
Sign up to save your podcasts
Or


ವ್ಯಾಸಂಗದಲ್ಲಿ ಮೆಕಾನಿಕಲ್ ಇಂಜಿಯರ್, ವೃತ್ತಿಯಲ್ಲಿ ವರ್ತಕರು, ಪ್ರವೃತ್ತಿಯಲ್ಲಿ ಇತಿಹಾಸ ಪ್ರಿಯರು, ಟಿಪ್ಪು ಸುಲ್ತಾನನ ಆಳ್ವಿಕೆಯ ಕುರಿತು ಆಳವಾಗಿ ಸಂಶೋಧನೆ ಮಾಡಿರುವ ನಿತಿನ್ ಜಾರ್ಜ್ ಓಲಿಕಾರ ಈ ಸಂಚಿಕೆಯ ಅರಳಿಕಟ್ಟೆ ಪಾಡ್ ಕಾಸ್ಟಿನಲ್ಲಿ ನಮ್ಮೊಂದಿಗಿದ್ದಾರೆ.
ಮಾರ್ವಾಡಿ, ಚೆಟ್ಟಿಯಾರ್, ಮುಲ್ತಾನಿ, ಸಿಂಧಿ, ಶೆಟ್ಟಿ ಮುಂತಾದ ಜನಾಂಗಗಳು ಪ್ರಾಚೀನ ಭಾರತದಲ್ಲಿನ ಹಣಕಾಸು ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿದ್ದು ಹೇಗೆ? ಅವರ ಪ್ರಭಾವ ಎಷ್ಟರ ಮಟ್ಟಿಗೆ ಆವರಿಸಿತ್ತು?
ಹಣಕಾಸು, ಲೇವಾದೇವಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೇವಲ ಕೆಲವು ಜಾತಿಯ ಜನರು ತೊಡಗಿಸಿಕೊಂಡಿದ್ದು ಭಾರತಕ್ಕೆ ವಿಶಿಷ್ಟವಾದ ವಿಚಾರವೇ ಅಥವಾ ಜಗತ್ತಿನ ಬೇರೆ ಪ್ರದೇಶಗಳಲ್ಲೂ ನಾವು ಈ ಬಗೆಯ ಪ್ರಭಾವವನ್ನು ಕಾಣಬಹುದೇ?
ಅರಳಿಕಟ್ಟೆಯ ಆರನೆಯ ಸಂಚಿಕೆ ನಾವು ಬೆಂಗಳೂರಿನ ಸುಚಿತ್ರ ಫಿಲಂ ಸೊಸೈಟಿಯ ಸದಸ್ಯರಾದ ಹರೀಶ್ ಮಲ್ಯರೊಂದಿಗೆ ಸಿನೆಮ ಕುರಿತ ಮಾತುಕತೆಗೆ ಮೀಸಲಿಟ್ಟಿದ್ದೇವೆ.
೨೦೦೦ ರ ಆಸುಪಾಸಿನಲ್ಲಿ ಜಾಗತಿಕ ಸಿನಿಮಾಸಕ್ತರು ಚಿತ್ರಮಂದಿರಗಳಿಗಿಂತ ಹೆಚ್ಚಾಗಿ ಬೆಂಗಳೂರಿನ ನ್ಯಾಶನಲ್ ಮಾರ್ಕೇಟಿಗೆ ಎಡತಾಕುತ್ತಿದ್ದುದರ ಉದ್ದೇಶವೇನು? 'ಫಾರಿನ್ ಫಿಲಂ'ಗಳನ್ನು ಅರಸಿಕೊಂಡು ನ್ಯಾಶನಲ್ ಮಾರುಕಟ್ಟೆಗೆ ಹೋಗಿದ್ದ ಮುಕುಂದ್ ರ ಮಜವಾದ ಅನುಭವ ಹೇಗಿತ್ತು?
