ಸಿರಿಯಾ, ಯೆಮೆನ್, ಅಫಘಾನಿಸ್ಥಾನ, ಭಾರತದೊಳಗಿನ ಕಾಶ್ಮೀರ, ಮಣಿಪುರ, ಛತ್ತೀಸ್ ಘಡ ಮೊದಲಾದ ಸಂಘರ್ಷಮಯ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ಗಡಿಗಳಿಲ್ಲದ ವೈದ್ಯರು ಸಂಸ್ಥೆಯಲ್ಲಿ ಕೆಲಸ ಮಾಡುವ ವೈದ್ಯ ಡಾ. ಹಿಮಾಂಶು ಅಕ್ಕಮಹಾದೇವಿ ಅರಳಿಕಟ್ಟೆಯ ಹದಿನಾಲ್ಕನೆಯ ಸಂಚಿಕೆಯಲ್ಲಿ ನಮ್ಮೊಂದಿಗಿದ್ದಾರೆ.
ಈ ಸಂಚಿಕೆಯಲ್ಲಿ ನಾವು ರೆಡ್ ಕ್ರಾಸ್ ನಿಂದ ಎಂ ಎಫ್ ಎಸ್ (ಮೆಡಿಸಿನ್ ಸಾನ್ ಫ್ರಾಂಟಿಯೇರ್) ಹೇಗೆ ಭಿನ್ನ, ಸಂಸ್ಥೆ ಶುರುವಾದದ್ದು ಹೇಗೆ, ಅದು ಹೇಗೆ ಕೆಲಸ ಮಾಡುತ್ತದೆ, ಸಂಘರ್ಷಗಳಿರುವ ಪ್ರದೇಶಗಳಲ್ಲಿ ಕೆಲಸ ಮಾಡುವ ವೈದ್ಯರು ಎದುರಿಸುವ ಸಮಸ್ಯೆಗಳೇನು, ಭಾರತದಲ್ಲಿನ ಹಲವು ಪ್ರದೇಶಗಳಲ್ಲಿ ಕೆಲಸ ಮಾಡಿರುವ ಹಿಮಾಂಶು ಸಂಘರ್ಷಗಳ ಬಗ್ಗೆ ಪಡೆದ ಒಳನೋಟಗಳೇನು ಎಂದು ಚರ್ಚಿಸಿದ್ದೇವೆ.
ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಹಿಮಾಂಶು ಅಕ್ಕಮಹಾದೇವಿ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.
Note: Views expressed by the guest are personal, cannot be attributed to the employer.
Music : Crescents by Ketsa Licensed under creative commons.
Icon made by Freepik from www.flaticon.com