
Sign up to save your podcasts
Or


ಅನಿಮೇಶನ್ ಕೇವಲ ಮಕ್ಕಳ ಕಾರ್ಟೂನುಗಳಿಗೆ ಸೀಮಿತವಾಗಿಲ್ಲ, ಆಸ್ಕರ್ ಪ್ರಶಸ್ತಿ ಗೆದ್ದ ಕ್ರಿಸ್ಟೋಫರ್ ನೋಲನ್ ರ ಟೆನೆಟ್ ನಂತಹ ಹಾಲಿವುಡ್ ಚಿತ್ರಗಳ ಸಿಜಿಐ, ತಾಂತ್ರಿಕ ಶಿಕ್ಷಣ, ಗೇಮಿಂಗ್ ನಿಂದ ಹಿಡಿದು ಐಪಿಎಲ್ ನ ಸ್ಕೋರ್ ಕಾರ್ಡ್ಗಳವರೆಗೆ ಅನಿಮೇಶನ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನ ಬಳಕೆ ವಿಸ್ತರಿಸಿದೆ.
ಜಂಗಲ್ ಬುಕ್, ಲಯನ್ ಕಿಂಗ್, ಲೈಫ್ ಆಫ್ ಪೈ, ಶೇಪ್ ಆಫ್ ವಾಟರ್, ೧೯೧೭ ಈ ಎಲ್ಲಾ ಚಿತ್ರಗಳಿಗೆ ಇರುವ ಸಾಮ್ಯತೆಯೇನು? ಈ ಚಿತ್ರಗಳಲ್ಲಿ ಬಳಕೆಯಾಗಿರುವ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಅನಿಮೇಶನ್ ಕೆಲಸ ನಡೆದಿದ್ದು ಕರ್ನಾಟಕದಲ್ಲಿ. ದೇಶದಲ್ಲೇ ಮೊಟ್ಟ ಮೊದಲ ಅನಿಮೇಶನ್ ಹಾಗೂ ಗ್ರಾಫಿಕ್ಸ್ ಕುರಿತ ಯೋಜನೆ ಜಾರಿಗೆ ಬಂದದ್ದು ಕರ್ನಾಟಕದಲ್ಲಿ. ಐಟಿ ಬಿಟಿ ಕ್ಷೇತ್ರದ ನೆರಳಲ್ಲೇ ಬೆಳೆದ ಅನಿಮೇಶನ್ ತನ್ನದೇ ರೆಕ್ಕೆಗಳನ್ನು ಚಾಚಿ ಹಾರುವ ಹೊಸ್ತಿಲಲ್ಲಿ ಇರುವ ಉದ್ಯಮ. ಇದು ಬೆಳೆದು ಬಂದ ದಾರಿ ಯಾವುದು? ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಚಿಸುವವರು ಹೇಗೆ ತೊಡಗಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರಗಳು ಈ ವಾರದ ಸಂಚಿಕೆಯಲ್ಲಿವೆ.
ಅನಿಮೇಟರ್ ಕೈಲಿ ಪೆನ್ಸಿಲ್ ಹಿಡಿದ ಒಬ್ಬ ನಟ ಎನ್ನುವ ಶ್ರೀನಿವಾಸ್ ಶ್ರೀಭಕ್ತ ಕರ್ನಾಟಕದಲ್ಲಿ ಅನಿಮೇಶನ್ ಶಿಕ್ಷಣ ಹಾಗೂ ಉದ್ಯಮವನ್ನು ಕಟ್ಟಿದವರಲ್ಲಿ ಮೊದಲಿಗರು. ಅರೇನ ಅನಿಮೇಶನ್ ಸಂಸ್ಥೆಯ ಸ್ಥಾಪಕರು, ಅಬೈ (ABAI) ಒಕ್ಕೂಟದ ಸದಸ್ಯರು. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯು ಎರಡು ಭಾಗಗಳಲ್ಲಿ ಪ್ರಸಾರವಾಗಲಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಶ್ರೀನಿವಾಸ್ ಶ್ರೀಭಕ್ತ, ಮುಕುಂಗ್ ಸೆತ್ಲೂರ್ ಹಾಗೂ ಸುಪ್ರೀತ್.ಕೆ.ಎಸ್.
