AraliKatte ಅರಳಿಕಟ್ಟೆ

AraliKatte ಅರಳಿಕಟ್ಟೆ

By AraliKatteSociety & Culture
Download on the App Store

AraliKatte ಅರಳಿಕಟ್ಟೆ episodes

  • Ep27: An insider's account of TV serials - ಧಾರಾವಾಹಿಗಳ ಜಗತ್ತಿನಲ್ಲೊಂದು ಸುತ್ತು

    ಲಕ್ಷಾಂತರ ಮನೆಗಳಲ್ಲಿ ದಿನಚರಿಯ ಭಾಗವಾಗಿರುವ ಧಾರಾವಾಹಿಗಳ ಕುರಿತು ಆಳವಾದ ಚರ್ಚೆಗಳು ನಡೆಯುವುದು ವಿರಳ. ನಮ್ಮ ದೇಶದಲ್ಲಿ ಸಿನಿಮಾಗಳಿಗಿಂತ ಎರಡು ಪಟ್ಟು ಹೆಚ್ಚು ಬಂಡವಾಳ ಆಕರ್ಷಿಸುವ ಹಾಗೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸುವ ಧಾರಾವಾಹಿಗಳ ಬಗ್ಗೆ ನಮಗೆಷ್ಟು ಗೊತ್ತು? ಗೊತ್ತಿರುವ ಸಂಗತಿಗಳಲ್ಲಿ ಎಷ್ಟು ವಾಸ್ತವಕ್ಕೆ ದೂರವಾದ ಪೂರ್ವಾಗ್ರಹಗಳು?

    ಅತ್ತೆ ಸೊಸೆಯರ ಕಿತ್ತಾಟದ ವಿಷಯಗಳನ್ನು ದಾಟಿ ಇಂದಿನ ಧಾರಾವಾಹಿಗಳು ಮುಂದುವರೆದಿರುವ ಹಾದಿಯ ಪರಿಚಯ ನಿಮಗಿದೆಯೇ? ಎಲ್ಲರೂ ಜಪಿಸುವ ಟಿ ಆರ್ ಪಿ ಎನ್ನುವ ಮಂತ್ರದ ಹಿಂದಿರುವ ಗುಟ್ಟೇನು? ಈ ಮಾಪನ ಹೇಗೆ ಕೆಲಸ ಮಾಡುತ್ತದೆ?

    ಧಾರಾವಾಹಿಗಳಲ್ಲಿ ಕಥೆ, ಚಿತ್ರಕಥೆ , ಸಂಭಾಷಣೆ ಬರೆಯುವ ಲೇಖಕರು ಹೇಗೆ ಕೆಲಸ ಮಾಡುತ್ತಾರೆ? ಅವರ ಬರವಣಿಗೆಯ ವ್ಯವಸ್ಥೆ ಹೇಗಿರುತ್ತದೆ? ಧಾರಾವಾಹಿಯ ಕಥೆಗಳು ಪ್ರಗತಿಪರವಾಗಿರುವುದಿಲ್ಲ ಎನ್ನುವ ಆರೋಪದಲ್ಲಿ ಹುರುಳಿದೆಯೇ? ವೀಕ್ಷಕರು ಧಾರಾವಾಹಿಗಳಲ್ಲಿ ಏನನ್ನು ನೋಡಲು ಬಯಸುತ್ತಾರೆ? ಎಂಬತ್ತು, ತೊಂಭತ್ತರ ದಶಕಗಳಲ್ಲಿ ರಾಜಕುಮಾರ್, ವಿಷ್ಣುವರ್ಧನ್ ರಂತಹ ನಟರು ಅಭಿನಯಿಸಿದ ಚಿತ್ರದ ಕಥೆಗಳನ್ನು ಈ ದಿನದ ಧಾರಾವಾಹಿಗಳು ಹೋಲುತ್ತವೆಯೇಕೆ?

    ಹೀಗೆ ಹಲವು ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಲೇಖಕ ಶ್ರೀನಿಧಿ.ಡಿ.ಎಸ್ ರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಅರಳಿಕಟ್ಟೆಯ ಇಪ್ಪತ್ತೇಳನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.

    ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿಧಿ.ಡಿ.ಎಸ್,  ಮುಕುಂದ್ ಸೆತ್ಲೂರ್,  ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.


