Sign up to save your podcasts
Or

ನಮ್ಮಲ್ಲಿ ಬಹುತೇಕರಿಗೆ ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ಪೊಲೀಸರು ಹೇಗೆ ಕ್ರೈಂ ಪತ್ತೆ ಹಚ್ಚುತ್ತಾರೆ ಎನ್ನುವುದಕ್ಕೆ ಸಿನಿಮಾ, ಕಾದಂಬರಿಗಳು ಕಟ್ಟಿಕೊಡುವ ಚಿತ್ರಣಗಳಷ್ಟೇ ತಿಳಿದಿರುತ್ತವೆ. ಈ ಚಿತ್ರಣಗಳು ವಾಸ್ತವಕ್ಕೆ ಹತ್ತಿರವಾಗಿರುತ್ತವೆಯೇ?
ಪೊಲೀಸರಿಗೆ ತಮ್ಮ ಕೆಲಸ ನಿರ್ವಹಣೆಯಲ್ಲಿರುವ ಒತ್ತಡಗಳು ಯಾವುವು? ಪೊಲೀಸ್ ಪರಿಭಾಷೆಯಲ್ಲಿ ಚಪಾತಿ ಒತ್ತಿಸುವುದು, ಹಗ್ಗ ಹಾಕುವುದು, ಏರೋಪ್ಲೇನ್ ಹತ್ತಿಸುವುದು ಅಂದರೇನು? ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳರು "ನಮಗೆ ಕರೆಂಟ್ ಮಾಡ್ಸಿ ಸಾರ್" ಎಂದು ಪೊಲೀಸರನ್ನು ಗೋಗರೆಯುವುದು ಏಕೆ?
ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಸೇವೆಗೆ ಸೇರಿದ ಮೂರೇ ವರ್ಷಗಳಲ್ಲಿ ಹದಿಮೂರು ಬಾರಿ ಎತ್ತಂಗಡಿಗೊಂಡ (ಅವರದೇ ಭಾಷೆಯಲ್ಲಿ ಹೇಳುವುದಾದರೆ "unceremoniously kicked out") ಮೈಸೂರಿನ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ. ರಂಗಸ್ವಾಮಿಯವರ ಜತೆಗೆ ಚರ್ಚಿಸಿದ್ದೇವೆ.
ಮೈಸೂರಿನ ಕುಖ್ಯಾತ ರೌಡಿ ಮರ್ಡರ್ ರಿಯಾಜನ ಪೈಜಾಮದಲ್ಲಿ ಹಾವು ಬಿಟ್ಟು ಕೇಸಿಗೆ ಬೇಕಾದ ಮಾಹಿತಿಯನ್ನು ಬಾಯಿ ಬಿಡಿಸಿದ್ದು, ಹೈದರಾಬಾದಿನಲ್ಲಿ ವಿಸಿ ಸಜ್ಜನರ್ ಎಂಬ ಪೊಲೀಸ್ ಅಧಿಕಾರಿ ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಕೊಂದಿದ್ದು, ಪೊಲೀಸರು ಮಾಹಿತಿ ಕಲೆಹಾಕಲು ಬಳಸುವ ಮಾರ್ಗಗಳು ಹೀಗೆ ಹಲವರು ಪೊಲಿಟಿಕಲಿ ಇನ್ ಕರಕ್ಟ್ ಎಂದು ಭಾವಿಸಬಹುದಾದ ಅನೇಕ ವಿಚಾರಗಳನ್ನು ದಿಟ್ಟವಾಗಿ, ಪ್ರಾಮಾಣಿಕವಾಗಿ ರಂಗಸ್ವಾಮಿಯವರು ಚರ್ಚಿಸಿದ್ದಾರೆ. ಈ ಚರ್ಚೆಯ ಮೊದಲ ಭಾಗ ಅರಳಿಕಟ್ಟೆಯ ಐವತ್ತೈದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಜೆ.ಬಿ.ರಂಗಸ್ವಾಮಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.