Recording date: 19 June 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Bhimsain Khurana - https://www.dsource.in/course/story-indian-animation/video/bhimsain-khurana
- Ram Mohan - https://www.dsource.in/course/story-indian-animation/video/ram-mohan
- Cricket flip book - https://www.youtube.com/watch?v=vBxFBgZy8OA
- Infobells Govina Haadu - https://www.youtube.com/watch?v=Lix-XLkFuvE
- ABAI - https://twitter.com/abai_avgc
- AVGC policy - https://www.thehindu.com/news/national/karnataka/karnataka-unveils-policy-to-propel-bengaluru-as-a-global-hub-in-avgc/article19545916.ece
ಕೆಲವು ಪ್ರಶ್ನೆಗಳಿಗೆ ಕಾನೂನಿನಲ್ಲಿ ಉತ್ತರ ಹುಡುಕುವುದು ತಪ್ಪು, ಬದಲಾಗಿ ರಾಜಕೀಯವನ್ನು ನೆಚ್ಚಬೇಕು. ಆದರೆ ನಮ್ಮ ದೇಶದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಪ್ರತಿಯೊಂದಕ್ಕೂ ನ್ಯಾಯಾಂಗದ ಮೊರೆಹೋಗುತ್ತಾರೆ. ಇದರಿಂದಾಗಿ ನ್ಯಾಯಾಲಯಗಳ ಎದುರು ಇರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಇರುವ ಉಪಾಯಗಳೇನು?
ತ್ರಿವಳಿ ತಲಾಕ್, ರಾಮ ಮಂದಿರ ನಿರ್ಮಾಣದ ವಿವಾದ, ಶಬರಿಮಲೈ ದೇವಾಲಯ ಪ್ರವೇಶದ ವಿವಾದ ಇವುಗಳಲೆಲ್ಲ ಜನ ಸಮಾನ್ಯರು ಕಾಣದ ಕಾನೂನು, ರಾಜಕೀಯ, ಸಾಂಸ್ಕೃತಿಕ ಅಂಶಗಳ ಪ್ರಭಾವ, ದೇಶದಲ್ಲಿ ನಮ್ಮ ಸರ್ಕಾರವೇ ಅತಿದೊಡ್ಡ ದಾವೆದಾರನಾಗಿರುವ ವಿಪರ್ಯಾಸ.
ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರವತ್ನಾಲ್ಕನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್.
Recording date: 25 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
ನಮ್ಮ ಮನೆ, ಸೈಟು, ಕಾರು, ಬಳೆ, ಸರ, ಕಾಲುಂಗುರ ಹೀಗೆ ಭೌತಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳಂತೆಯೇ ಬೌದ್ದಿಕ ಸಂಪತ್ತಿನ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ನಿಮಗೆ ತಿಳಿದಿದೆಯೇ? ಪೇಟೆಂಟ್, ಕಾಪಿ ರೈಟ್, ಟ್ರೇಡ್ ಮಾರ್ಕ್, ಡಿಸೈನ್ ರಕ್ಷಣೆ, ವ್ಯಾಪಾರ ರಹಸ್ಯ (ಟ್ರೇಡ್ ಸೀಕ್ರೇಟ್) ಹೀಗೆ ನಾನಾ ಬಗೆಯ ರಕ್ಷಣೆಗಳನ್ನು ವಿವಿಧ ರಾಷ್ಟ್ರಗಳ ಕಾನೂನುಗಳು ಒದಗಿಸುತ್ತವೆ ಎನ್ನುವುದು ನಿಮಗೆ ಗೊತ್ತೆ?
ಯುರೋಪಿನಲ್ಲಿ ಪ್ರಭಾವಶಾಲಿಯಾಗಿರುವ ಪ್ರೈವೆಸಿ ಹಕ್ಕುಗಳ ಬಗೆಗಿನ ಅರಿವು ನಮ್ಮ ದೇಶದಲ್ಲಿ ದುರ್ಬಲವಾಗಿರುವುದು ಏಕೆ? ಈ ದೌರ್ಬಲ್ಯಕ್ಕೆ ನಮ್ಮ ಸಂಸ್ಕೃತಿ, ಭಾಷೆಯೇ ಹೇಗೆ ಇಂಬು ನೀಡುತ್ತವೆ? ದಾಂಪತ್ಯದಲ್ಲಿನ ಅತ್ಯಾಚಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸುವುದಕ್ಕೆ ಅಡ್ಡಿಯಾಗಿ ಮುಂದೊತ್ತುವ ದಾಂಪತ್ಯದ ಖಾಸಗಿತನದ ಹಕ್ಕು, ವಿವಾಹ ಬಾಹಿರ ಸಂಬಂಧವನ್ನು ಕಾನೂನು ಬಾಹಿರವಾಗಿಸುವಾಗ ನಮಗೇಕೆ ನೆನಪಾಗುವುದಿಲ್ಲ? ಹೀಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಖಾಸಗಿ ಹಕ್ಕುಗಳ ಚರ್ಚೆಯ ದಾರಿ ತಪ್ಪಿಸುವ ಇನ್ನಷ್ಟು ನಿದರ್ಶನಗಳ ಬಗ್ಗೆ ತಿಳಿಯಬೇಕೆ?