ಕೇರಳ, ತಮಿಳುನಾಡು, ಕಲ್ಕತ್ತಾದಲ್ಲಿರುವ ಸಿನೆಮಾ ಸಂಸ್ಕೃತಿ ಕನ್ನಡದಲ್ಲಿ ಕಾಣದಿರುವುದಕ್ಕೂ ಸಿಲಿಕಾನ್ ವ್ಯಾಲಿಗೂ ಏನು ಸಂಬಂಧ. ಆಟೋ ರಿಕ್ಷಾ ಡ್ರೈವರಿಗೆ ಕುವೆಂಪು ಗೊತ್ತು ಆದರೆ ಕಾಸರವಳ್ಳಿ ಗೊತ್ತಿಲ್ಲ, ಇದನ್ನ ಹೇಗೆ ತಿದ್ದುವುದು? ಸಿನಿಮಾವೊಂದನ್ನು ನಿರ್ಮಿಸುವುದಕ್ಕೆ ಕನಿಷ್ಠ ೭೫ ಲಕ್ಷದಿಂದ ಒಂದು ಕೋಟಿ ರುಪಾಯಿಗಳ ಹೂಡಿಕೆ ಬೇಕು. ನಾವು ಅತಿ ಸಣ್ಣ ಬಜೆಟ್ಟಿನಲ್ಲಿ ಸಿನಿಮಾ ಮಾಡುತ್ತೀವಿ ಎನ್ನುವುದು ಕೇವಲ ಕನಸಿನ ಕುದುರೆಯೇ? ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಹರೀಶ್ ಮಲ್ಯ, ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್.
Recording date: 10 May 2020
Credits:
Music : Crescents by Ketsa Licensed under creative commons.
Icon made by Freepik from www.flaticon.com
ನೂರು ಹಗ್ಗಗಳನ್ನ ಹಾವು ಅಂದುಕೊಂಡರೆ ಯಾವುದೇ ನಷ್ಟವಿಲ್ಲ ಆದರೆ ಒಂದು ಹಾವನ್ನು ಹಗ್ಗ ಎಂದು ಭಾವಿಸಿದರೆ ಅದು ಪ್ರಾಣಾಘಾತುಕವಾದೀತು ಎನ್ನುವ ಮನುಷ್ಯ ವಿಕಾಸದ ತಥ್ಯಕ್ಕೂ ಅರ್ನಬ್ ಗೋಸ್ವಾಮಿಯ ಬಫೆ ಮಾದರಿಯ ಪ್ಯಾನಲ್ ಚರ್ಚೆಗೂ ಏನು ಸಂಬಂಧ?
ಪ್ರತಿ ತಲೆಮಾರಿನ ಹಿರಿಯರು ತಮ್ಮ ಬಾಲ್ಯದ ಅಥವಾ ಯೌವನದ ದಿನಗಳು ಸ್ವರ್ಣಯುಗ, ಆ ಯುಗದ ಸಂಗೀತ, ಹಾಡುಗಳು, ಸಿನೆಮಾಗಳು, ಜೀವನ ಪದ್ಧತಿಯೇ ಶ್ರೇಷ್ಠ ಎಂದು ಭಾವಿಸುವುದರಲ್ಲಿ ಸತ್ಯ ಎಷ್ಟಿದೆ?
ಆಫೀಸಿನ ಮೀಟಿಂಗುಗಳಲ್ಲಿ, ಫೇಸ್ ಬುಕ್ಕಿನ ಚರ್ಚೆಗಳಲ್ಲಿ ಕೆಲವೊಮ್ಮೆ ದಡ್ದತನ ನಟಿಸುವುದು ನಿಜಕ್ಕೂ ಜಾಣತನ ಎಂದು ಸ್ಕಾಟ್ ಆಡಮ್ಸ್ ಹೇಳುವುದರ ಹಿಂದಿನ ತರ್ಕವೇನು?
ಸಾಮಾಜಿಕ ತಾಣಗಳಲ್ಲಿ ನಾವು ರಾಜಕೀಯ, ಸಾಮಾಜಿಕ ವಿಷಯಗಳನ್ನ ಚರ್ಚೆ ಮಾಡುವಾಗ ನಿಜಕ್ಕೂ ಸತ್ಯವನ್ನು ಅರಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವಾ ಅಥವಾ ನಾವು ಓದುವ ಪತ್ರಿಕೆ, ನೋಡುವ ಸುದ್ದಿ ಮಾಧ್ಯಮದಿಂದ ಅಂಟಿಸಿಕೊಂಡ ಅಭಿಪ್ರಾಯಗಳನ್ನು ಇನ್ನೊಬ್ಬರಿಗೆ ದಾಟಿಸುತ್ತೇವಾ?
ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ , ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್ .
Recording date: 03 May 2020
Credits:
Music : Crescents by Ketsa Licensed under creative commons.