    Credits:  Music: Crescents by Ketsa Licensed under creative commons.  Icon made by Freepik from www.flaticon.com

    1 hr
  • Ep26: Entrepreneurship and innovations in Kannada - ಕನ್ನಡದಲ್ಲಿ ಉದ್ದಿಮೆ ಹಾಗೂ ಹೊಸತನದ ಯೋಜನೆಗಳು

    ಕನ್ನಡಿಗರು ದೊಡ್ಡ ಉದ್ದಿಮೆಗಳನ್ನು ತೆರೆಯುವಲ್ಲಿ, ಹೊಸತನದ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಏಕೆ ಹಿಂದೆ ಬೀಳುತ್ತಾರೆ? ನಮ್ಮ ನೆರೆಯ ತಮಿಳರು, ತೆಲುಗರು, ಮಲಯಾಳಿಗಳಿಗೆ ಹೋಲಿಸಿದರೆ ಕನ್ನಡಿಗರು ಏಕೆ ತಮ್ಮ ಭಾಷೆಯ ಕುರಿತ ಸಶಕ್ತವಾದ ಐಡೆಂಟಿಟಿ ಹೊಂದಿಲ್ಲ? ಇದಕ್ಕೆ ಐತಿಹಾಸಿಕ, ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ಕಾರಣಗಳಿವೆಯೇ?

    ಕನ್ನಡವನ್ನು ಸೀಮಿತವಾದ ಭಾವನಾತ್ಮಕ ನೆಲೆಯಲ್ಲಿ ನೋಡದೆ ದಿನನಿತ್ಯದ ಬದುಕಿನಲ್ಲಿ ಕನ್ನಡಿಗರಿಗೆ ಅಗತ್ಯವಾದ ಸೇವೆಗಳನ್ನು ಒದಗಿಸುವುದು ಹೇಗೆ? ರಾಜಕೀಯ ಪಕ್ಷಗಳು ನಮ್ಮ ನುಡಿಯ ಕುರಿತಾದ ಸಮಸ್ಯೆಗಳಿಗೆ ಕಿವಿಗೊಡುವಂತೆ ಮಾಡುವುದು ಹೇಗೆ?

    ನಮ್ಮ ನುಡಿಯಲ್ಲಿ ಸೇವೆಗಳನ್ನು ಒದಗಿಸಲು ಸರ್ಕಾರ ಸೋತಿರುವಲ್ಲಿ ಮಾರುಕಟ್ಟೆ ಗೆದ್ದಿರುವುದು ಹೇಗೆ? ಕನ್ನಡಿಗರು ತಮ್ಮ ಕೀಳರಿಮೆಯನ್ನು ತೊಡೆದು ಆತ್ಮವಿಶ್ವಾಸದಿಂದ ನಮ್ಮದೇ ಭಾಷೆಯಲ್ಲಿ ಸೇವೆಗಳನ್ನು ಆಗ್ರಹಿಸುವುದು ಏಕೆ ಅಗತ್ಯ?

    ಇವೇ ಮೊದಲಾದ ಕುತೂಹಲಕರವಾದ ಪ್ರಶ್ನೆಗಳೊಂದಿಗೆ ನಾವು ಕನ್ನಡದ ಕೆಲಸಗಳಲ್ಲಿ ಅತೀವ ಆಸಕ್ತಿಯಿಂದ ತೊಡಗಿಸಿಕೊಂಡಿರುವ ವಸಂತ್ ಶೆಟ್ಟಿಯವರೊಂದಿಗೆ ಮಾತನಾಡಿದ್ದೇವೆ. ಕನ್ನಡದಲ್ಲಿ ಇ ಪುಸ್ತಕ, ಆಡಿಯೋ ಪುಸ್ತಕಗಳನ್ನು ಪ್ರಕಟಿಸಲು ಅವರು ಶುರು ಮಾಡಿರುವ ಮೈ ಲ್ಯಾಂಗ್ ಸಂಸ್ಥೆಯ ಕುರಿತೂ ಹಲವು ಒಳನೋಟಗಳುಳ್ಳ ಚರ್ಚೆ ಅರಳಿಕಟ್ಟೆಯ ೨೬ನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.

    ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್,  ವಾಸುಕಿ ರಾಘವನ್ ಹಾಗೂ ವಸಂತ ಶೆಟ್ಟಿ.


    Credits:  Music: Crescents by Ketsa Licensed under creative commons.  
    Icon made by Freepik from www.flaticon.com

    1 hr 35 min
  • Ep25: Mathew Walker's book "Why We sleep?" 2/2 - ನಾವೇಕೆ ನಿದ್ರಿಸುತ್ತೇವೆ? 2/2

    ನಿದ್ದೆಯ ವಿವಿಧ ಹಂತಗಳಾವುವು? ನಮಗೇಕೆ ಕನಸುಗಳು ಬೀಳುತ್ತವೆ? ಬೆಳಗಿನ ಹೊತ್ತು ಕಪ್ಪು ಕನ್ನಡಕ ಹಾಕಿಕೊಳ್ಳಬಾರದು ಏಕೆ? ನಿದ್ದೆ ಮಾತ್ರೆ, ಮದ್ಯಸೇವನೆಯಿಂದ ಒಳ್ಳೆ ನಿದ್ದೆ ಏಕೆ ಸಾಧ್ಯವಿಲ್ಲ? ನಿದ್ದೆಗೆಟ್ಟರೆ ದೇಹದ ತೂಕ ಹೆಚ್ಚುತ್ತದೆಯೇ? ಅಲಾರಾಂ ಗಡಿಯಾರದ ಸ್ನೂಜ್ ಬಟನ್ ಏಕೆ ಬಳಸಬಾರದು? - ಇವೇ ಮೊದಲಾದ ಕುತೂಹಲಕಾರಿ ವಿಚಾರಗಳನ್ನು ಒಳಗೊಂಡಿರುವ ಮ್ಯಾಥ್ಯು ವಾಕರ್ ರ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ"ದ ಕುರಿತ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.


    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    55 min
  • Ep24: Mathew Walker's book "Why We sleep?" - ನಾವೇಕೆ ನಿದ್ರಿಸುತ್ತೇವೆ?

    ತಿನ್ನಲು ಆಹಾರವಿಲ್ಲದೆ ಮನುಷ್ಯ ದಿನಗಟ್ಟಲೆ ಬದುಕಿರಬಲ್ಲ ಆದರೆ ಸತತವಾಗಿ ನಿದ್ದೆಯನ್ನು ತಪ್ಪಿಸಿದರೆ ಬದುಕಿರಲು ಅಸಾಧ್ಯ. ದಿನದ ಮೂರನೇ ಒಂದು ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಮನುಷ್ಯರಷ್ಟೇ ಅಲ್ಲ, ಇದುವರೆಗೆ ಅಧ್ಯಯನ ಮಾಡಿರುವ ಪ್ರತಿಯೊಂದು ಪ್ರಾಣಿಗೂ ನಿದ್ದೆ ಅತ್ಯವಶ್ಯಕ.

    ಜೀವಿಗಳ ವಿಕಾಸದ ಹಾದಿಯನ್ನು ಗಮನಿಸಿದರೆ ನಿದ್ದೆ ಬಹುದೊಡ್ಡ ತೊಡಕಾಗಿ ಕಾಣುತ್ತದೆ. ನಿದ್ರಿಸುವಾಗ ಜೀವಿ ಆಹಾರವನ್ನು ಅರಸಲು ಸಾಧ್ಯವಿಲ್ಲ, ಪರಭಕ್ಷಕ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಸಾಧ್ಯವಿಲ್ಲ, ಸಂತಾನೋತ್ಪತ್ತಿ, ಪೋಷಣೆಯಲ್ಲಿ ತೊಡಗಲು ಸಾಧ್ಯವಿಲ್ಲ. ಇಷ್ಟೆಲ್ಲ ಅನನಕೂಲಗಳಿದ್ದರೂ ನಿಸರ್ಗದಲ್ಲಿ ನಿದ್ದೆ ಪ್ರತಿಯೊಂದು ಜೀವಿಗೂ ಏಕೆ ಅತ್ಯಗತ್ಯ? ನಿದ್ದೆಗೆಟ್ಟರೆ ಆಗುವ ಅನಾಹುತಗಳೇನು ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ವೈಜ್ಞಾನಿಕ ಅಧ್ಯಯನಗಳನ್ನು ಆಧರಿಸಿ ಡಾ. ಮ್ಯಾಥ್ಯು ವಾಕರ್ ಬರೆದಿರುವ ಜನಪ್ರಿಯ ಪುಸ್ತಕ "ನಾವೇಕೆ ನಿದ್ರಿಸುತ್ತೇವೆ" (Why we sleep: Unlocking the Power of Sleep and Dreams) ಈ ಸಂಚಿಕೆಯ ಚರ್ಚೆಯ ವಿಷಯ.