ವಕೀಲರಾದ ಅಶೋಕ್ ಗುಬ್ಬಿ ವೆಂಕಟೇಶಮೂರ್ತಿಯವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗದಲ್ಲಿ ಇವೆಲ್ಲ ಕೇಳಬಹುದು. ಅರಳಿಕಟ್ಟೆಯ ಅರತ್ಮೂರನೆಯ ಸಂಚಿಕೆಯಲ್ಲಿ ಅತಿಥಿಯೊಂದಿಗೆ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್ ಹಾಗೂ ವಾಸುಕಿ ರಾಘವನ್.
Recording date: 25 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Puttaswamy vs union of India judgement - https://indiankanoon.org/doc/127517806/
- Article 14 of Indian constitution - https://en.wikipedia.org/wiki/Article_14_of_the_Constitution_of_India
- Article 19 of Indian constitution - https://en.wikipedia.org/wiki/Freedom_of_expression_in_India
- Article 21 of Indian constitution - https://www.constitutionofindia.net/constitution_of_india/fundamental_rights/articles/Article%2021
- Jay Shaw defamation case against The Wire - https://thewire.in/media/the-wire-withdraws-its-sc-petitions-will-see-jay-amit-shah-in-trial-court-now
ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಶಾಂತಲಾ ಸೈನ್ಸ್ ಫಿಕ್ಷನ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ (ಇವರ "೩೦೧೯ ಎಡಿ" ಪುಸ್ತಕವನ್ನು ಮೈಲ್ಯಾಂಗ್ ಪ್ರಕಾಶನ ಪ್ರಕಟಿಸಿದೆ), ಜೊತೆಗೆ ಪೇಂಟಿಂಗಿನಲ್ಲೂ ಆಸಕ್ತಿ ಹೊಂದಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.
ಎರಡನೆಯ ಸಂಚಿಕೆಯಲ್ಲಿ ನಾವು ಶಾಂತಲಾರ ೩೦೧೯ ಎಡಿ ಎನ್ನುವ ಸೈನ್ಸ್ ಫಿಕ್ಷನ್ ಪುಸ್ತಕದ ಕುರಿತ ಚರ್ಚೆಯಿಂದ ತೊಡಗಿ ಭಾರತದ ಪುರಾಣ ಕಥೆಗಳಿಗೂ, ಆಧುನಿಕ ವಿಜ್ಞಾನಕ್ಕೂ ಇರುವ ನಂಟು, ನಮ್ಮ ಭೌತಿಕ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ಮನುಷ್ಯರಿಗೆ ಇರುವ ಮಿತಿ, ಸೈನ್ಸ್ ಫಿಕ್ಷನಿಗೂ ಕಾವ್ಯಕ್ಕೂ ಇರುವ ಸಾಮ್ಯ, ವೈದ್ಯಕೀಯ ವೃತ್ತಿ, ಕುಟುಂಬ ನಿರ್ವಹಣೆ, ಬರವಣಿಗೆ, ಜತೆಗೆ ಚಿತ್ರಕಲೆ - ಇವೆಲ್ಲಕ್ಕೂ ಹೇಗೆ ಸಮಯ ಹೊಂದಿಸಿಕೊಳ್ಳುವುದು - ಹೀಗೆ ಹಲವು ಕುತೂಹಲಕಾರಿ ವಿಷಯಗಳ ಚರ್ಚೆ ಅರಳಿಕಟ್ಟೆಯ ಅರವತ್ತೆರಡನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
ಈ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಶಾಂತಲಾ, ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.
Recording date: 18 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show Notes
- Episode sponsored by MyLang Books : https://mylang.in/
Use exclusive promo code AK20 to get flat 20% off on your first purchase.
Use exclusive promo code AK10 to get flat 10% off on every purchase.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಶಾಂತಲಾ ಸೈನ್ಸ್ ಫಿಕ್ಷನ್ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ (ಇವರ "೩೦೧೯ ಎಡಿ" ಪುಸ್ತಕವನ್ನು ಮೈಲ್ಯಾಂಗ್ ಪ್ರಕಾಶನ ಪ್ರಕಟಿಸಿದೆ), ಜೊತೆಗೆ ಪೇಂಟಿಂಗಿನಲ್ಲೂ ಆಸಕ್ತಿ ಹೊಂದಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.