Icon made by Freepik from www.flaticon.com
ಫೇಸ್ ಬುಕ್ಕಿನ ಮಾರ್ಕ್ ಜುಕರ್ ಬರ್ಗ್ ನಲವತ್ತು ಮೂರುವರೆ ಸಾವಿರ ಕೋಟಿ ರೂಪಾಯಿಗಳನ್ನ ಅಂಬಾನಿಯ ರಿಲಾಯನ್ಸ್ ಜಿಯೋನಲ್ಲಿ ಹೂಡಿರುವುದು ಅರಕಲಗೂಡಿನ ದಿನಸಿ ಅಂಗಡಿಯ ಮೇಲೆ ಯಾವ ಪರಿಣಾಮ ಬೀರಬಹುದು?
ಅಮೇಜಾನ್ ಕಂಪನಿ ಎಷ್ಟೋ ವರ್ಷಗಳಿಂದ ತೆರಿಗೆಯನ್ನೇ ಕಟ್ಟಿಲ್ಲ ಎನ್ನುವ ದೂರು ಎಷ್ಟು ಮಟ್ಟಿಗೆ ಸತ್ಯ?
ಅಮೇರಿಕಾ, ಯುರೋಪಿನಲ್ಲಿ ಇರುವಂತೆ ಭಾರತದಲ್ಲಿ ರೆಗುಲೇಟರಿ ಸಿಸ್ಟಂ ಇದೆಯೇ?
ದೊಡ್ಡ ಕಂಪೆನಿ, ಯಶಸ್ವಿ ಉದ್ದಿಮೆ, ಶ್ರಮಿಕ ಉದ್ಯಮಿಗಳ ಕುರಿತು ಹೆಚ್ಚಿನ ಜನರಿಗೆ ಇರುವ ರೇಜಿಗೆ, ಸಿಟ್ಟಿಗೆ ಇರುವ ಕಾರಣಗಳೇನು? ಇವು ಪ್ರಜಾಪ್ರಭುತ್ವವೊಂದರಲ್ಲಿ ರಾಜಕಾರಣಿಗಳಿಗೆ, ಹೋರಾಟಗಾರರಿಗೆ, ಪಾಲಿಸಿ ಬರೆಯುವವರಿಗೆ ಹಾಗೂ ಪತ್ರಕರ್ತರಿಗೆ ಯಾವ ರೀತಿಯ ಇನ್ಸೆಂಟೀವ್ ಗಳನ್ನು ಸೃಷ್ಟಿಸುತ್ತೆ?
ಆಸ್ಟ್ರೇಲಿಯ, ಫ್ರಾನ್ಸಿನಲ್ಲಿ ಗೂಗಲ್ ವಿರುದ್ಧ ಸುದ್ದಿ ಮಾಧ್ಯಮ ಕಂಪೆನಿಗಳು ನಡೆಸುತ್ತಿರುವ ಹಣಾಹಣಿಗೂ ಐಪಿಎಲ್ ಗೂ ಎತ್ತಣಿಂದ ಸಂಬಂಧ?
ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್ .
Recording date: 26 April 2020
Credits:
Music : Crescents by Ketsa Licensed under creative commons.
Icon made by Freepik from www.flaticon.com
ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್.
Recording date: 19 April 2020
Credits:
Music : Crescents by Ketsa Licensed under creative commons.
Icon made by Freepik from www.flaticon.com
ಇಟಲಿಯ ಮಿಲಾನ್ ನಲ್ಲಿ ವಾಸವಿರುವ ಕನ್ನಡಿಗ ಕಿರಣ್ ಕುಮಾರ್ ದಿನನಿತ್ಯದ ಜೀವನದ ಮೇಲೆ ಕೋವಿದ್ ಬೀರಿರುವ ಪರಿಣಾಮಗಳನ್ನು ನಮ್ಮೊಂದಿಗೆ ಚರ್ಚಿಸಿದ್ದಾರೆ.
Recording date: 11 April 2020
Credits:
Music : Crescents by Ketsa Licensed under creative commons.
Icon made by Freepik from www.flaticon.com
ಅರಳಿ ಕಟ್ಟೆಯಲ್ಲಿ ಹರಟುತ್ತಿರುವವರು ಮುಕುಂದ್ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್ ಕೆ ಎಸ್ .
Credits:
Music : Crescents by Ketsa Licensed under creative commons.
Icon made by Freepik from www.flaticon.com
From the publisher's feed