Recording date: 7 March 2021
Credits: Music: Crescents by Ketsa Licensed under creative commons. Icon made by Freepik from www.flaticon.com
- Hyderabad case: Police kill suspects in rape and murder of Indian vet - https://www.bbc.com/news/world-asia-india-50682262
- Julio Ribeiro - https://en.wikipedia.org/wiki/Julio_Ribeiro_(police_officer)
- Polygraph test - https://indianexpress.com/article/explained/explained-polygraph-narco-analysis-lie-detector-test-5926426/
ಪಕ್ಷಿ ವೀಕ್ಷಣೆ ಅಂದರೆ ಏನು, ಪಕ್ಷಿ ಪ್ರಬೇಧಗಳು ಎಷ್ಟಿವೆ, ಪಕ್ಷಿಗಳ ವೈವಿಧ್ಯತೆಯಲ್ಲಿ ಭಾರತ ಹೇಗಿದೆ, ಪಕ್ಷಿ ವೀಕ್ಷಕರ ಸಂಖ್ಯೆ ಹೆಚ್ಚುತ್ತಿರುವ ದಿನಗಳಲ್ಲಿ ಯಾವ ಯಾವ ರೀತಿಯ ಪಕ್ಷಿ ಪ್ರೇಮಿಗಳನ್ನು ಕಾಣಬಹುದು, ಪರಿಸರದಲ್ಲಿ ಪಕ್ಷಿಗಳ ಪಾತ್ರ ಏನು, ಪಕ್ಷಿಗಳನ್ನು ಸಾಕುವುದರ ಬಗ್ಗೆ ಕಾನೂನು ಏನು ಹೇಳುತ್ತದೆ?
ಪಕ್ಷಿಗಳಲ್ಲಿ ಗಂಡು ಯಾವುದು ಹೆಣ್ಣು ಯಾವುದು ಎಂದು ತಿಳಿಯುವ ಬಗೆ ಹೇಗೆ, ಪಕ್ಷಿಗಳ ಸಂರಕ್ಷಣೆಯಲ್ಲಿ ಮೂಲನಿವಾಸಿಗಳಿಂದ ಉಂಟಾಗುವ ಸಹಾಯ ಮತ್ತು ವಿಪತ್ತುಗಳು ಯಾವ ರೀತಿಯವು?
ಫಿಲಂ ಫೆಸ್ಟಿವಲ್ ಅಲ್ಲಿ ಅರುಣಾಚಲ ಪ್ರದೇಶದ ಚಿತ್ರ ನೋಡಲು ಕಾತುರಳಾಗಿದ್ದಿದ್ದು ಯಾಕೆ - ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ಒಂದು ಮುಕ್ತ ಚಿಲಿಪಿಲಿ ಮಂಜುಳಾ ದೇಸಾಯಿ ಜೊತೆ ಅರಳಿಕಟ್ಟೆಯ ಐವತ್ನಾಲ್ಕನೆಯ ಸಂಚಿಕೆಯಲ್ಲಿ...
ಚರ್ಚೆಯಲ್ಲಿ ಭಾಗವಹಿಸಿದವರು ಮಂಜುಳಾ ದೇಸಾಯಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.
Recording date: 14 March 2021
Credits: Music: Crescents by Ketsa Licensed under creative commons. Icon made by Freepik from www.flaticon.com
- Bugun Liochicla - Photo courtesy: www.ebird.org
- Kakapo - Photo courtesy: Wikipedia Commons
ಕನ್ನಡಿಗರು ತಮ್ಮ ವಿಶಿಷ್ಟ ತಿನಿಸುಗಳ ಬಗ್ಗೆ ಕೊಚ್ಚಿಕೊಳ್ಳಲು ಯಾಕೆ ಹಿಂದುಮುಂದು ನೋಡುತ್ತಾರೆ? ರೆಡಿ ಟು ಈಟ್ ಮತ್ತು ರೆಡಿ ಟು ಕುಕ್ ನಡುವೆ ಇರುವ ವ್ಯತ್ಯಾಸ ಏನು? ಫುಡ್ ಸಂಬಂಧೀ ಕಂಪನಿ ಶುರು ಮಾಡುವ ವಿಧಿವಿಧಾನ ಏನು, ಅದಕ್ಕೆ ಲೈಸೆನ್ಸ್ ಪಡೆದುಕೊಳ್ಳುವ ಪ್ರಕ್ರಿಯೆ ಏನು, ಅದರಲ್ಲಿರುವ ಛಾಲೆಂಜುಗಳು ಯಾವುವು?