ಮೊದಲ ಭಾಗದಲ್ಲಿ ನಾವು ವೈದ್ಯರಾಗಿ ತರಬೇತಿ ಪಡೆಯುವಾಗಿನ ಡಾ ಶಾಂತಲಾರ ಅನುಭವ, ಜನರಲ್ ಸರ್ಜರಿಯಲ್ಲಿ ಆಸಕ್ತಿ ಇದ್ದರೂ ವೈದ್ಯಕೀಯ ವ್ಯವಸ್ಥೆಯಲ್ಲಿನ ಪಕ್ಷಪಾತಿ ಧೋರಣೆಯಿಂದಾಗಿ ಅದು ಕೈತಪ್ಪಿದ್ದು, ದೆಹಲಿಯ ಆಸ್ಪತ್ರ್ಯೆಯಲ್ಲಿ "ಮದರಾಸಿ" ಎಂಬ ಮೂದಲಿಕೆಯನ್ನು ಎದುರಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದು ಹೀಗೆ ಮಹಿಳೆಯಾಗಿ ವೈದ್ಯಕೀಯ ವೃತ್ತಿಯಲ್ಲಿ ನೆಲೆನಿಲ್ಲುವಲ್ಲಿ ಎದುರಿಸಿದ ಸವಾಲುಗಳನ್ನು ಚರ್ಚಿಸಿದ್ದೇವೆ.
"ಮನಸ್ಸು ತಿಳಿಯದ್ದನ್ನು ಕಣ್ಣು ಕಾಣದು" (Eyes don't see what the mind doesn't know) ಎನ್ನುವ ವಿವೇಕವಾಣಿ ವೈದ್ಯ ವೃತ್ತಿಯಲ್ಲಿ ಹೇಗೆ ಅನ್ವಯವಾಗುತ್ತದೆ? ವೃತ್ತಿಯಲ್ಲಿ ಕಲಿತ ಶಿಸ್ತು ದಿನನಿತ್ಯದ ಜೀವನದಲ್ಲಿ ಹೇಗೆ ಬಳಕೆಗೆ ಬರುತ್ತದೆ? ತಂತ್ರಜ್ಞಾನದಲ್ಲಿನ ಪ್ರಗತಿಯಿಂದ ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಬದಲಾವಣೆಗಳೇನು? - ಹೀಗೆ ಅನೇಕ ಕುತೂಹಲಕಾರಿ ವಿಷಯಗಳ ಕುರಿತ ಚರ್ಚೆ ಅರಳಿಕಟ್ಟೆಯ ಅರವತ್ತೊಂದನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಈ ಚರ್ಚೆಯಲ್ಲಿ ಭಾಗವಹಿಸಿದವರು ಡಾ. ಶಾಂತಲಾ, ಮುಕುಂದ್ ರಂಗ ಸೆತ್ಲೂರ್, ವಾಸುಕಿ ರಾಘವನ್ ಹಾಗೂ ಸುಪ್ರೀತ್.ಕೆ.ಎಸ್.
Recording date: 18 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಪ್ರಭಾವಶಾಲಿ, ಅದಕ್ಕಿಂತ ಹೆಚ್ಚಾಗಿ ವಿವಾದಾಸ್ಪದವಾದ ನಮ್ಮ ಕಾಲದ ಲೇಖಕರಲ್ಲಿ ಒಬ್ಬರಾದ ನಸೀಂ ತಲೆಬ್ ರ ಸ್ಕಿನ್ ಇನ್ ದಿ ಗೇಮ್ (Skin in the game) ಪುಸ್ತಕದ ಚರ್ಚೆಯ ಎರಡನೆಯ ಭಾಗ ಅರಳಿಕಟ್ಟೆಯ ಅರವತ್ತನೆಯ ಸಂಚಿಕೆಯಲ್ಲಿ...
ತಲೆಬ್ ಬೌದ್ಧಿಕ ಜಗತ್ತಿನ ರಾಕ್ ಸ್ಟಾರ್ ಹಾಗೂ ರೆಬೆಲ್ ಎಂದೇ ಪರಿಗಣಿಸಲ್ಪಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೋರ್ಡ್ ರೂಮ್ ಚರ್ಚೆಗಳವರೆಗೆ, ಜಿಮ್ ಗಳಿಂಗ ಹಿಡಿದು ಕ್ರೀಡಾಂಗಣಗಳಲ್ಲಿನ ಮಾತುಕತೆಗಳವರೆಗೆ ಈತನ ವಿಚಾರಗಳು ಪ್ರಭಾವಶಾಲಿಯಾಗಿವೆ.
