AraliKatte ಅರಳಿಕಟ್ಟೆ

AraliKatte ಅರಳಿಕಟ್ಟೆ

By AraliKatteSociety & Culture
Download on the App Store

AraliKatte ಅರಳಿಕಟ್ಟೆ episodes

  • Ep84: ಇಮೇಜ್ ಕನ್ಸಲ್ಟೆಂಟ್ ಜೊತೆಗೊಂದು ಮಾತುಕತೆ (ಭಾಗ ೨)- A conversation with an image consultant (Part 2)

    ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ.

    ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ.

    ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

    ಎರಡನೆಯ ಹಾಗೂ ಅಂತಿಮ ಭಾಗ ಎಂಭತ್ನಾಲ್ಕನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

    Recording date:  23 October 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    31 min
  • Ep83: ಇಮೇಜ್ ಕನ್ಸಲ್ಟೆಂಟ್ ಜೊತೆಗೊಂದು ಮಾತುಕತೆ - A conversation with an image consultant

    ಕೆಲಸಕ್ಕೆಂದು ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು, ಬಾಳ ಸಂಗಾತಿಯನ್ನು ಅರಸಿ ಡೇಟಿಂಗಿಗೆ ಹೋಗುವ ಯುವಕ ಯುವತಿಯರು, ದೂರದ ದೇಶಕ್ಕೆ ಓದುವುದಕ್ಕೆ ಹೋಗುವ ವಿದ್ಯಾರ್ಥಿಗಳು, ಟಿವಿ ಸಂದರ್ಶನದಲ್ಲಿ ಭಾಗವಹಿಸಲು ಹೊರಡುವ ಅತಿಥಿಗಳು, ಸಿನಿಮಾ ತಾರೆಯರು, ರಾಜಕಾರಣಿಗಳು ಹೀಗೆ ಹಲವರಿಗೆ ತಾವು ಮತ್ತೊಬ್ಬರ ಮೇಲೆ ಒಳ್ಳೆಯ ಪ್ರಭಾವ ಬೀರಬೇಕು ಎನ್ನುವ ಬಯಕೆ ಇರುತ್ತದೆ.

    ಇಂತಹ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಯಾವ ರೀತಿಯ ವೇಷಭೂಷಣ ತೊಡಬೇಕು, ಹೇಗೆ ಮಾತನಾಡಬೇಕು, ಯಾವ ರೀತಿ ಪ್ರತಿಕ್ರಿಯಿಸಬೇಕು ಎನ್ನುವ ತರಬೇತಿಯನ್ನು ನೀಡುವ ವೃತ್ತಿಪರರನ್ನು ಇಮೇಜ್ ಕನ್ಸಲ್ಟೆಂಟ್ಸ್ ಎಂದು ಕರೆಯುತ್ತಾರೆ.

    ಈ ಬಗೆಯ ಇಮೇಜ್ ಕನ್ಸಲ್ಟಿಂಗ್ ಮಾಡುವ ಕನ್ನಡತಿ ವಿದ್ಯಾ ನಾಗ್ ರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

    ಮೊದಲ ಭಾಗ ಎಂಭತ್ಮೂರನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ.

    Recording date:  23 October 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    56 min
  • Ep82: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? (ಭಾಗ ೨) - What do you know about waste pickers? (Part 2)

    ಹಸಿ ಕಸ, ಒಣ ಕಸ ಎಂದು ಮನೆಯ ಕಸವನ್ನು ವಿಂಗಡಿಸಿ ಪೌರ ಕಾರ್ಮಿಕರ ಕೈಗೆ ಕೊಟ್ಟ ನಂತರ ಏನಾಗುತ್ತದೆ? ಮನೆ ಮನೆಯಿಂದ ಕಸ ಸಂಗ್ರಹಿಸುವ ಪೌರಕಾರ್ಮಿಕರನ್ನು ಹೊರತು ಪಡಿಸಿ ಕಸ ಆಯುವ ಸಾವಿರಾರು ಕೆಲಸಗಾರರ ಬಗ್ಗೆ ನಿಮಗೆಷ್ಟು ಗೊತ್ತು?