ಕೆಲವರಿಗೆ ಖಾರ ಜಾಸ್ತಿ ಇಷ್ಟ ಕೆಲವರಿಗೆ ಎಣ್ಣೆ ಕಮ್ಮಿ ಹೀಗೆ ಒಬ್ಬೊಬ್ಬರ ರುಚಿಯೂ ಬೇರೆಯಾಗಿರುವಾಗ ಬಹುತೇಕ ಎಲ್ಲರಿಗೂ ಸರಿಹೋಗುವಂತೆ ಒಂದು ಐಟಂ ಮಾಡುವುದು ಹೇಗೆ? ರೆಡಿ ಅಡಿಗೆ ಪದಾರ್ಥದಲ್ಲಿ ಬಳಸುವ ಸಾವಿರಾರು ಪ್ರಿಸರ್ವೇಟಿವ್ಸ್ ಯಾವ್ಯಾವ ಕಾರಣಕ್ಕೆ ಹಾಕುತ್ತಾರೆ, ಪ್ಯಾಕೆಟ್ ಹಿಂದೆ ಹಾಕಿರುವ ಮಾಹಿತಿಯಿಂದ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಹೇಗೆ ತಿಳಿದುಕೊಳ್ಳುವುದು? ತಮ್ಮದೇ ಒಂದು ಫುಡ್ ಸಂಬಂಧೀ ಕಂಪನಿ ಶುರುಮಾಡುವವರಿಗೆ ಕೊಡುವ ಸಲಹೆ ಸೂಚನೆಗಳು ಏನು?
ಹೀಗೆ ಹತ್ತು ಹಲವಾರು ವಿಚಾರಗಳ ಬಗ್ಗೆ ಐಪಾಕ ಓನರ್ ಬಿಂದು ಸುಶೀಲ್ ಜೊತೆ ಒಂದು ವಿಶೇಷ ಮಾತುಕತೆ ಅರಳಿಕಟ್ಟೆಯ ಐವತ್ಮೂರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ!
ಚರ್ಚೆಯಲ್ಲಿ ಭಾಗವಹಿಸಿದವರು ಬಿಂದು ಸುಶೀಲ್, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.
Recording date: 27 February 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಐವತ್ತು ಅರವತ್ತರ ವಯಸ್ಸಿನ ಆಸುಪಾಸಿನಲ್ಲಿ ಮನುಷ್ಯರನ್ನು ಕಾಡುತ್ತಿದ್ದವು ಮಧುಮೇಹ, ರಕ್ತದೊತ್ತಡ ಮೊದಲಾದ ಜೀವನಶೈಲಿ ಸಂಬಂಧಿತ ಖಾಯಿಲೆಗಳು ಈಗೀಗ ಮುವತ್ತು ನಲವತ್ತರ ವಯಸ್ಕರನ್ನೇ ನಲುಗಿಸುತ್ತಿವೆ. ದೈಹಿಕ ಶ್ರಮದಿಂದ ದೂರದವಾದ ಆಧುನಿಕ ಜೀವನಶೈಲಿಯಿಂದಾಗಿ ಈ ರೋಗಗಳಷ್ಟೇ ಅಲ್ಲದೆ ಕೀಲು ಸವೆತ, ಬೆನ್ನು, ಭುಜ, ಮೊಣಕೈ ನೋವು ಹೀಗೆ ಹಲವು ವಿಧದ ನೋವುಗಳು ಇಪ್ಪತ್ತರ ಹರೆಯದವರಲ್ಲೂ ಸಾಮಾನ್ಯವಾಗುತ್ತಿವೆ.
ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನಲ್ಲೂ ಏಕೆ ಅವಶ್ಯಕ? ಇದಕ್ಕೆ ಜಿಮ್ ಸೇರುವುದೊಂದೇ ಉಪಾಯವೇ? ಕೇವಲ ವಾಕ್ ಮಾಡುವುದರಿಂದ ಏನೂ ಉಪಯೋಗವಿಲ್ಲವೇ? ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಅತಿ ಸುಲಭವಾದ ಹಾಗೂ ಆಪ್ಯಾಯಮಾನವಾದ ಪರಿಹಾರ ದೀರ್ಘವಾದ ರಾತ್ರಿಯ ಸವಿನಿದ್ದೆ ಎನ್ನುವುದು ನಿಮಗೆ ತಿಳಿದಿದೆಯೇ?
ಅರಳಿಕಟ್ಟೆಯ ಐವತ್ತೆರಡನೆಯ ಸಂಚಿಕೆಯಲ್ಲಿ ನಾವು ದಿಲ್ಲಿ ಡೇರ್ ಡೆವಿಲ್ ಐಪಿಎಲ್ ತಂಡ ಸೇರಿದಂತ ಅನೇಕ ವೃತ್ತಿಪರ ಕ್ರೀಡಾಪಟುಗಳ ಫಿಟ್ ನೆಸ್ ತರಬೇತುದಾರರಾಗಿ ಕೆಲಸ ಮಾಡಿರುವ ಕನ್ನಡಿಗ ಜೀತ್ ದೇವಯ್ಯರೊಂದಿಗೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಜೀತ್ ದೇವಯ್ಯ, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Recording date: 7 February 2021

ಅರಳಿಕಟ್ಟೆಯ ಐವತ್ತೊಂದನೆಯ ಸಂಚಿಕೆಯಲ್ಲಿ ನಾವು ದಿಲ್ಲಿ ಡೇರ್ ಡೆವಿಲ್ ಐಪಿಎಲ್ ತಂಡ ಸೇರಿದಂತ ಅನೇಕ ವೃತ್ತಿಪರ ಕ್ರೀಡಾಪಟುಗಳ ಫಿಟ್ ನೆಸ್ ತರಬೇತುದಾರರಾಗಿ ಕೆಲಸ ಮಾಡಿರುವ ಕನ್ನಡಿಗ ಜೀತ್ ದೇವಯ್ಯರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಜೀತ್ ದೇವಯ್ಯ, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Recording date: 7 February 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show Notes
- Coorg hockey Kuttappa - https://www.deccanchronicle.com/sports/in-other-news/080520/this-kuttappa-was-the-baahubali-of-coorg-hockey.html
- Kodava Hockey Festival - https://en.wikipedia.org/wiki/Kodava_Hockey_Festival
- Aralikatte Episode on Sleep: https://www.youtube.com/watch?v=HHP1kkUBBTY
ಎಂ.ಜಿ ರೋಡಿನ ಹೊಟೇಲೊಂದರಲ್ಲಿನ ಹರಟೆಯಲ್ಲಿ ಹೀಗೆ ಬಂದು ಹಾಗೆ ಮಾಯವಾಗಿದ್ದ ಐಡಿಯಾವೊಂದು ಕಾರ್ಯರೂಪಕ್ಕೆ ಬಂದು ಇವತ್ತಿಗೆ ಐವತ್ತು ವಾರಗಳು ಸಂದಿವೆ. ಏಪ್ರಿಲ್ ೫, ೨೦೨೦ರಂದು ಅರಳಿಕಟ್ಟೆಯ ಪಾಡ್ಕಾಸ್ಟಿನ ಮೊದಲ ಸಂಚಿಕೆ ಪ್ರಕಟವಾಯಿತು. ಈ ಪ್ರಯತ್ನ ಎಷ್ಟು ದಿನ ನಡೆಯಬಹುದು ಎನ್ನುವ ಸಂಶಯ ನಮಗೂ ಇತ್ತು.
ವಾರಕ್ಕೊಂದು ಸಂಚಿಕೆಯಂತೆ ಕಳೆದ ನಲತ್ತೊಂಭತ್ತು ವಾರಗಳಲ್ಲಿ ಸಂಚಿಕೆಗಳನ್ನು ಪ್ರಕಟಿಸಿ ಈ ವಾರ ನಾವು ಐವತ್ತನೆಯ ಸಂಚಿಕೆಗೆ ಕಾಲಿರಿಸಿದ್ದೇವೆ. ಈ ವಿಶೇಷ ಸಂಚಿಕೆಯನ್ನು ನಾವು ಅರಳಿಕಟ್ಟೆ ಪಾಡ್ ಕಾಸ್ಟ್ ಯೋಜನೆ ಶುರುವಾದ ಬಗೆ, ಈ ಸಣ್ಣ ಪ್ರಯತ್ನಕ್ಕೆ ನಮಗೆ ಸಿಕ್ಕ ಅರ್ಥಪೂರ್ಣವಾದ ಬೆಂಬಲ ಹಾಗೂ ವಿಚಾರಪೂರ್ಣವಾದ ಪ್ರತಿಕ್ರಿಯೆ, ಪಾಡ್ ಕಾಸ್ಟ್ ಎಂಬ ಮಾಧ್ಯಮದ ಗುಣಲಕ್ಷಣಗಳು ಹೀಗೆ ಅನೇಕ ವಿಚಾರಗಳನ್ನು ಅವಲೋಕಿಸುವಕ್ಕೆ ಮೀಸಲಿಟ್ಟಿದ್ದೇವೆ.