    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    56 min
  • Ep23: Online entertainment in Kannda Part 2/2 - ಕನ್ನಡದಲ್ಲಿ ಆನ್ ಲೈನ್ ಮನರಂಜನೆ ಭಾಗ ೨/೨

    ಕನ್ನಡ ಸಿನಿಮಾಗಳಿಗೆ ಮಿನಿಮಲ್ ಪೋಸ್ಟರ್ ವಿನ್ಯಾಸ, ಫಾರಿನ್ ರಿಟರ್ನ್ಡ್ ಕಿರು ಚಲನಚಿತ್ರ ನಿರ್ಮಾಣ, "ಕಥೆ" ಹೆಸರಿನ ವಿನೂತನವಾದ ಯೋಜನೆಯ ನಿರ್ವಹಣೆ, ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾದ ಅಂಕಲ್ ಪಾತ್ರದ ಅಭಿನಯ ನಂತರ ಹಾನೆಸ್ಟ್ ವರ್ಕ್ ಫ್ರಂ ಹೋಮ್ ಸರಣಿಯ ಮೂಲಕ ಹೆಸರುವಾಸಿಯಾದ ಪುನೀತ್ ಬಿ ಎರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಇಪ್ಪತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

    ಈ ಸಂಚಿಕೆಯಲ್ಲಿ ನಾವು ಕನ್ನಡದಲ್ಲಿ ಹೊಸ ಪ್ರಯತ್ನಗಳು ಯಶಸ್ವಿಯಾಗುವುದಕ್ಕೆ ಏಕೆ ತುಂಬಾ ಸಮಯ ಹಿಡಿಯುತ್ತದೆ, ಯುಟ್ಯೂಬಿನಲ್ಲಿ ವಿಡಿಯೋಗಳನ್ನು ಮಾಡುವವರು ಎಷ್ಟು ಹಣ ಮಾಡುತ್ತಾರೆ, ಟಿಕ್ ಟಾಕ್, ಯುಟ್ಯೂಬ್ ಗಳಿಂದ ಎಲ್ಲರೂ ಚಲನಚಿತ್ರ ತಾರೆಯರಂತೆ ಜನಪ್ರಿಯರಾಗಬಹುದು ಎನ್ನುವ ಆಶಾವಾದ ಎಷ್ಟು ನಿಜ? ಹೀಗೆ ಹಲವು ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.

    ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಪುನೀತ್ ಬಿ ಎ, ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.

    Recording date: 09 August 2020

    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    45 min
  • Ep22: Online entertainment in Kannada - ಕನ್ನಡದಲ್ಲಿ ಆನ್ ಲೈನ್ ಮನರಂಜನೆ

    ಕನ್ನಡ ಸಿನಿಮಾಗಳಿಗೆ ಮಿನಿಮಲ್ ಪೋಸ್ಟರ್ ವಿನ್ಯಾಸ, ಫಾರಿನ್ ರಿಟರ್ನ್ಡ್ ಕಿರು ಚಲನಚಿತ್ರ ನಿರ್ಮಾಣ, "ಕಥೆ" ಹೆಸರಿನ ವಿನೂತನವಾದ ಯೋಜನೆಯ ನಿರ್ವಹಣೆ, ಸಾಮಾಜಿಕ ತಾಣಗಳಲ್ಲಿ ಜನಪ್ರಿಯವಾದ ಅಂಕಲ್ ಪಾತ್ರದ ಅಭಿನಯ ನಂತರ ಹಾನೆಸ್ಟ್ ವರ್ಕ್ ಫ್ರಂ ಹೋಮ್ ಸರಣಿಯ ಮೂಲಕ ಹೆಸರುವಾಸಿಯಾದ ಪುನೀತ್ ಬಿ ಎರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆಯ ಮೊದಲ ಭಾಗ ಇಪ್ಪತ್ತೆರಡನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