    ನಾವು ಎಸೆಯುವ ಪ್ಲಾಸ್ಟಿಕ್ ಕಸದಲ್ಲಿ ಶೇಕಡಾ ೪೦ರಷ್ಟು ಕಸ ಪುನರ್ಬಳಕೆಗೆ ಅನರ್ಹವಾದದ್ದು ಎಂಬುದು ನಿಮಗೆ ತಿಳಿದಿದೆಯೇ? ಎಪ್ಪತ್ತಕ್ಕಿಂತ ಹೆಚ್ಚು ಬಗೆಯ ಪ್ಲಾಸ್ಟಿಕ್ ಕಸದಲ್ಲಿ ಚಿಪ್ಸ್ ಪ್ಯಾಕೆಟ್ ನ ಪ್ಲಾಸ್ಟಿಕ್ ಅತ್ಯಂತ ಮಾರಕವಾದದ್ದು ಏಕೆ?

    ಬೆಂಗಳೂರಿನ ಕಸ ವಿಲೇವಾರಿಯ ಬಜೆಟ್ ಒಂದು ಸಾವಿರ ಕೋಟಿ ರುಪಾಯಿ ಎಂಬುದು ನಿಮಗೆ ಗೊತ್ತೆ? ಹಳ್ಳಿಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದಕ್ಕೆ ಸ್ಯಾಶೆ ಬಳಕೆ ಅತ್ಯಂತ ಉಪಯುಕ್ತವಾದದ್ದು ಆದರೆ ಅದರಿಂದ ಉತ್ಪನ್ನವಾಗುವ ತ್ಯಾಜ್ಯ ನಿರ್ವಹಣೆ ಕಷ್ಟ ಏಕೆ?

    ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ನಮ್ಮ ಈ ವಾರದ ಅತಿಥಿ ನಳಿನಿ ಶೇಖರ್. ನನ್ನನ್ನು ಮೇಡಂ ಎಂದು ಕರೆದರೆ ಐದು ರುಪಾಯಿ ದಂಡ ತೆರಬೇಕು ಎಂದು ತಾಕೀತು ಮಾಡಿ ಮಾತು ಶುರುಮಾಡಿದ ನಳಿನಿ ಹಸಿರು ದಳ ಎಂಬ ಸಂಸ್ಥೆಯ ಮೂಲಕ ಕಸ ಆಯುವ ಕೆಲಸಗಾರರನ್ನು ಸಂಘಟಿಸುವಲ್ಲಿ ಕೆಲಸಮಾಡುತ್ತಿದ್ದಾರೆ. ಇವರೊಂದಿಗೆ ಅರಳಿಕಟ್ಟೆ ನಡೆಸಿದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.

    ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.

    ಅಬ್ಬರವಿಲ್ಲದ, ಗಹನವಾದ ವಿಷಯಗಳ ಬಗೆಗಿನ ಮಾತುಕತೆ ನಿಮಗಿಷ್ಟವಾದರೆ ನಮ್ಮ ಯುಟ್ಯೂಬ್ ಚಾನೆಲ್ ಗೆ ಚಂದಾದಾರರಾಗಿ ನಮ್ಮನ್ನು ಬೆಂಬಲಿಸಿ.

    Recording date:  19 September 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    Show Notes

    - Episode sponsored by MyLang Books : https://mylang.in/

    Use exclusive promo code AK20 to get flat 20% off on your first purchase.

    Use exclusive promo code AK10 to get flat 10% off on every purchase.

    39 min
  • Ep81: ಕಸ ವಿಲೇವಾರಿ ಮಾಡುವವರ ಬಗ್ಗೆ ನಿಮಗೆಷ್ಟು ಗೊತ್ತು? - What do you know about waste pickers?

    54 min

    ---
    Send in a voice message: https://anchor.fm/aralikatte/message
    52 min
  • Ep80: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು (ಭಾಗ ೨) - Bengaluru in photographer's eye in the mind (Part 2)

    ಕೋಡಿಯಾಲ್ ಬೈಲಿನಲ್ಲಿ ಬೀದಿ ಗುಡಿಸುವ ವೃದ್ಧೆ ಲಕ್ಷ್ಮಿ ಅಕ್ಕ, ಬೆಂಗಳೂರಿನ ಜೆ ಪಿ ನಗರದ ಅಪಾರ್ಟ್ಮೆಂಟೊಂದರಿಂದ ಕಸ ವಿಲೇವಾರಿ ಮಾಡುತ್ತಿದ್ದ ಮಲ್ಲಯ್ಯರಂತಹ ಜನಸಾಮಾನ್ಯರ ಭಿತ್ತಿಚಿತ್ರಗಳನ್ನು ಮಹೇಶ್ ಭಟ್ ತೆಗೆದಿದ್ದಾರೆ. ಜೊತೆಗೆ ಖ್ಯಾತನಾಮರಾದ ರಾಮಕೃಷ್ಣ ಹೆಗಡೆ, ಮೈಕೆಲ್ ಜಾಕ್ಸನ್, ಶಂಕರ್ ಹಾಗೂ ಅರುಂಧತಿ ನಾಗ್ ರ ಭಿತ್ತಿಚಿತ್ರಗಳನ್ನೂ ತೆಗೆದಿದ್ದಾರೆ. ಈ ಹರವು ತೆರೆದಿಟ್ಟ ಅನುಭವಗಳು ಎಂಥವು?

    ಕ್ಷಣಭಂಗುರ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮುಳುಗಿರುವಾಗ ಫೋಟೊಗ್ರಫಿ ಆಧರಿಸಿ ಪುಸ್ತಗಳನ್ನು ಪ್ರಕಟಿಸುವ ಹುಮ್ಮಸ್ಸಿನ ಹಿಂದಿರುವ ನಂಬಿಕೆ ಯಾವುದು?

    ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ...

    Recording date:  15 August 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    Show Notes

    -  Malliah - https://www.facebook.com/photo?fbid=10158040946501171&set=a.10158027842836171

    - Project UNSUNG - https://www.unsung.in/

    - I am 20 film - https://www.youtube.com/watch?v=fA8h74ZW8Ok

    - Wishes for a new world - https://www.maheshbhat.com/wishes-for-a-new-world-1/

    - Episode sponsored by MyLang Books : https://mylang.in/

    Use exclusive promo code AK20 to get flat 20% off on your first purchase.

    Use exclusive promo code AK10 to get flat 10% off on every purchase.

    52 min
  • Ep79: ಫೋಟೊಗ್ರಾಫರ್ ಮನಸ್ಸಿನ ಕಣ್ಣಲ್ಲಿ ಬೆಂಗಳೂರು - Bengaluru in photographer's eye in the mind

    ಇವತ್ತು ಪ್ರತಿಯೊಬ್ಬರ ಕಿಸೆಯಲ್ಲಿ ವೃತ್ತಿಪರ ಫೋಟೊಗಳನ್ನು ತೆಗೆಯುವ ಸಾಮರ್ಥ್ಯವಿರುವ ಸ್ಮಾರ್ಟ್ ಫೋನುಗಳಿವೆ ಆದರೆ ಜೀವಂತಿಕೆಯಿರುವ ಫೋಟೊ ತೆಗೆಯುವುದಕ್ಕೆ ಬೇಕಿರುವುದು ಮನಸ್ಸಿನ ಕಣ್ಣು. ಎಂಬತ್ತರ ದಶಕದಲ್ಲಿ ನಿಯಮಿತ ರೀಲುಗಳನ್ನು ಬಳಸಿ ಫೋಟೊ ತೆಗೆಯಲು ಶುರುಮಾಡಿದ ಮಹೇಶ್ ಭಟ್ ಈ ಶಿಸ್ತನ್ನು ಅಳವಡಿಸಿಕೊಂಡದ್ದು ಹೇಗೆ?

    ಶ್ರೀಲಂಕೆಯ ಯುದ್ಧ ಭೂಮಿಯಲ್ಲಿ ಎಲ್.ಟಿ.ಟಿ.ಇ ಆತ್ಮಹತ್ಯಾ ಬಾಂಬರ್ ಮಹಿಳೆಯನ್ನು ಸಂದರ್ಶಿಸಿದ ಅನುಭವ ಎಂಥದ್ದು? ಯುದ್ಧದಲ್ಲಿ ಮುಳುಗಿರುವವರು, ಅದರಿಂದ ಸಂತ್ರಸ್ತರಾದವರು ಬೇರೊಬ್ಬರ ಕನಸಿನಲ್ಲಿ ಸಿಕ್ಕಿಕೊಂಡವರು ಎನ್ನುವ ಮಹೇಶ್ ಭಟ್ ರಿಗೆ  ಅಲ್ಲಿಂದ ಹಿಂತಿರುಗಿದ ಮೇಲೆ ಮತ್ತೆ ಯುದ್ಧ ಭೂಮಿಗೆ ಹೋಗಬೇಕು ಎನ್ನುವ ತವಕ ಏಕೆ ಉಂಟಾಯಿತು?

    ಇವೇ ಮೊದಲಾದ ಕುತೂಹಲಕಾರಿ ಸಂಗತಿಗಳೊಂದಿಗೆ ಅರಳಿಕಟ್ಟೆ ಛಾಯಾಗ್ರಾಹಕ ಮಹೇಶ್ ಭಟ್ ರೊಂದಿಗೆ ನಡೆಸಿದ ಮಾತುಕತೆ ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ. ಮೊದಲ ಭಾಗ ಎಪ್ಪತ್ತೊಂಭತ್ತನೆಯ ಸಂಚಿಕೆಯ ರೂಪದಲ್ಲಿ ನಿಮ್ಮ ಮುಂದಿದೆ...