ಅರಳಿಕಟ್ಟೆಯ ಚರ್ಚೆಗಳನ್ನು ಮಾಹಿತಿಪೂರ್ಣವೂ, ಕುತೂಹಲಕಾರಿಯೂ ಆಗುವಂತೆ ಮಾಡಿದ ನಮ್ಮೆಲ್ಲ ಅತಿಥಿಗಳಿಗೆ ಈ ಸಂಚಿಕೆಯನ್ನು ಸಮರ್ಪಿಸುತ್ತಿದ್ದೇವೆ. ನಿಮ್ಮೆಲ್ಲರ ಬೆಂಬಲ ಹೀಗೇ ಮುಂದುವರೆಯಲಿ ಕನ್ನಡದಲ್ಲಿ ಇನ್ನಷ್ಟು ಇಂತಹ ಪ್ರಯತ್ನಗಳಿಗೆ ಅದು ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇವೆ.
ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Recording date: 17 January 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಬೆಂಗಳೂರು ಶುರುವಾಗಿದ್ದು ಯಾವಾಗ? ತಾವು ಐಟಿ ಬಿಟಿ ನೌಕರಿಗಾಗಿ ಪರರಾಜ್ಯದಿಂದ ವಲಸೆ ಬಂದು ನೆಲೆಸಿದಾಗ ಎಂದು ಕೆಲವರು ಉತ್ತರಿಸಬಹುದು. ಇನ್ನು ಸ್ವಲ್ಪ ಹಿಂದಕ್ಕೆ ಹೋದರೆ, ಎಚ್ ಎ ಎಲ್ ನಂತಹ ಉದ್ದಿಮೆಗಳನ್ನು ಭಾರತ ಸರಕಾರ ಪ್ರಾರಂಭಿಸಿದಾಗ ಎಂದು ಉತ್ತರಿಸಬಹುದು. ಹಿಂದೆ ಇನ್ನಷ್ಟು ಹೋದರೆ ಬ್ರಿಟೀಷರು ಕಂಟೋನ್ ಮೆಂಟ್ ಕಟ್ಟಿದಾಗ ಎಂದು ಹೇಳಬಹುದು. ಅಲ್ಲಿಗೆ ನಿಲ್ಲದೆ ಹಿಂದಕ್ಕೆ ಹೋದರೆ ಕೆಂಪೇಗೌಡರು ಕೋಟೆ ಕಟ್ಟಿ ಸಂಸ್ಥಾನ ಸ್ಥಾಪಿಸಿದಾಗ ಎಂಬ ಉತ್ತರ ಕೊಡಬಹುದು. ಜೊತೆಗೆ ವೃದ್ಧೆಯೊಬ್ಬಳ ಕೈಯಿಂದ ಬೆಂದ ಕಾಳನ್ನು ತಿಂದು ಈ ನೆಲವನ್ನು ಬೆಂಗಳೂರು ಎಂದು ಕೆಂಪೇಗೌಡರು ಕರೆದರು ಎಂಬ ದಂತಕತೆಯನ್ನೂ ನೆನಪಿಸಬಹುದು.
ಆದರೆ ಬೆಂಗಳೂರಿನ ಇತಿಹಾಸ ಹಾಗೂ ಪರಂಪರೆ ಅದಕ್ಕಿಂತ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಿಮಗೆ ತಿಳಿದಿದೆಯೇ? ಜಾಲಹಳ್ಳಿಯಲ್ಲಿ ದೊರಕಿದ ಮೈಕ್ರೊಲಿಥ್ ಕಲ್ಲಿನ ಸಲಕರಣೆಗಳು, ಚಿಕ್ಕಜಾಲದಲ್ಲಿ ದೊರಕಿದ ರೋಮನ್ ನಾಣ್ಯಗಳು ಬೆಂಗಳೂರಿನ ಅಸ್ಪಷ್ಟ ಆದರೆ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.
ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುತ್ತ, ಆಸಕ್ತಿಯಿಂದ ಇತಿಹಾಸದ ಓದನ್ನೂ ಕೈಗೆತ್ತಿಕೊಂಡು ಬೆಂಗಳೂರಿನ ಇತಿಹಾಸಕ್ಕೆ ದರ್ಪಣಹಿಡಿಯುವ ಶಾಸನಗಳ ಹುಡುಕಾಟ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿನಯ್ ಕುಮಾರ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಲವತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ!
ಚರ್ಚೆಯಲ್ಲಿ ಭಾಗವಹಿಸಿದವರು ವಿನಯ್ ಕುಮಾರ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Recording date: 24 January 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show Notes
- Great Trigonometrical Survey of India: https://issuu.com/udayakumarp.l/docs/the_story_of_the_bangalore_baseline
- Inscription stones of Bengaluru: https://www.facebook.com/groups/inscriptionstones/ https://scroll.in/magazine/874966/a-hunt-for-bengalurus-forgotten-inscription-stones-is-tracing-the-history-of-kannada-and-the-city https://twitter.com/inscriptionblr/status/1111103216723202048/photo/1
- Beguru inscription implies that Bengaluru is atleast 1,129 years old : https://www.deccanherald.com/state/top-karnataka-stories/what-s-in-a-stone-a-city-s-age-780799.html
- Hebbal Kittayya inscription: https://en.wikipedia.org/wiki/Hebbal-Kittayya_inscription
- Pattandur lake inscription: https://timesofindia.indiatimes.com/city/bengaluru/11th-century-stone-inscription-found-in-graveyard/articleshow/63790576.cms
- Abraham flexner essay Usefulness of useless knowledge: https://press.princeton.edu/books/hardcover/9780691174761/the-usefulness-of-useless-knowledge
Episode sponsored by MyLang Books : https://mylang.in/
Use exclusive promo code AK20 to get flat 20% off on your first purchase.
Use exclusive promo code AK10 to get flat 10% off on every purchase.
ಬೆಂಗಳೂರು ಶುರುವಾಗಿದ್ದು ಯಾವಾಗ? ತಾವು ಐಟಿ ಬಿಟಿ ನೌಕರಿಗಾಗಿ ಪರರಾಜ್ಯದಿಂದ ವಲಸೆ ಬಂದು ನೆಲೆಸಿದಾಗ ಎಂದು ಕೆಲವರು ಉತ್ತರಿಸಬಹುದು. ಇನ್ನು ಸ್ವಲ್ಪ ಹಿಂದಕ್ಕೆ ಹೋದರೆ, ಎಚ್ ಎ ಎಲ್ ನಂತಹ ಉದ್ದಿಮೆಗಳನ್ನು ಭಾರತ ಸರಕಾರ ಪ್ರಾರಂಭಿಸಿದಾಗ ಎಂದು ಉತ್ತರಿಸಬಹುದು. ಹಿಂದೆ ಇನ್ನಷ್ಟು ಹೋದರೆ ಬ್ರಿಟೀಷರು ಕಂಟೋನ್ ಮೆಂಟ್ ಕಟ್ಟಿದಾಗ ಎಂದು ಹೇಳಬಹುದು. ಅಲ್ಲಿಗೆ ನಿಲ್ಲದೆ ಹಿಂದಕ್ಕೆ ಹೋದರೆ ಕೆಂಪೇಗೌಡರು ಕೋಟೆ ಕಟ್ಟಿ ಸಂಸ್ಥಾನ ಸ್ಥಾಪಿಸಿದಾಗ ಎಂಬ ಉತ್ತರ ಕೊಡಬಹುದು. ಜೊತೆಗೆ ವೃದ್ಧೆಯೊಬ್ಬಳ ಕೈಯಿಂದ ಬೆಂದ ಕಾಳನ್ನು ತಿಂದು ಈ ನೆಲವನ್ನು ಬೆಂಗಳೂರು ಎಂದು ಕೆಂಪೇಗೌಡರು ಕರೆದರು ಎಂಬ ದಂತಕತೆಯನ್ನೂ ನೆನಪಿಸಬಹುದು.
ಆದರೆ ಬೆಂಗಳೂರಿನ ಇತಿಹಾಸ ಹಾಗೂ ಪರಂಪರೆ ಅದಕ್ಕಿಂತ ಸಾವಿರಾರು ವರ್ಷಗಳಷ್ಟು ಹಳೆಯದು ಎಂದು ನಿಮಗೆ ತಿಳಿದಿದೆಯೇ? ಜಾಲಹಳ್ಳಿಯಲ್ಲಿ ದೊರಕಿದ ಮೈಕ್ರೊಲಿಥ್ ಕಲ್ಲಿನ ಸಲಕರಣೆಗಳು, ಚಿಕ್ಕಜಾಲದಲ್ಲಿ ದೊರಕಿದ ರೋಮನ್ ನಾಣ್ಯಗಳು ಬೆಂಗಳೂರಿನ ಅಸ್ಪಷ್ಟ ಆದರೆ ಪುರಾತನವಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ.
ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಏರೋ ಸ್ಪೇಸ್ ಇಂಜಿನಿಯರಿಂಗ್ ಓದುತ್ತ, ಆಸಕ್ತಿಯಿಂದ ಇತಿಹಾಸದ ಓದನ್ನೂ ಕೈಗೆತ್ತಿಕೊಂಡು ಬೆಂಗಳೂರಿನ ಇತಿಹಾಸಕ್ಕೆ ದರ್ಪಣಹಿಡಿಯುವ ಶಾಸನಗಳ ಹುಡುಕಾಟ, ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಿನಯ್ ಕುಮಾರ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗ ನಲವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ!
ಚರ್ಚೆಯಲ್ಲಿ ಭಾಗವಹಿಸಿದವರು ವಿನಯ್ ಕುಮಾರ್, ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Recording date: 24 January 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show Notes
- Lal bagh Peninsular Gneiss: https://en.wikipedia.org/wiki/Peninsular_Gneiss
- Commander KRU Todd : http://journal.antiquity.ac.uk/projgall/ruikar340
- A Microlithic Industry in Eastern Mysore - https://www.jstor.org/stable/2792452?seq=1
- Bangalore Science Forum started by H Narasimhaiah - https://www.facebook.com/BangaloreScienceForum/
- B L Rice - https://en.wikipedia.org/wiki/B._Lewis_Rice
- ಬೆಂಗಳೂರು ಪರಂಪರೆ : https://mylang.in/products/bengaluru-parampare-inr
- ಪುರಾತತ್ವ ಪಿತಾಮಹ ಬಿ ಎಲ್ ರೈಸ್ : https://munnota.com/product/puratatva-pitamaha-b-l-rice/
Episode sponsored by MyLang Books : https://mylang.in/
Use exclusive promo code AK20 to get flat 20% off on your first purchase.
Use exclusive promo code AK10 to get flat 10% off on every purchase.
ಇಷ್ಟವಾದ ಪುಸ್ತಕ ಹೆಚ್ಚು ಜನರಿಗೆ ತಲುಪಿಸ ಬೇಕೆಂಬ ಹುಮ್ಮಸಿನಿಂದ ತರ್ಜುಮೆ ಕೆಲಸ ಪ್ರಾರಂಭಿಸಿದ ಸಂಯುಕ್ತ ಪುಲಿಗಲ್ ಇದೀಗ ಎರಡು ಪುಸ್ತಕಗಳ ಮುಗಿಸಿದ್ದಾರೆ! ಪರ್ವತದಲ್ಲಿ ಪವಾಡ ಹಾಗು ತುಂಬಾ ಮೆಚ್ಚಿಗೆ ಪಡೆದ ಮನು ಪಿಳ್ಳೈ ಅವರ "ರೆಬೆಲ್ ಸುಲ್ತಾನ್ಸ್" ಪುಸ್ತಕವನ್ನು ಅನುವಾದಿಸಿದ್ದಾರೆ. ಈ ಪುಸ್ತಕದ ಬಗ್ಗೆ ,ತರ್ಜುಮೆ ಮಾಡುವಾಗ ಬರುವ ಸವಾಲುಗಳ ಹಾಗು ಇತಿಹಾಸ ಅಧ್ಯನ ಯಾಕೆ ಮಾಡ ಬೇಕು ಅನ್ನುವುದರ ಕುರಿತ ಮಾತುಕತೆ ಅರಳಿಕಟ್ಟೆಯ ನಲವತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸಂಯುಕ್ತ ಪುಲಿಗಲ್.
Recording date: 10 January 2021
Credits: Music: Crescents by Ketsa Licensed under creative commons. Icon made by Freepik from www.flaticon.com
From the publisher's feed