
Sign up to save your podcasts
Or


ಗೆಲುವು ಸೋಲುಗಳಲ್ಲಿ ಯಾವುದೇ ಆಸಕ್ತಿಯನ್ನು ಇಟ್ಟುಕೊಳ್ಳದೆ, ಸಮಚಿತ್ತದಿಂದ ನಿನ್ನ ಕರ್ತವ್ಯವನ್ನು ಮಾಡು ಅರ್ಜುನ, ಇಂತಹ ಸಮಚಿತ್ತತೆಗೆ ಯೋಗ ಎಂದು ಹೆಸರು ಎಂದು ತಿಳಿಸುತ್ತಿರುವ ಕೃಷ್ಣನ ಮಾತನ್ನು ಕೇಳಿ.
ಕೇಳಿ...ಕೇಳಿಸಿ....
ನಮಗೆ ನಿಯೋಜಿತ ಕರ್ತವ್ಯವನ್ನು ಮಾಡುವುದಕ್ಕಷ್ಟೇ ಅಧಿಕಾರ. ಆದರೆ, ಕರ್ಮಫಲಕ್ಕೆ ನಮಗೆ ಅಧಿಕಾರವಿಲ್ಲ. ಕರ್ಮಫಲಕ್ಕೆ ನಾವು ಕಾರಣ ಎಂದು ಭಾವಿಸಬಾರದು. ಕರ್ಮವನ್ನು ಬಿಡಬೇಕೆಂದು ನಮಗೆ ಮನಸ್ಸಾಗದಿರಲಿ ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ... ಕೇಳಿಸಿ....
ಒಂದು ಸಣ್ಣ ಬಾವಿ ಮಾಡುವ ಕೆಲಸವನ್ನೆಲ್ಲ ದೊಡ್ಡ ಜಲಾಶಯವು ಮಾಡಬಲ್ಲದು. ಹಾಗೆಯೇ, ವೇದಗಳ ಹಿಂದಿರುವ ಉದ್ದೇಶಗಳನ್ನು ತಿಳಿದವನಿಗೆ ವೇದಗಳ ಎಲ್ಲ ಪ್ರಯೋಜನಗಳು ಆಗುತ್ತವೆ ಎಂದು ಕೃಷ್ಣ ತಿಳಿಸುವ ಶ್ಲೋಕ....
ಕೇಳಿ...ಕೇಳಿಸಿ.....
ಸುಖ ದುಃಖ; ತಂಪು ಉಷ್ಣ ಇಂತಹ ದ್ವಂದ್ವಗಳು ಎದುರಾದಾಗ ಮನುಷ್ಯನು ಸಹನೆಯನ್ನು ಕಲಿತುಕೊಳ್ಳಬೇಕು . ಇಂತಹ ದ್ವಂದ್ವಗಳನ್ನು ಸಹಿಸಿಕೊಂಡು ಲಾಭನಷ್ಟಗಳ ವಿಷಯದಲ್ಲಿ ಆತಂಕದಿಂದ ಮುಕ್ತನಾಗಬೇಕು ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ....
ಕೇಳಿ...ಕೇಳಿಸಿ....
ಕೃಷ್ಣ ಲೌಕಿಕ ಜನರ ಮನಸ್ಥಿತಿಯನ್ನು ಈ ಶ್ಲೋಕದಲ್ಲಿ ವಿವರಿಸುತ್ತಿದ್ದಾನೆ..
ಕೇಳಿ... ಕೇಳಿಸಿ...
ನಿಶ್ಚಯ ಸ್ವಭಾವವಿಲ್ಲದವರ ಬುದ್ಧಿಗೆ ಅನೇಕ ಶಾಖೆಗಳಿರುತ್ತವೆ ಎಂದು ಶ್ರೀ ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ....ಕೇಳಿಸಿ....
ಹಿಂದಿನ ಜನ್ಮದಲ್ಲಿ ಆಧ್ಯಾತ್ಮದ ಒಂದು ಮೆಟ್ಟಿಲು ಹತ್ತಿದರೆ ಮಂದಿನ ಜನ್ಮದಲ್ಲಿ ಅದರ ಫಲವೇನು ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ...ಕೇಳಿಸಿ...
ಕೃಷ್ಣ ಪ್ರಜ್ಞೆಯ ಕಾರ್ಯಗಳಲ್ಲಿ ಸುಖ ದುಃಖ, ಲಾಭ ನಷ್ಟ, ಜಯ ಅಪಜಯಗಳ ಪರಿಗಣನೆ ಇರುವುದಿಲ್ಲ ಎಂದು ತಿಳಿಸುವ ಶ್ಲೋಕ..
ಕೇಳಿ.... ಕೇಳಿಸಿ....
From the publisher's feed