    ಈ ಸಂಚಿಕೆಯಲ್ಲಿ ನಾವು ಪುನೀತ್ ರ ಬಾಲ್ಯ, ಓದಿನ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಪೋಷಕರ ಪಾತ್ರ, ಪುನೀತ್ ತಮ್ಮ ಸೃಜನಶೀಲ ಪ್ರಯತ್ನಗಳನ್ನು ಯೋಜಿಸುವ, ಕಾರ್ಯರೂಪಕ್ಕೆ ತರುವ ಕ್ರಮ, ಕನ್ನಡ ಅಂತರ್ಜಾಲದಲ್ಲಿ ಮನರಂಜನೆ ಬೆಳೆದು ಬಂದ ಬಗೆ ಹೀಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ.


    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    1 hr 6 min
  • Ep21: An introduction to share markets 2/2 - ಶೇರು ಮಾರುಕಟ್ಟೆ ಕುರಿತು ನಿಮಗೆಷ್ಟು ಗೊತ್ತು? - ಭಾಗ ೨/೨

    ಯುದ್ಧ, ಕ್ಷಾಮ ಹೀಗೆ ಏನೇ ಅವಘಡಗಳಾದರೂ ದೇಶವೊಂದರ ಶೇರು ಮಾರುಕಟ್ಟೆ ನಿಲ್ಲುವುದಿಲ್ಲವೇಕೆ? ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟಲು ಇಡೀ ದೇಶ ತಿಂಗಳುಗಟ್ಟಲೆ ಬಂದ್ ಆಗಿದ್ದರೂ ಶೇರು ಮಾರುಕಟ್ಟೆ ಯಥಾವತ್ತಾಗಿ ನಡೆಯಲು ಹೇಗೆ ಸಾಧ್ಯ? ಒಂದೇ ದಿನದಲ್ಲಿ ಮುಕೇಶ್ ಅಂಬಾನಿಯ ಸಂಪತ್ತು ಇಷ್ಟು ಕೋಟಿ ಹೆಚ್ಚಿತು, ಅಮೇಜಾನಿನ ಜೆಫ್ ಬೇಜೋಸ್ ಇವತ್ತು ಬಿಲಿಯನ್ ಡಾಲರ್ ಕಳೆದುಕೊಂಡ ಎಂದು ಸುದ್ದಿ ಮಾಧ್ಯಮಗಳಲ್ಲಿ ಓದುತ್ತೀರಿ. ನಿಜಕ್ಕೂ ಇಲ್ಲಿ ಆಗುವುದೇನು? ದಿನವೊಂದರಲ್ಲಿ ಅಷ್ಟು ಹಣ ಸಂಪಾದಿಸಲು ಇಲ್ಲವೇ ಕಳೆದುಕೊಳ್ಳಲು ಹೇಗೆ ಸಾಧ್ಯ?

    ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಾವು ನಿತಿನ್ ಜಗತಾಪ್ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಇಪ್ಪತ್ತೊಂದನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.


    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    1 hr 2 min
  • E20: An introduction to share markets - ಶೇರು ಮಾರುಕಟ್ಟೆ ಕುರಿತು ನಿಮಗೆಷ್ಟು ಗೊತ್ತು?

    ಶೇರು ಮಾರುಕಟ್ಟೆ ಅಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೇಗಾಗುತ್ತದೆ? ಶೇರು ಮಾರುಕಟ್ಟೆಯಲ್ಲಿ ಯಾರು ಹಣ ಹೂಡಿಕೆ ಮಾಡಬಹುದು?

    ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನಾವು ನಿತಿನ್ ಜಗತಾಪ್ರೊಂದಿಗೆ ನಡೆಸಿದ ಮಾತುಕತೆಯ ಮೊದಲ ಭಾಗ ಅರಳಿಕಟ್ಟೆಯ ಇಪ್ಪತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.


    ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ನಿತಿನ್ ಜಗತಾಪ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್.

