ಸ್ವಾತಂತ್ರ್ಯ ದಿನದ ತಡವಾದ ಶುಭಾಶಯಗಳು. ಅಗಸ್ಟ್ ೧೬ರ ಈ #ದನಿಪಯಣ ಸಂಚಿಕೆಯಲ್ಲಿ ಗಂಡುಮೆಟ್ಟಿನ ನೆಲ ಹುಬ್ಬಳ್ಳಿಯಲ್ಲಿನ ಸ್ವಾತಂತ್ರ್ಯ ಸಮರದ ನೆನಪುಗಳ ಬಗ್ಗೆ ಮಾತನಾಡುತ್ತ ನಡೆಯಲಿದ್ದೇವೆ.
🔶 ಹುಬ್ಬಳ್ಳಿಯನ್ನು ಕರ್ಮಭೂಮಿಯಾಗಿಸಿಕೊಂಡಿದ್ದ ಧೈರ್ಯಶಾಲಿ ಮಹಿಳೆ ಶ್ರೀಮತಿ ಉಮಾಬಾಯಿ ಕುಂದಾಪುರರು ಭಗಿನಿ ಮಂಡಳದ ಮೂಲಕ ಸ್ವಾತಂತ್ರ್ಯದ ಸ್ವಯಂಸೇವಕಿಯರನ್ನು ಸಜ್ಜುಗೊಳಿಸುತಿದ್ದರು.
🔷 ನಿಮಗೆ ಗೊತ್ತಾ ? ಈಗ ಹುಬ್ಬಳ್ಳಿ-ಬೆಂಗಳೂರಿನಲ್ಲಿ ಮುಖ್ಯ ನೆಲೆ ಕಂಡುಕೊಂಡಿರುವ 'ಸಂಯುಕ್ತ ಕರ್ನಾಟಕ' ಶುರುವಾಗಿದ್ದು ಬೆಳಗಾವಿಯಲ್ಲಿ, ಅದೂ ವಾರಪತ್ರಿಕೆಯಾಗಿ..
🔶 ಧಾರವಾಡದ ವಿದ್ಯಾರಣ್ಯ ಶಾಲೆಯಲ್ಲಿ ಸಹೋದ್ಯೋಗಿಗಳಾಗಿದ್ದ ಸರ್ವಶ್ರೀ ರಂಗನಾಥ ದಿವಾಕರ, ಮಧ್ವರಾವ್ ಕಬ್ಬೂರ ಮತ್ತು ರಾಮರಾವ ಹುಕ್ಕೇರಿಕರರು ಶುರುಮಾಡಿದ್ದ "ಕರ್ಮವೀರ" ಪತ್ರಿಕೆಗೆ ಆ ಹೆಸರು ಕೊಡಲು ಕಾರಣವೇನು ಗೊತ್ತಾ?
🔷 ಬಡತನದಲ್ಲಿಯೇ ಹುಟ್ಟಿ, ಕಷ್ಟ ಪಟ್ಟು ಬೆಳದ ಸರ್ ಸಿದ್ದಪ್ಪ ಕಂಬಳಿಯವರು ಅಂದಿನ ಬಾಂಬೆ ಸರಕಾರದಲ್ಲಿ ಶಿಕ್ಷಣ, ಕೃಷಿ, ಅಬಕಾರಿ ಸಚಿವರಾಗಿ ದುಡಿದವರು. ಅಂದಿನ ಬಹುತೇಕ ನಾಯಕರಂತೆ ಗಾಂಧಿ ಬೆಂಬಲಿಗರಾಗದೇ , ಕಾಂಗ್ರೆಸ್ಗೆ ಸ್ಪರ್ಧಿಯಾಗಿದ್ದವರು.
🔶 ಹಿಂದುಸ್ಥಾನ ಸೇವಾದಳವನ್ನು ಸ್ಥಾಪಿಸಿದ ಡಾ.ನಾ.ಸು.ಹರ್ಡಿಕರರು ಹುಬ್ಬಳ್ಳಿಯವರು. ದಳದ ಕೇಂದ್ರ ಕಚೇರಿ ಹುಬ್ಬಳ್ಳಿಯೇ ಆಗಿತ್ತು.
🔷 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹದಿಮೂರು ವರ್ಷದ ಬಾಲಕ ನಾರಾಯಣ ಡೋಣಿ ಹುಬ್ಬಳ್ಳಿಯಲ್ಲಿ ