Sign up to save your podcasts
Or

ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ.
ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.
Recording date: 28 August 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಮೊಬೈಲ್ ಕೊಳ್ಳಲು ಗ್ರಾಹಕರಾದ ನಮಗೆ ಅನೇಕ ಆಯ್ಕೆಗಳಿವೆ. ದೇಶಭಕ್ತರು ಸ್ವದೇಶಿ ಕಂಪೆನಿಗಳ ಮೊಬೈಲ್ ಖರೀದಿಸಬಹುದು, ಪ್ರೈವೆಸಿ ಮುಖ್ಯವಾದವರು ಐಫೋನ್ ಕೊಳ್ಳಬಹುದು, ಕಡಿಮೆ ಬೆಲೆಯಲ್ಲಿ ಉತ್ತಮವಾದ ಫೋನ್ ಬೇಕಾದವರು ಆಂಡ್ರಾಯ್ಡ್ ಫೋನ್ ಕೊಳ್ಳಬಹುದು, ಬರೀ ಕರೆಗಳಿಗಾಗಿ ಫೋನ್ ಬಳಸುವವರು ಫೀಚರ್ ಫೋನ್ ಕೊಳ್ಳಬಹುದು. ಇದೇ ಆಯ್ಕೆಯನ್ನು ರೈತರು ತಮ್ಮ ಬೀಜಗಳನ್ನು ಕೊಳ್ಳಲು ಏಕೆ ನಿರಾಕರಿಸಬೇಕು?
ಸಾವಯವ ಕೃಷಿಯ ಇಳುವರಿಯಿಂದ ಇಡೀ ದೇಶದ ಹಸಿವು ನೀಗಿಸಲು ಸಾಧ್ಯವಾಗುತ್ತದೆ ಎಂದಾದರೆ ಆಧುನಿಕ ಕೃಷಿ ಪದ್ಧತಿ ಜಾರಿಗೆ ತರುವ ಮುನ್ನ ದೇಶದಲ್ಲಿ ಅಪೌಷ್ಟಿಕತೆ, ಹಸಿವು ಏಕೆ ಸರ್ವವ್ಯಾಪಿಯಾಗಿತ್ತು? ಏರುತ್ತಿರುವ ಜನಸಂಖ್ಯೆ ಹಾಗೂ ಇಳಿಯುತ್ತಿರುವ ಕೃಷಿ ಭೂಮಿಯ ಗಾತ್ರಗಳಿಂದ ಸಾವಯವ ಕೃಷಿ ಎಷ್ಟರ ಮಟ್ಟಿಗೆ ಪ್ರಾಯೋಗಿಕ?
ಮಾವು, ಸೀತಾಫಲ, ಸೇಬು, ಕಿತ್ತಳೆ, ಟೊಮೆಟೋ ಇವೆಲ್ಲ ದಿನೇದಿನೇ ಗಾತ್ರದಲ್ಲಿ ಹಿಗ್ಗುತ್ತಿದ್ದರೆ ಕುಂಬಳ ಕಾಯಿ, ಕಲ್ಲಂಗಡಿಗಳು ಗಾತ್ರದಲ್ಲಿ ಕುಗ್ಗುತ್ತಿರುವುದರ ಹಿಂದಿರುವ ಮರ್ಮವೇನು?
ಹೊಸ ತಂತ್ರಜ್ಞಾನ, ವಿಜ್ಞಾನದ ಹೊಸ ಬೆಳವಣಿಗೆಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ಅಪನಂಬಿಕೆ ಹಾಗೂ ಭಯವನ್ನು ನಿವಾರಿಸುವಲ್ಲಿ ಮಾಧ್ಯಮ, ವಿಜ್ಞಾನಿ ಹಾಗೂ ತಜ್ಞರ ಜವಾಬ್ದಾರಿ ಏನು? ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್ ಕೆ.ವಿಯವರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಎಪ್ಪತ್ನಾಲ್ಕನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
Recording date: 08 August 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಅಲೆಮಾರಿ ಮನುಷ್ಯ ಒಂದೆಡೆ ನೆಲೆನಿಂತು ತನ್ನ ಸುತ್ತಮುತ್ತಲ ಪರಿಸರವನ್ನು ಪಳಗಿಸಿ ತನಗೆ ಬೇಕಾದ ಆಹಾರ ಬೆಳೆಯಲು ಶುರುಮಾಡಿದಾಗಲೇ ವಿಜ್ಞಾನಿಯಾದ. ವೈವಿಧ್ಯಮಯವಾದ ಸಸ್ಯಗಳಲ್ಲಿ ತನಗೆ ಅಗತ್ಯವಾದ ಗುಣಗಳುಳ್ಳ ಸಸ್ಯಗಳನ್ನು ತಳಿ ಮಾಡುವ ವಿದ್ಯೆಯನ್ನು ಸಾವಿರಾರು ವರ್ಷಗಳ ಕಾಲ ಬೆಳೆಸಿಕೊಂಡು ಬಂದ. ಈ ವಿದ್ಯೆಯ ಹಿಂದಿರುವ ತತ್ವವನ್ನು ಅರಿಯುವುದಕ್ಕೆ ನಾವು ಹದಿನೆಂಟನೆಯ ಶತಮಾನದವರೆಗೂ ಕಾಯಬೇಕಾಯ್ತು.
ತಳಿ, ಕುಲಾಂತರಿ ಸಸ್ಯಗಳಿಂದ ಮನುಕುಲಕ್ಕೆ ಒದಗುವ ಅನುಕೂಲಗಳೇನು? ಕುಲಾಂತರಿ ಬೆಳೆಗಳ ವಿರುದ್ಧದ ವಾದಗಳು, ಸಾವಯವ ಕೃಷಿಯ ಪ್ರತಿಪಾದನೆ ಕೋಟ್ಯಂತರ ಜನರ ಆಹಾರ ಭದ್ರತೆಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಕೋವಿಡ್ ವೈರಾಣುವನ್ನು ಪತ್ತೆ ಹಚ್ಚುವ ಪಿಸಿಆರ್ ಪರೀಕ್ಷೆಗೂ ಉಪ್ಪಿಟ್ಟಿನಲ್ಲಿ ಹಾಕಿದ ಟೊಮೆಟೋ ರುಚಿಗೂ ಏನು ಸಂಬಂಧ? - ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪ್ರಧಾನ ವಿಜ್ಞಾನಿಯಾಗಿ ಕೆಲಸ ಮಾಡುತ್ತಿರುವ ಡಾ. ರವಿಶಂಕರ್.ಕೆ.ವಿ ಯವರೊಂದಿಗೆ ಚರ್ಚಿಸಿದ್ದೇವೆ.
ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಅರಳಿಕಟ್ಟೆಯಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 08 August 2021
Credits: Music: Crescents by Ketsa Licensed under creative commons. Icon made by Freepik from www.flaticon.com
ದೇಹ ಆರೋಗ್ಯ ತಪ್ಪಿದಂತೆಯೇ ಮನಸ್ಸಿನ ಆರೋಗ್ಯವೂ ತಪ್ಪುವ ಸಾಧ್ಯತೆ ಇರುತ್ತದೆ. ಆದರೆ ಮಾನಸಿಕ ರೋಗದ ಕುರಿತು ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳು ಇಂದಿಗೂ ಇವೆ.
ಈ ಪೀಳಿಗೆಯ ಮಕ್ಕಳಲ್ಲಿ ಏಕಾಂಗಿತನ ಹೆಚ್ಚು ಕಾಡುತ್ತದೆಯೇ? ಆತ್ಮಹತ್ಯೆ ಪ್ರಯತ್ನಗಳು ಗಂಡಸರಲ್ಲೇ ಹೆಚ್ಚು ಏಕೆ? ಮಾನಸಿಕ ಆರೋಗ್ಯದ ಕುರಿತು ನೆರವು ಅರಸುವುದರಲ್ಲಿ ಪುರುಷರಿಗೆ ಇರುವ ಅಡೆತಡೆಗಳೇನು? ಸ್ಕಿಜೊಫ್ರೇನಿಯ ಅಂದರೇನು? ಸೋಶಿಯಲ್ ಮೀಡಿಯಾ ವ್ಯಸನದಿಂದ ಮಾನಸಿಕ ಸ್ವಾಸ್ಥ್ಯದ ಮೇಲೆ ಉಂಟಾಗುವ ಪರಿಣಾಮವೇನು? ಇನ್ನೂ ಹಲವು ಆಸಕ್ತಿದಾಯಕ ಹಾಗೂ ಮಾಹಿತಿ ಪೂರ್ಣ ವಿಷಯಗಳ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ!
ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಚರ್ಚೆಯ ಎರಡನೆಯ ಭಾಗ ಎಪ್ಪತ್ತೆರಡನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
Recording date: 04 July 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಮಾನಸಿಕ ರೋಗ ಅನ್ನುವುದರ ಬಗ್ಗೆ ಎಷ್ಟೋ ತಪ್ಪು ಕಲ್ಪನೆಗಳು ಇವತ್ತಿಗೂ ಇದೆ. ಅದರ ಜೊತೆಗೆ ಅದರ ಬಗ್ಗೆ ಮುಕ್ತವಾಗಿ ಮಾತಾಡೋ ವಾತಾವರಣ ನಮ್ಮಲ್ಲಿ ಇನ್ನೂ ಸೃಷ್ಟಿಯಾಗಿ ಇಲ್ಲ. ಮಾನಸಿಕ ಒತ್ತಡ, ಆತಂಕ, ಖಿನ್ನತೆ ಮುಂತಾದ ಸಮಸ್ಯೆಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಇದರ ಬಗೆಗಿನ ಒಳನೋಟಗಳು ಬಹಳ ಮುಖ್ಯವಾಗುತ್ತದೆ. ಮಾನಸಿಕ ರೋಗ ಎಲ್ಲರಿಗೂ ಬರಬಹುದಾ? ಅಥವಾ 'ದುರ್ಬಲರು' ಅನ್ನಿಸಿಕೊಂಡವರಿಗೆ ಮಾತ್ರ ಬರುವುದಾ? ಇದು 'ಬೇಡದೆ ಇರುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವ' ಒಂದು ದುರಭ್ಯಾಸವಾ? ಅಥವಾ ನಮ್ಮ ನಿಯಂತ್ರಣಕ್ಕೂ ಮೀರಿದ ಜೀನ್ಸ್ ಕೈವಾಡವಿದೆಯಾ? ಇನ್ನೂ ಹತ್ತು ಹಲವಾರು ಆಯಾಮಗಳ ಬಗ್ಗೆ ಒಂದು ಮುಕ್ತ ಚರ್ಚೆ ಡಾ. ದಿವ್ಯ ಗಣೇಶ್ ನಲ್ಲೂರ್ ರೊಂದಿಗೆ ನಿಮ್ಮ ನೆಚ್ಚಿನ ಅರಳಿಕಟ್ಟೆಯಲ್ಲಿ!
ನಮ್ಮ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಚರ್ಚೆಯ ಮೊದಲ ಭಾಗ ಎಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
Recording date: 04 July 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಫುಕುವೋಕಾ ಅನ್ನುವ ಜಪಾನಿನ ವಿಜ್ಞಾನಿ ಆರಂಭಿಸಿದ ಸಹಜ ಕೃಷಿ ಎದುರಿಸಿದ ಮೊದಲ ಸವಾಲುಗಳೇನು, ಭಾರತದಲ್ಲಿ ಬೆಳೆದುಬಂದ ಕೃಷಿ ಪ್ರಯೋಗಗಳ ಇತಿಹಾಸ, ಆಧುನಿಕ ಕೃಷಿ ಪದ್ಧತಿಗಳ ಭ್ರಮೆಯನ್ನು ಹೇಗೆ ಸಾವಯವ ಕೃಷಿ ಎದುರಿಸಿತು, ಕುಲಾಂತರಿ ತಳಿಗಳ ಅನಾಹುತಗಳು ಮತ್ತು ಅದರ ಬಗ್ಗೆ ನಡೆದ ಹೋರಾಟ, ಭಾರತದಲ್ಲಿ ಬೀಜಗಳ ಸಂಸ್ಕೃತಿ ಮತ್ತು ಬೀಜಗಳ ವೈವಿಧ್ಯ ಎಂಥದ್ದು, ಬೀಜಗಳು ಹೇಗೆ ಒಂದು ಸಮುದಾಯದ ಸ್ವತ್ತು, ಇವತ್ತು ಸಮುದಾಯ ಬೀಜ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತಿವೆ, ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆಗಳು, ಇಂದು ಕಾಣುತ್ತಿರುವ ಆಶಾಕಿರಣ, ಆರ್ಗಾನಿಕ್ ಫಾರ್ಮಿಂಗ್ ವಿಚಾರದಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳ ಪಾತ್ರ - ಮುಂತಾದ ಎಷ್ಟೋ ವಿಚಾರಗಳ ಬಗ್ಗೆ ತಮ್ಮ ಅಮೂಲ್ಯವಾದ ಜೀವನದ ಅನುಭವಗಳನ್ನು 'ಸಹಜ ಸೀಡ್ಸ್' ಸಂಸ್ಥೆಯ ಕೃಷ್ಣ ಪ್ರಸಾದ್ ಮಾತನಾಡಿದ್ದಾರೆ.
Recording date: 13 June 2021

ಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು.
ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು?
ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ. ಸರಣಿಯ ಎರಡನೆಯ ಹಾಗೂ ಅಂತಿಮ ಭಾಗ ಅರವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 2 May 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಬಿಟ್ ಕಾಯಿನ್ ಕಳ್ಳ ಕಾಕರು, ಹ್ಯಾಕರ್ ಗಳು, ಅಪಹರಣಕಾರರು, ಡ್ರಗ್ ಡೀಲರುಗಳ ದುಡ್ಡು ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಹೊಸ ತಂತ್ರಜ್ಞಾನವನ್ನು ಕುರಿತ ಈ ಅಪನಂಬಿಕೆ, ಭಯ ಸಹಜವಾದದ್ದೇ. ಇಂದು ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲದ ಪ್ರಾರಂಭದ ದಿನಗಳಲ್ಲಿ ಇದೇ ರೀತಿಯ ಅಪನಂಬಿಕೆ ಜಾರಿಯಲ್ಲಿತ್ತು.
ಬಿಟ್ ಕಾಯಿನ್ ಗೂ ಈಗಾಗಲೇ ಬಳಕೆಯಲ್ಲಿರುವ ಡಿಜಿಟಲ್ ಹಣಕ್ಕೂ ಇರುವ ವ್ಯತ್ಯಾಸಗಳೇನು? ಬಿಟ್ ಕಾಯಿನ್ ಬಳಕೆಯನ್ನು ಅನುವು ಮಾಡಿಕೊಡುವ ಬ್ಲಾಕ್ ಚೈನ್ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಬಿಟ್ ಕಾಯಿನ್ ಆವಿಷ್ಕರಿಸಿದ ಸತೋಷಿ ನಾಕಮೊಟೊ ಎಂಬ ಗುಪ್ತನಾಮದ ಹಿಂದಿರುವ ರಹಸ್ಯವೇನು?
ಬಿಟ್ ಕಾಯಿನ್ ಕುರಿತ ಕಾದಂಬರಿ ರೂಪದ ಸೃಜನಶೀಲ ಕೃತಿ "ನಿಗೂಢ ನಾಣ್ಯ"ದ ಲೇಖಕರಾದ ವಿಟ್ಠಲ್ ಶೆಣೈ ನಮ್ಮ ಅತಿಥಿ. ಬಿಟ್ ಕಾಯಿನ್, ಬ್ಲಾಕ್ ಚೈನ್, ಕ್ರಿಪ್ಟೋ ನಾಣ್ಯಗಳ ಕುರಿತು ಅಬ್ಬರದ ಮಾಧ್ಯಮಗಳಲ್ಲಿ ಚರ್ಚೆಯಾಗದ ವಿಚಾರಗಳನ್ನು ಕುರಿತ ಚರ್ಚೆ ಎರಡು ಸಂಚಿಕೆಗಳಲ್ಲಿ ನಿಮ್ಮ ಮುಂದಿದೆ.
Recording date: 2 May 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- TV Anchors musing what is the internet, anyway: https://www.youtube.com/watch?v=UlJku_CSyNg
- Bitcoin white paper: https://bitcoin.org/bitcoin.pdf
ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ.
ಅನಿಮೇಶನ್, ವಿಶ್ಯುಯಲ್ ಎಫೆಕ್ಟ್ಸ್ ಹಾಗೂ ಚಿತ್ರ ನಿರ್ಮಾಣದ ದಿಕ್ಕನ್ನೇ ಬದಲಿಸುವ ಪರಿಣಾಮಕಾರಿ ತಂತ್ರಜ್ಞಾನಗಳು ಬಳಕೆಯಲ್ಲಿವೆ. ನಟ ಅಥವಾ ನಟಿಯೊಬ್ಬರ ಡಿಜಿಟಲ್ ನಕಲನ್ನು ಬಳಸಿ ನೂರಾರು ವರ್ಷಗಳ ಕಾಲ ಅವರು ನಟಿಸಿದ ಚಿತ್ರಗಳನ್ನು ನಿರ್ಮಿಸಲು ಸಾಧ್ಯ. ನೃತ್ಯ ಬರದ ನಟ ನಾಟ್ಯ ಪಟುವಾಗಬಲ್ಲ, ಈಜಲು ಬಾರದ ನಟಿ ಮೀನಿನಂತೆ ಈಜಬಲ್ಲಳು, ಅಳಲು ಬಾರದ ನಟರು ಪ್ರೇಕ್ಷಕರನ್ನು ಅಳುವ ಕಡಲಲ್ಲಿ ಮುಳುಗಿಸಬಲ್ಲರು. ಇವೆಲ್ಲವನ್ನು ಸಾಧ್ಯವಾಗಿಸುವ ಫೋಟೊ ಗ್ಯಾಮಿಟ್ರಿ ತಂತ್ರಜ್ಞಾನ ನಮ್ಮ ಬೆಂಗಳೂರಿನಲ್ಲೇ ಇರುವುದು ಎಷ್ಟು ಜನರಿಗೆ ತಿಳಿದಿದೆ?
ಕೋವಿಡ್ ನಂತರ ಚಿತ್ರ ನಿರ್ಮಾಣವನ್ನು ಆಮೂಲಾಗ್ರವಾಗಿ ಬದಲಿಸಬಲ್ಲ ಮತ್ತೊಂದು ತಂತ್ರಜ್ಞಾನ ವರ್ಚುಯಲ್ ಪ್ರೊಡಕ್ಷನ್. ದೈತ್ಯವಾದ ಅತ್ಯಾಧುನಿಕ ಎಲ್ ಇ ಡಿ ಗೋಡೆ, ತಾರಸಿಗಳನ್ನು ಕಟ್ಟಿ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಲೋಕೇಶನ್ನನ್ನು ಸ್ಟುಡಿಯೋದಲ್ಲೇ ನಿರ್ಮಿಸಲು ಸಾಧ್ಯ. ಈ ತಂತ್ರಜ್ಞಾನ ಬಳಸಿ ಡಿಸ್ನಿ ದಿ ಮ್ಯಾಂಡಲೋರಿಯನ್ ಸರಣಿಯನ್ನು ನಿರ್ಮಿಸಿದೆ. ಭಾರತದಲ್ಲೂ ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಬಳಸಿದ ದೊಡ್ಡ ಬಜೆಟ್ ನ ಚಿತ್ರಗಳು ತೆರೆಕಾಣಲಿವೆ.
ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ.
ನಿಮ್ಮ ಮುಂದಿರುವ ಅರವತ್ತಾರನೆಯ ಸಂಚಿಕೆ ನಮ್ಮ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ. ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್.
Recording date: 19 June 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Bhimsain Khurana - https://www.dsource.in/course/story-indian-animation/video/bhimsain-khurana
- Ram Mohan - https://www.dsource.in/course/story-indian-animation/video/ram-mohan
- Cricket flip book - https://www.youtube.com/watch?v=vBxFBgZy8OA
- Infobells Govina Haadu - https://www.youtube.com/watch?v=Lix-XLkFuvE
- ABAI - https://twitter.com/abai_avgc
- AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece
From the publisher's feed