    Recording date:  15 August 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    Show Notes

    -  Muliya Timmappaiah - https://shastriyakannada.org/DataBase/KannwordHTMLS/CLASSICAL%20KANNADA%20SCHOLARS%20HTML/MULIYA%20TIMMAPPAIAH%20HTML.htm

    - Ansel Adams' classic book trilogy - https://blog.depositphotos.com/ansel-adams-classic-book-trilogy.html

    - Chandralekha - https://www.asianage.com/life/more-features/150119/archive-of-a-dancer-who-created-modern-dance-on-its-own-indian-terms.html

    - Bangalore scenes from an Indian city - https://www.maheshbhat.com/shop/bangalore-scenes-from-an-indian-city/

    - Barrage across river Krishna - https://www.maheshbhat.com/they-built-a-barrage-across-river-krishna/

    - LTTE female suicide bombers - https://www.maheshbhat.com/speaking-of-conflicts/

    - Episode sponsored by MyLang Books : https://mylang.in/

    Use exclusive promo code AK20 to get flat 20% off on your first purchase.

    Use exclusive promo code AK10 to get flat 10% off on every purchase.

    1 hr 5 min
  • Ep78: ನಮ್ಮ ಡೈರಿ ನಂದಿನಿ ಡೈರಿ (ಭಾಗ ೨) - What do you know about Nandini dairy? (Part 2)

    ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?

    ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು.

    ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

    ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಎರಡನೆಯ ಹಾಗೂ ಅಂತಿಮ ಭಾಗ ನಿಮ್ಮ ಮುಂದಿದೆ.

    Recording date:  22 August 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    58 min
  • Ep77: ನಮ್ಮ ಡೈರಿ ನಂದಿನಿ ಡೈರಿ - What do you know about Nandini dairy?

    ಬೆಳಿಗ್ಗೆ ಎದ್ದೊಡನೆಯ ಮನೆಯ ಹೊಸ್ತಿಲೆದುರು ತಣ್ಣಗೆ ಮಲಗಿರುವ ನಂದಿನಿ ಹಾಲಿನ ಪಾಕೆಟ್ ನ ಹಿಂದಿರುವ ದೊಡ್ಡ ಸಹಕಾರಿ ಉದ್ದಿಮೆಯ ಬಗ್ಗೆ ನಿಮಗೆಷ್ಟು ಗೊತ್ತು?

    ಗುಜರಾತಿನ ಆನಂದ್ ನಲ್ಲಿ ವರ್ಗೀಸ್ ಕುರಿಯನ್ ನೇತೃತ್ವದಲ್ಲಿ ಶುರುವಾದ ಅಮುಲ್ ಭಾರತದ ಪ್ರಪ್ರಥಮ ಸಹಕಾರಿ ಡೈರಿ. ಇದರಲ್ಲಿ ಹಾಲು ಕರೆಯುವ ರೈತ ಮಹಿಳೆ, ಪುರುಷರೇ ಪಾಲುದಾರರು.

    ಇಂಥದ್ದೇ ಮಾದರಿಯಲ್ಲಿ ಭಾರತದ ಇತರೆ ರಾಜ್ಯಗಳಲ್ಲಿ ಸಹಕಾರಿ ಡೈರಿಗಳು ಶುರುವಾದರೂ ಕರ್ನಾಟಕದಲ್ಲಿ ಮಾತ್ರ ಇದುವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

    ನಂದಿನಿ ಹಾಲನ್ನು ಉತ್ಪಾದಿಸುವ ಕೆ ಎಂ ಎಫ್ ಸಹಕಾರಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ಪ್ರೇಮ್ ನಾಥ್ . ಏ.ಎಸ್ ರೊಂದಿಗೆ ಅರಳಿಕಟ್ಟೆ ನಡೆಸಿದ ಚರ್ಚೆಯ ಮೊದಲ ಭಾಗ ನಿಮ್ಮ ಮುಂದಿದೆ.