ನಮ್ಮೆಲ್ಲರ ಜಾಣ್ಮೆಗಿಂತ ಹಿರಿದಾದ ಜಾಣ್ಮೆಯೊಂದಿದೆ. ಇದನ್ನು ತಲೆಬ್ ಲಿಂಡಿ ಪರಿಣಾಮ ಎಂದು ಗುರುತಿಸುತ್ತಾರೆ. ಇದು ನಮ್ಮ ದಿನನಿತ್ಯದ ಆಯ್ಕೆಗಳಲ್ಲಿ ಯಾವ ಪಾತ್ರವನ್ನು ವಹಿಸುತ್ತದೆ? ವಾದದಲ್ಲಿ ಗೆಲ್ಲುವುದಕ್ಕೂ, ಗೆಲ್ಲುವುದಕ್ಕೂ ಇರುವ ವ್ಯತ್ಯಾಸವೇನು? ಸಾಮಾಜಿಕ ತಾಣಗಳಲ್ಲಿ ನಡೆಯುವ ವಾಕ್ ಸಮರ ಮುಖತಃ ಭೇಟಿಗಳಲ್ಲಿ ನಡೆಯುವುದು ಅತಿ ವಿರಳವೇಕೆ?
ಬರಾಕ್ ಒಬಾಮರ "ಲಂಚಕೋರ"ತನದ ಬಗ್ಗೆ ನಿಮಗೆ ತಿಳಿದಿದೆಯೇ? ವಿಚಾರವಾದ, ಧಾರ್ಮಿಕತೆ ಹಾಗೂ ಮೂಢನಂಬಿಕೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಎಡವುವುದು ಎಲ್ಲಿ? ಇನ್ನಷ್ಟು ಆಸಕ್ತಿಕರ ವಿಷಯಗಳ ಚರ್ಚೆ ಈ ಸಂಚಿಕೆಯಲ್ಲಿ. ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.
ಈ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.
Recording date: 11 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
- Sebi regulation skin in the game - https://www.newindianexpress.com/business/2021/may/03/the-optics-intent-and-impact-ofskin-in-the-game-2297767.html
- Link to Aralikatte episode on Mental models: https://youtu.be/C8FfMHzJ2ro
- Episode sponsored by MyLang Books : https://mylang.in/
Use exclusive promo code AK20 to get flat 20% off on your first purchase.
Use exclusive promo code AK10 to get flat 10% off on every purchase.
್ರಭಾವಶಾಲಿ, ಅದಕ್ಕಿಂತ ಹೆಚ್ಚಾಗಿ ವಿವಾದಾಸ್ಪದವಾದ ನಮ್ಮ ಕಾಲದ ಲೇಖಕರಲ್ಲಿ ಒಬ್ಬರಾದ ನಸೀಂ ತಲೆಬ್ ರ ಸ್ಕಿನ್ ಇನ್ ದಿ ಗೇಮ್ (Skin in the game) ಪುಸ್ತಕದ ಚರ್ಚೆ ಅರಳಿಕಟ್ಟೆಯ ಐವತ್ತೊಂಭತ್ತನೆಯ ಸಂಚಿಕೆಯಲ್ಲಿ...
ತಲೆಬ್ ಬೌದ್ಧಿಕ ಜಗತ್ತಿನ ರಾಕ್ ಸ್ಟಾರ್ ಹಾಗೂ ರೆಬೆಲ್ ಎಂದೇ ಪರಿಗಣಿಸಲ್ಪಡುತ್ತಾರೆ. ವಿಶ್ವವಿದ್ಯಾಲಯಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೋರ್ಡ್ ರೂಮ್ ಚರ್ಚೆಗಳವರೆಗೆ, ಜಿಮ್ ಗಳಿಂಗ ಹಿಡಿದು ಕ್ರೀಡಾಂಗಣಗಳಲ್ಲಿನ ಮಾತುಕತೆಗಳವರೆಗೆ ಈತನ ವಿಚಾರಗಳು ಪ್ರಭಾವಶಾಲಿಯಾಗಿವೆ.