    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    1 hr 3 min
  • E19: Parents who adopted home schooling - ಮನೆಯಲ್ಲೇ ಶಾಲೆ ಶುರುಮಾಡಿದ ಪೋಷಕರ ಅನುಭವ

    ಹನ್ನೊಂದು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ರಮ್ಯ ಭಾರದ್ವಾಜ್ ತಮ್ಮ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಶಾಲೆಯಿಂದ ತೆಗೆಸಿ ಮನೆಯಲ್ಲಿಯೇ ಬೆಳೆಸುತ್ತಿದ್ದಾರೆ. ಅವರ ಪತಿ ಗಂಗಾಧರ್ ಕೃಷ್ಣನ್ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಹೊಸ ಅನುಭವಗಳಿಗೆ ಒಡ್ಡುತ್ತಾರೆ. ಇದನ್ನು ಅವರು ಹೋಮ್ ಸ್ಕೂಲಿಂಗ್, ರೋಡ್ ಸ್ಕೂಲಿಂಗ್, ಅನ್ ಸ್ಕೂಲಿಂಗ್ ಎಂದು ಕರೆಯುತ್ತಾರೆ. ದೇಶವ್ಯಾಪಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇ ಪಿ) ಕುರಿತು ಚರ್ಚೆಯಾಗುತ್ತಿದ್ದರೆ, ಶಾಲೆಯ ಶಿಕ್ಷಣವೇ ಬೇಡ ಮನೆಯಲ್ಲಿಯೇ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವ ಈ ಪೋಷಕರ ಜೊತೆಗೆ ನಡೆಸಿದ ಮಾತುಕತೆ ಅರಳಿಕಟ್ಟೆಯ ಹತ್ತೊಂಭತ್ತನೆಯ ಸಂಚಿಯಲ್ಲಿ ನಿಮ್ಮ ಮುಂದಿದೆ.

    ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಗಂಗಾಧರ್ ಕೃಷ್ಣನ್,ರಮ್ಯ ಭಾರದ್ವಾಜ್, ಮುಕುಂದ್ ಸೆತ್ಲೂರ್ ಹಾಗೂ ಸುಪ್ರೀತ್ ಕೆ ಎಸ್.

    Recording date: 20 July 2020

    Credits:

    Music : Crescents by Ketsa Licensed under creative commons.

    Icon made by Freepik from www.flaticon.com


    1 hr 27 min
  • E18: A few mental models to understand the world Part 2/2, ಕೆಲವು ಉಪಯುಕ್ತ ಮಾನಸಿಕ ಮಾದರಿಗಳು ಭಾಗ ೨/೨

    ಅರಳಿಕಟ್ಟೆಯ ಹದಿನಾರನೆಯ ಸಂಚಿಕೆಯಲ್ಲಿ ನಾವು ಜಗತ್ತನ್ನು ನೋಡಲು, ಅರ್ಥ ಮಾಡಿಕೊಳ್ಳಲು ಇರುವ ಕೆಲವು ಉಪಯುಕ್ತ ಮಾನಸಿಕ ಮಾದರಿಗಳನ್ನು ಚರ್ಚಿಸಿದ್ದೆವು. ಈ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ ಪರೇಟೋ ಸಿದ್ಧಾಂತ, ಬೀದಿ ದೀಪದ ಪರಿಣಾಮ, ಎಮರ್ಜೆನ್ಸ್ ಇವೇ ಮೊದಲಾದ ಕುತೂಹಲಕಾರಿ ವಿಷಯಗಳನ್ನು ಚರ್ಚಿಸಿದ್ದೇವೆ. ಅರಳಿಕಟ್ಟೆಯ ಹದಿನೆಂಟನೆಯ ಸಂಚಿಕೆ ನಿಮ್ಮ ಮುಂದಿದೆ...


    ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ಸೆತ್ಲೂರ್, ಸುಪ್ರೀತ್ ಕೆ ಎಸ್ ಹಾಗೂ ವಾಸುಕಿ ರಾಘವನ್.

    Recording date: 05 July 2020

    Credits:

    Music : Crescents by Ketsa Licensed under creative commons.

    Icon made by Freepik from www.flaticon.com

    1 hr 25 min

About AraliKatte ಅರಳಿಕಟ್ಟೆ

From the publisher's feed

AraliKatte is a Kannada podcast series where Mukund, Supreeth and Vasuki discuss the topics they are interested in but are not totally qualified in.