    Recording date:  22 August 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    1 hr 8 min
  • Ep76: ಕಥೆಗಾರ ಪ್ರಕಾಶಕ ವಸುಧೇಂದ್ರರ ಜತೆ ಸ್ವಚ್ಛಂದ ಮಾತುಕತೆ (೨) - A refreshing conversation with Vasudhendra (2)

    ಅರಳಿಕಟ್ಟೆ ಕನ್ನಡ ಪಾಡ್ ಕಾಸ್ಟ್ ಸರಣಿ ಎಪ್ಪತ್ತೈದು ಸಂಚಿಕೆಗಳ ಮೈಲಿಗಲ್ಲು ತಲುಪುತ್ತಿದೆ. ಈ ವಿಶಿಷ್ಟ ಸಂಚಿಕೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದವರು ಕನ್ನಡದ ಖ್ಯಾತ ಕಥೆಗಾರ ಹಾಗೂ ಛಂದ ಪ್ರಕಾಶನದ ರೂವಾರಿ ವಸುಧೇಂದ್ರ.

    ವಸುಧೇಂದ್ರರ ಬಾಲ್ಯ, ಮೊದಲ ಕಥೆ, ಅವರ ಓದುವ ಕ್ರಮ, ಬರವಣಿಗೆಯ ಶಿಸ್ತು ಹೀಗೆ ಹಲವು ವಿಷಯಗಳ ಕುರಿತ ಸ್ವಚ್ಛಂದವಾದ ಮಾತುಕತೆ ಎರಡು ಸಂಚಿಕೆಗಳಲ್ಲಿ ಪ್ರಕಟವಾಗಲಿದೆ.

    ಎರಡನೆಯ ಭಾಗದಲ್ಲಿ ನಾವು ಕನ್ನಡದಲ್ಲಿ ಸಾಹಿತ್ಯೇತರ ಪುಸ್ತಕಗಳ ಪ್ರಕಟಣೆ ಏಕೆ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿಲ್ಲ, ವಸುಧೇಂದ್ರ ತಮ್ಮ ಇತ್ತೀಚಿನ ಪುಸ್ತಕ "ತೇಜೋ ತುಂಗಭದ್ರ"ವನ್ನು ಕುಮಾರವ್ಯಾಸ, ಕನಕದಾಸ, ಪುರಂದರದಾಸರ ಜತೆಗೆ ಇಂಟರ್ನೆಟ್ ಗೆ ಅರ್ಪಿಸಿರುವುದಕ್ಕೆ ಕಾರಣವೇನು? ವರ್ಷವೊಂದಕ್ಕೆ ಐದು-ಆರು ಪುಸ್ತಕಗಳನ್ನಷ್ಟೇ ತಮ್ಮ ಛಂದ ಪ್ರಕಾಶನ ಪ್ರಕಟಿಸುತ್ತದೆ ಎಂಬ ಸ್ವಯಂ ನಿರ್ಬಂಧ ಹಾಕಿಕೊಳ್ಳಲು ಏನು ಕಾರಣ ಹೀಗೆ ಹಲವಾರು ವಿಷಯಗಳನ್ನು ಚರ್ಚಿಸಿದ್ದೇವೆ.

    Recording date:  28 August 2021

    Credits: Music: Crescents by Ketsa Licensed under creative commons. Icon made by Freepik from www.flaticon.com

    Show notes

    Youtube link: https://youtu.be/s_yVCm6HjLk

    1. ಕಾವೇರಿ ತೀರದ ಪಯಣ - https://www.navakarnatakaonline.com/kaveri-teerada-payana

    2. ಭಾಸ್ಕರ್ ಆನಂದ ಸಾಲೆತೊರೆ - https://en.wikipedia.org/wiki/B._A._Saletore

    3. Social and political life in the Vijayanagar empire - https://indianculture.gov.in/social-and-political-life-vijayanagara-empire-ad1346-ad1646-vol-1

    4. Archive dot org - https://archive.org/

    4. The Elephant Whisperer - https://www.amazon.in/Elephant-Whisperer-Learning-Remarkable-Elephants/dp/1509838538/ref=sr_1_1

    5. The hidden life of Trees: What they feel, how they communicate - https://www.amazon.in/Hidden-Life-Trees-Communicate-Discoveries/dp/0670089346/ref=sr_1_2

    6. Chinmay Tambe's The age of pandemics - https://www.amazon.in/Age-Pandemics-1817-1920-shaped-India/dp/9353579457/ref=sr_1_1

    7. Robert Sewell - A forgotten empire - https://www.amazon.in/Forgotten-Empire-Vijayanagar-Hampi/dp/8184682905

    8. Chanda Pustaka - https://chandapustaka.com/

    1 hr 4 min

About AraliKatte ಅರಳಿಕಟ್ಟೆ

From the publisher's feed

AraliKatte is a Kannada podcast series where Mukund, Supreeth and Vasuki discuss the topics they are interested in but are not totally qualified in.