"ಕಣ್ಣಿಗೆ ಕಣ್ಣು" ಎಂದು ಗುರುತಿಸುವ ಹಮ್ಮುರಬಿಯ ಶಾಸನವನ್ನು ನಾವು ಆಧುನಿಕರು ಸರಿಯಾಗಿ ಅರ್ಥೈಸಿಕೊಂಡಿದ್ದೇವೆಯೇ? ನಾವು ಅನಾಗರೀಕ ಎಂದು ಭಾವಿಸುವ ಪುರಾತಾನ ಸಂಸ್ಕೃತಿಗಳು ಕಂಡುಕೊಂಡ ನೀತಿ ಶಾಸ್ತ್ರಗಳು ಪ್ರಬುದ್ಧವಾಗಿದ್ದವು ಎಂದು ತಲೆಬ್ ವಾದಿಸುವುದು ಏಕೆ?
ಬೆಂಗಳೂರಿನಲ್ಲಿ ಚಿಕನ್ ಮಾರಲು ಅಂಗಡಿ ತೆರೆದ ಕೆ ಎಫ್ ಸಿ ಜಗತ್ತಿನ ತನ್ನ ಬೇರೆ ಯಾವುದೇ ಅಂಗಡಿಗಳಲ್ಲಿ ಇರದ ಅನ್ನದ ಬಟ್ಟಲು "ರೈಸ್ ಬೌಲ್" ಪರಿಚಯಿಸಲು ಕಾರಣವೇನು? ನಮ್ಮ ಬೀದಿಗಳಲ್ಲಿ ಒಂದೆರೆಡೆಂಬಂತೆ ಶುರುವಾದ ಆಕ್ಟೀವ್ ಹೊಂಡಾ ಮಾದರಿಯ ದ್ವಿಚಕ್ರವಾಹನಗಳು ಏಕಾಏಕಿ ರಸ್ತೆಗಳನ್ನು ಆವರಿಸಿದ್ದರ ಹಿಂದಿರುವ ತತ್ವವೇನು?
ಇಸ್ರೇಲ್ ಪ್ಯಾಲಸ್ತೀನ್ ನಡುವಿನ ಬಿಕ್ಕಟ್ಟಿಗೂ, ಸಂಸಾರವೊಂದರಲ್ಲಿನ ಗಂಡ ಹೆಂಡತಿಯರ ನಡುವಿನ ಜಗಳಕ್ಕೂ ಇರುವ ನಂಟೇನು? - ಇವೇ ಮೊದಲಾದ ಕುತೂಹಲಕರ ಉದಾಹರಣೆಗಳೊಂದಿಗೆ ನಾವು ಈ ಪುಸ್ತಕಗ ಒಳನೋಟಗಳನ್ನು ನಮಗೆ ದಕ್ಕಿದ ರೀತಿಯಲ್ಲಿ ಚರ್ಚಿಸಿದ್ದೇವೆ. ನಿಮಗೂ ಈ ಚರ್ಚೆ ಖುಷಿಕೊಡಬಹುದು ಎನ್ನುವ ನಂಬಿಕೆ ನಮ್ಮದು.
ಈ ಚರ್ಚೆಯಲ್ಲಿ ಭಾಗವಹಿಸಿದವರು ಮುಕುಂದ್ ರಂಗ ಸೆತ್ಲೂರ್, ಸುಪ್ರೀತ್ ಕೆ.ಎಸ್ ಹಾಗೂ ವಾಸುಕಿ ರಾಘವನ್.
Recording date: 11 April 2021
Credits: Music: Crescents by Ketsa Licensed under creative commons. Icon made by Freepik from www.flaticon.com
Show notes
Taleb's appearances on Econ Talk Podcast: https://nassimtaleb.org/tag/econtalk/
Taleb's podcast with Gad Saad: https://www.youtube.com/watch?v=ezhjumayRsg
Episode sponsored by MyLang Books : https://mylang.in/
Use exclusive promo code AK20 to get flat 20% off on your first purchase.
Use exclusive promo code AK10 to get flat 10% off on every purchase.
ಸೋಶಿಯಲ್ ಮೀಡಿಯಾದಲ್ಲಿ ಪೊಲಿಟಿಕಲ್ ಕಾರ್ಟೂನುಗಳು ಹೆಚ್ಚು ಜನರನ್ನು ತಲುಪುವುದು ಕಾರ್ಟೂನಿಸ್ಟರಿಗೆ ವರವೂ ಹೌದು, ಶಾಪವೂ ಹೌದು. ನಳ ಪೊನ್ನಪ್ಪ ಈ ಮಾಧ್ಯಮಗಳಲ್ಲಿ ಎದುರಾಗುವ ಟ್ರೋಲ್ ಗಳನ್ನು ಹೇಗೆ ನಿರ್ವಹಿಸುತ್ತಾರೆ?
