ಆಟವಾಡಿ ಬಂದ ಮಕ್ಕಳ ಕೈಗಳನ್ನು ಸಾಬೂನಿನಿಂದ ಅಥವಾ ಸ್ಯಾನಿಟೈಸರ್ ನಿಂದ ತೊಳೆಯುವ ಅಗತ್ಯ ಖಂಡಿತ ಇಲ್ಲ. ಆಹಾರ ಸೇವನೆಗೆ ಮೊದಲು ಮಾತ್ರ ಅವರ ಕೈಗಳನ್ನು ತೊಳೆಯುವ ಅಗತ್ಯ ಇದೆ. ಏಕೆಂದರೆ ಹೊರಗಡೆಯ ಪರಿಸರಕ್ಕೆ ತೆರೆದುಕೊಳ್ಳುವ ಮಕ್ಕಳ ರೋಗನಿರೋಧಕ ಶಕ್ತಿಯು ಪರಿಸರದ ಸೂಕ್ಷ್ಮಾಣುಗಳ ಸಂಪರ್ಕದಿಂದ ವೃದ್ಧಿಗೊಳ್ಳುವುದು ಎಂಬುದು ವಿಜ್ಞಾನ ಜಗತ್ತು ಇಂದು ಕಂಡುಕೊಂಡ ಸತ್ಯ. ಆದಕಾರಣ ಮಕ್ಕಳು ಹೊರಗಡೆಗೆ ಮಣ್ಣಿನಲ್ಲಿ ಆಟವಾಡಬೇಕು, ಕೊಳೆ ಧೂಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು.