" ಬಿಳಿ ಆನೆಯ ಕತೆ " , ಭಾರತೀಯ ಜನಪದದಲ್ಲಿ ವಿವಿಧ ಆವೃತ್ತಿಗಳಲ್ಲಿ ಜನಪ್ರಿಯವಾಗಿರುವ ಕತೆ. ಹಾಸ್ಯ , ಪುರಾಣ ಮಿಶ್ರಿತವಾಗಿರುವ ಈ ಕತೆ ಮಕ್ಕಳಿಗೆ ಬಹಳ ಇಷ್ಟ . ಶಂಕರ , ಅನ್ನುವ ಮುಗ್ಧ ರೈತ , ಸ್ವರ್ಗದಿಂದ ಇಳಿದು ಬಂದ ಆನೆಯ ಬಾಲ ಹಿಡಿದು ಸ್ವರ್ಗಕ್ಕೆ ಒಂದು ಟ್ರಿಪ್ ಹೊಡೆದಿದ್ದೆ ತಡ , ಒಬ್ಬರಿಂದ ಇನ್ನೊಬ್ಬರಿಗೆ ಆ ಸುದ್ದಿ ಹರಡಿ ದೊಡ್ಡ ಹಿಂಡೇ ಸ್ವರ್ಗಕ್ಕೆ ಹೊರಡಲು ಸಿದ್ಧವಾಗುತ್ತೆ . ಮುಂದೆ ಆಗುವ ಅವಾಂತರವನ್ನು ಅಪರ್ಣ ನರೇಂದ್ರ ಅವರ ಧ್ವನಿಯಲ್ಲಿ ಕೇಳಿ .