತೂಕ ಹೆಚ್ಚಿಸುತ್ತದೆ. ಅಲೂ ನಿಮ್ಮ ತೂಕ ಹೆಚ್ಚಿಸುತ್ತದೆ.
೫. ಡ್ರೈ ಫ್ರೂಟ್ಸ್
ದಿನವೂ ಡ್ರೈ ಫ್ರೂಟ್ಸ್ (Dry fruits)ತಿಂದರೆ ದೇಹಾರೋಗ್ಯ ವೃದ್ದಿಯಾಗುತ್ತದೆ. ಶರೀರ ಹೆಲ್ತಿ ಆಗಿರುತ್ತದೆ. ಡ್ರೈ ಫ್ರೂಟ್ಸ್ ತಿಂದರೆ ತೂಕ ಹೆಚ್ಚುತ್ತದೆ
೪. ಚಿಕನ್
ನೀವು ನಾನ್ ವೆಜಿಟೇರಿಯನ್ (Non vegetarian)ಆಗಿದ್ದರೆ ಖಂಡಿತಾ ನಿಮ್ಮ ಊಟದ ಮೆನುವಿನಲ್ಲಿ ಚಿಕನ್ (Chicken) ಇಟ್ಟು ಕೊಳ್ಳಿ. ಚಿಕನ್ ನಿಮ್ಮ ತೂಕ ಹೆಚ್ಚಿಸುತ್ತದೆ. ಚಿಕನ್ ಪ್ರೊಟೀನ್ ನ ಅತಿ ಉತ್ತಮ ಮೂಲ. ಚಿಕನ್ ತಿಂದರೆ ಒಳ್ಳೆಯದು