👉 ಬೆಂಗಳೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಒಂದೂವರೆ ಶತಮಾನದ ಇತಿಹಾಸ ಇದೆ, ಗೊತ್ತಾ ?
👉 ಮೊದಮೊದಲು ಜನ ಇದಕ್ಕೆ ತಮಾಷೆ ಬಂಗ್ಲೆ ಅಂತಿದ್ದರು ಅಂತ ಗೊತ್ತಾ?
👉 ಮ್ಯೂಸಿಯಂ ರಸ್ತೆಯಲ್ಲಿ ಮ್ಯೂಸಿಯಂ ಇರದೇ, ಕಸ್ತೂರ ಬಾ ರಸ್ತೆಯಲ್ಲಿ ಯಾಕೆ ಇದೆ, ಗೊತ್ತಾ?
👉 ನಾಯಿಗಾಗಿ ಸ್ಮಾರಕ ನಿರ್ಮಿಸಿ, ಅದರ ಪೂಜೆಗೆ ಮಾಡಿದ ವ್ಯವಸ್ಥೆ ದಾಖಲಿಸುವ ಶಾಸನ , ಇಲ್ಲಿದೆ ಗೊತ್ತಾ?
👉 ಸಾಮಾನ್ಯವಾಗಿ ಕನ್ನಡದ ಮೊದಲ ಶಾಸನ ಎಂದು ಗುರುತಿಸಲ್ಪಡುವ ಹೆಲ್ಮಿಡಿ ಶಾಸನ ಇಲ್ಲಿದೆ, ಗೊತ್ತಾ?
👉 ಮಹಾತ್ಮ ಗಾಂಧಿ ರಸ್ತೆ: ಸೌತ್ ಪರೇಡ್ ರಸ್ತೆ :: ಕಸ್ತೂರಬಾ ರಸ್ತೆ : ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಕಳೆದ ಗುರುವಾರ ಪ್ರಸಾರವಾದ ದನಿಪಯಣ ಕೇಳಿ.
ಅಂದ್ಹಾಗೆ ಈ ಸಲ ಇತ್ತೀಚೆಗೆ ಸಂರಕ್ಷಣೆಗಾಗಿ ಈ ಮ್ಯೂಸಿಯಂನ ಆವರಣದಲ್ಲಿ ತಂದು ಸ್ಥಾಪಿಸಿರುವ ಕೆಲ ಶಾಸನಗಳ ಬಗ್ಗೆ ಮಾತನಾಡಲು ಶ್ರೀ ಪಿ.ಎಲ್ ಉದಯ ಇರತಾರೆ. ಉದಯರವರು ಬೆಂಗಳೂರಿನ ಶಿಲಾಶಾಸನಗಳ ಸಂರಕ್ಷಣೆ, ಅವುಗಳ ಬಗೆಗೆ ನಾಗರಿಕರಿಗೆ ತಿಳುವಳಿಕೆ ಕೊಡುವ ಕೆಲಸ ಮಾಡುತ್ತಿದ್ದಾರೆ.