ಜನವರಿ ೧೬ನ್ನು ರಾಷ್ಟ್ರೀಯ ಸ್ಟಾರ್ಟಪ್ ಗಳ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿ ಹೊಸ ಭಾರತಕ್ಕೆ ಈ ಸ್ಟಾರ್ಟಪ್ಗಳು ಬೆನ್ನೆಲುಬಾಗಲಿ ಎಂದು ಆಶಿಸಿದರು.
ಐದು ವರ್ಷಗಳಲ್ಲಿ ಸುಮಾರು ಐನೂರರಿಂದ ಅರವತ್ತು ಸಾವಿರದಷ್ಟು ಸ್ಟಾರ್ಟಪ್ ಗಳು ಭಾರತದಲ್ಲಿ ಹುಟ್ಟಿವೆ. ಅಮೇರಿಕಾ, ಚೀನಾ ನಂತರ ಅತಿ ಹೆಚ್ಚು ಯೂನಿಕಾರ್ನ್ - ಒಂದು ಬಿಲಿಯನ್ ಡಾಲರ್ ಗಿಂತ ಹೆಚ್ಚು ಮೌಲ್ಯವುಳ್ಳ ಕಂಪೆನಿಗಳು - ಗಳಿಗೆ ಭಾರತ ಮನೆಯಾಗಿದೆ.
ಈ ಸಂದರ್ಭದಲ್ಲಿ ಎಲ್ಲೆಲ್ಲೂ ಸ್ಟಾರ್ಟಪ್ ಕಲ್ಚರ್, ಬಂಡವಾಳ ಹೂಡಿಕೆ, ಸೀಡ್ ಇನ್ವೆಸ್ಟರ್, ವೆಂಚರ್ ಕ್ಯಾಪಿಟಲ್ (ವೀಸಿ) ಹೀಗೆ ಹಲವು ಪಾರಿಭಾಷಿಕ ಪದಗಳನ್ನು ಹರಿದಾಡುವುದನ್ನು ಕೇಳಿರುತ್ತೀರಿ. ಜತೆಗೆ ನಾವು ಅನಾದಿಕಾಲದಿಂದಲೂ ಕಾಣುತ್ತ ಬಂದಿರುವ ಸಣ್ಣ ಉದ್ದಿಮೆಗಳು, ಬೀದಿ ಬದಿಯ ಕಿರಾಣಿ ಅಂಗಡಿ, ಮಲಯಾಳಿ ಬೇಕರಿ, ಬೈಕ್ ಗ್ಯಾರೇಜು ಇವೆಲ್ಲ ಸ್ಟಾರ್ಟಪ್ ಹೌದೇ ಅಲ್ಲವೇ ಎನ್ನುವಂತಹ ಸಂದೇಹಗಳೂ ಇರುತ್ತವೆ.
ಇವೆಲ್ಲ ಪ್ರಶ್ನೆಗಳಿಗೆ ಅರಳಿಕಟ್ಟೆಯ ಈ ಚರ್ಚೆಯಲ್ಲಿ ಉತ್ತರಿಸಲು ರಾಜೀವ್ ರಘುನಂದನ್ ನಮ್ಮೊಂದಿಗಿದ್ದಾರೆ. ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದಿರುವ ರಾಜೀವ್ ಅರಳಿ ವೆಂಚರ್ಸ್ ಎಂಬ ಸಂಸ್ಥೆಯ ಮೂಲಕ ಸ್ಟಾರ್ಟಪ್ ಗಳಲ್ಲಿ ಬಂಡವಾಳ ಹೂಡುತ್ತಾರೆ.
ರಾಜೀವ್ ಜತೆಗಿನ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ತೊಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
01:02 - Education and background
17:28 - Lack of initiatives among Kannadigas
24:23 - Entrepreneurship and startup culture
27:08 - What qualifies as a VC fundable startup
30:21 - Examples for businesses that VC are interested
39:31 - Developing idea in to business
44:24 - Raising money from banks is a no go
48:19 - Big companies vs startups
53:29 - Role of technology in startups
59:41 - Startup culture as a function of environment
- Israel - A startup nation episode part1: https://www.youtube.com/watch?v=NEkmjYnj0Fc
Part2: https://www.youtube.com/watch?v=33Bc3mrpsIA
Recording date: 08 January 2022
Credits: Music: Crescents by Ketsa Licensed under creative commons. Icon made by Freepik from www.flaticon.com