ನಳ ಪೊನ್ನಪ್ಪರ ಕಾರ್ಟೂನುಗಳ ಶೈಲಿಯ ಹಿಂದಿರುವ ಆಯ್ಕೆಗಳೇನು? ಭಾರತದಲ್ಲಷ್ಟೇ ಅಲ್ಲ, ಜಾಗತಿಕವಾಗಿ ಕಾರ್ಟೂನಿಂಗ್ ಕ್ಷೇತ್ರದಲ್ಲಿ ಮಹಿಳೆಯರ ಪಾಲುದಾರಿಕೆ ಕಡಿಮೆ ಇರಲು ಕಾರಣಗಳೇನಿರಬಹುದು? ಪೊಲಿಟಿಕಲ್ ಕಾರ್ಟೂನುಗಳಿಗೆ ಹೊರತಾಗಿ ಬದುಕಿನ ಇತರೆ ಸಂಗತಿಗಳ ಕುರಿತ ಕಾರ್ಟೂನುಗಳು ನಮ್ಮಲ್ಲಿ ವಿರಳವಾಗಿರಲು ಕಾರಣವೇನು? ಕಾರ್ಟೂನಿಸ್ಟ್ ಆಗಿ ಜೀವನ ನಿರ್ವಹಣೆ ಮಾಡಲು ಸಾಧ್ಯವೇ?
ಇವೇ ಮೊದಲಾದ ಪ್ರಶ್ನೆಗಳೊಂದಿಗೆ ನಾವು ಕಾರ್ಟೂನಿಸ್ಟ್ ನಳ ಪೊನ್ನಪ್ಪರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಭಾಗ ಅರಳಿಕಟ್ಟೆಯ ಐವತ್ತೆಂಟನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದೆ.
Recording date: 27 March 2021
Credits: Music: Crescents by Ketsa Licensed under creative commons. Icon made by Freepik from www.flaticon.com
- Cartoonist Sunil Cotton : https://www.facebook.com/sunil.cotton
- Cartoonist Ashwini Menon : https://www.ashvinimenon.com/
- Cartoonist Maya Kamath : https://en.wikipedia.org/wiki/Maya_Kamath
ಸುದೀರ್ಘವಾದ ಸಂಪಾದಕೀಯ ಹೇಳಲು ಸಾಧ್ಯವಿಲ್ಲದ ಸತ್ಯವನ್ನು ನಿಷ್ಠುರವಾಗಿ, ಸುತ್ತಿ ಬಳಸದೆ ನೇರವಾಗಿ, ಮೊನಚಾಗಿ, ಓದುಗರ ತುಟಿಯಂಚಲ್ಲಿ ನಗೆ ಮೂಡಿಸುವಂತೆ ಹೇಳಲು ಕಾರ್ಟೂನುಗಳಿಗೆ ಸಾಧ್ಯ.
ಉಳಿದವರೆಲ್ಲರೂ ಕಣ್ಣು ಮುಚ್ಚಿ ಬೆತ್ತಲೆ ರಾಜ ಬಟ್ಟೆ ತೊಟ್ಟಿದ್ದಾನೆ ಎಂದು ನಟಿಸುವಾಗ ಬೆರಳು ತೋರಿ ಬಯಲು ಮಾಡುವುದಕ್ಕೆ ಮುಗ್ಧ ಮಗುವಿನ ನಗೆ ಸಾಕು. ಇಂಥ ಮುಗ್ಧತೆ ಹಾಗೂ ಪ್ರಾಮಾಣಿಕತೆಯನ್ನು ಕಾಯ್ದುಕೊಂಡ ಕಾರ್ಟೂನಿಸ್ಟುಗಳಲ್ಲಿ ನಳ ಪೊನ್ನಪ್ಪ ಪ್ರಮುಖರು.
ತರಬೇತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದ ನಳ ಪೊನ್ನಪ್ಪ ಕಾರ್ಟೂನುಗಳನ್ನು ಬರೆಯುವ ಹವ್ಯಾಸವನ್ನು ವೃತ್ತಿಯಾಗಿ ಆಯ್ದುಕೊಂಡದ್ದು ಏಕೆ? ಆರ್ಕಿಟೆಕ್ಚರ್ ತರಬೇತಿ ಅವರ ಕಾರ್ಟೂನುಗಳನ್ನು ಹೇಗೆ ಪ್ರಭಾವಿಸುತ್ತದೆ? ಕೆಲಸ ಮಾಡುವ ಎಂಟು ಘಂಟೆಯಲ್ಲಿ ಪ್ರತಿದಿನ ಸೃಜನಶೀಲವಾದ, ನಗಿಸುವ, ಜತೆಗೆ ಹರಿತವಾದ ಕಾರ್ಟೂನುಗಳನ್ನು ಬರೆಯಲು ಬೇಕಾದ ಸಿದ್ಧತೆ, ಮನಸ್ಥಿತಿ ಎಂಥದ್ದು? - ಹೀಗೆ ಅನೇಕ ಆಸಕ್ತಿಕರ ಪ್ರಶ್ನೆಗಳೊಂದಿಗೆ ಅರಳಿಕಟ್ಟೆ ನಳ ಪೊನ್ನಪ್ಪರೊಂದಿಗೆ ನಡೆಸಿದ ಚರ್ಚೆಯ ಮೊದಲ ಭಾಗ ಐವತ್ತೇಳನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.
Recording date: 27 March 2021
Credits: Music: Crescents by Ketsa Licensed under creative commons. Icon made by Freepik from www.flaticon.com
ಪೊಲೀಸ್ ವ್ಯವಸ್ಥೆ ಹಾಗೂ ಪೊಲೀಸರು ಬಳಸುವ ಮಾರ್ಗಗಳ ಕುರಿತು ದಿಟ್ಟವಾಗಿ ಹಾಗೂ ಪ್ರಾಮಾಣಿಕವಾಗಿ ಮಾತನಾಡುವ ಜೆ.ಬಿ.ರಂಗಸ್ವಾಮಿಯವರೊಂದಿಗಿನ ನಮ್ಮ ಚರ್ಚೆಯ ಮೊದಲ ಭಾಗ ಬಹು ಜನಪ್ರಿಯವಾಗಿದೆ.
ಪೊಲೀಸರು ರಜೆ, ಹಬ್ಬ ಎನ್ನದೆ ಡ್ಯೂಟಿ ಮಾಡಬೇಕು, ಸಾರ್ವಜನಿಕರು, ಮಾಧ್ಯಮಗಳಲ್ಲಿನ ಅವಹೇಳನಕಾರಿ ಚಿತ್ರಣಗಳನ್ನು ಸಹಿಸಿಕೊಂಡು ಕೆಲಸ ಮಾಡಬೇಕು, ರಾಜಕಾರಣಿಗಳ ಒತ್ತಡವನ್ನು ನಿರ್ವಹಿಸುವ ಛಾತಿ ಇರಬೇಕು ಹೀಗೆ ಹಲವಾರು ಸವಾಲುಗಳಿದ್ದರೂ ತಮ್ಮ ೭೨ರಡನೆಯ ವಯಸ್ಸಿನಲ್ಲಿ ಪೊಲೀಸ್ ಕೆಲಸ ಹೆಚ್ಚು ತೃಪ್ತಿಕೊಟ್ಟ ಕೆಲಸ ಎಂದು ರಂಗಸ್ವಾಮಿಯವರು ಹೇಳುವುದೇಕೆ?
ಹಲವರು ಪೊಲಿಟಿಕಲಿ ಇನ್ ಕರಕ್ಟ್ ಎಂದು ಭಾವಿಸಬಹುದಾದ ಅನೇಕ ವಿಚಾರಗಳನ್ನು ದಿಟ್ಟವಾಗಿ, ಪ್ರಾಮಾಣಿಕವಾಗಿ ರಂಗಸ್ವಾಮಿಯವರು ಚರ್ಚಿಸಿದ್ದಾರೆ. ಈ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ಅರಳಿಕಟ್ಟೆಯ ಐವತ್ತಾರನೆಯ ಸಂಚಿಕೆಯಲ್ಲಿ ನಿಮ್ಮ ಮುಂದಿದೆ.
ಚರ್ಚೆಯಲ್ಲಿ ಭಾಗವಹಿಸಿದವರು ಜೆ.ಬಿ.ರಂಗಸ್ವಾಮಿ, ಮುಕುಂದ್ ರಂಗ ಸೆತ್ಲೂರ್ ಮತ್ತು ವಾಸುಕಿ ರಾಘವನ್.
Recording date: 7 March 2021
Credits: Music: Crescents by Ketsa Licensed under creative commons. Icon made by Freepik from www.flaticon.com
From the publisher's feed