ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಭಗವದ್ಗೀತೆಯನ್ನೋ, ಸಣ್ನದೊಂದು ಗುಲಾಬಿಯನ್ನೋ ಉಚಿತವಾಗಿ ಹಂಚುವ ಹರೇ ಕೃಷ್ಣ ಸಂಸ್ಥೆಯ ಸದಸ್ಯರನ್ನು ನೀವು ಕಂಡಿರಬಹುದು. ಆದರೆ ಮನವೊಲಿಸುವಿಕೆಯ ಪರಿಣಾಮಕಾರಿ ತಂತ್ರವೊಂದನ್ನು ಬಳಸಿ ಮಿಲಿಯನ್ ಡಾಲರ್ ಗಟ್ಟಲೆ ದೇಣಿಗೆಯನ್ನು ಈ ಸಂಸ್ಥೆ ಗಳಿಸಿದ್ದು ಹೇಗೆ ಗೊತ್ತೆ?
ಕೊರಿಯಾ ಯುದ್ಧದಲ್ಲಿ ಅಮೇರಿಕಾದ ಕೈದಿಗಳಿಂದ ಮಾಹಿತಿ ಸಂಗ್ರಹಿಸಲು ಉತ್ತರ ಕೊರಿಯಾ ಅವರಿಗೆ ಚಿತ್ರ ಹಿಂಸೆ ನೀಡಿದರೆ ಚೀನೀ ಸೆರೆಮನೆ ಅಧಿಕಾರಿಗಳು ಸೂಕ್ಷ್ಮವಾದ ಮನಶಾಸ್ತ್ರೀಯ ತಂತ್ರಗಳನ್ನು ಬಳಸಿ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು ಹೇಗೆ ಗೊತ್ತೆ?
ದಿನನಿತ್ಯದ ಸಾಮಾನ್ಯ ಬದುಕಿನಿಂದ ತೊಡಗಿ, ವ್ಯಾಪಾರಿಗಳು, ದೇಣಿಗೆ ಸಂಗ್ರಹಿಸುವ ಸರಕಾರೇತರ ಸಂಸ್ಥೆಗಳು, ರಾಜಕೀಯ ಪಕ್ಷಗಳು ಹೀಗೆ ಅನೇಕರು ಬಳಸುವ ಮನವೊಲಿಸುವ ತಂತ್ರಗಳನ್ನು ಕುರಿತು ಸುದೀರ್ಘವಾಗಿ ಸಂಶೋಧನೆ ನಡೆಸಿ ಡಾ. ರಾಬರ್ಟ್ ಚಲ್ದಿನಿ ಬರೆದ ಪುಸ್ತಕ ಇನ್ಫ್ಲುಯೆನ್ಸ್ (Influence, the psychology of persuasion) ಕುರಿತ ಚರ್ಚೆ ಮುವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.
Recording date: 20 September 2020
Credits: Music: Crescents by Ketsa Licensed under creative commons. Icon made by Freepik from www.flaticon.com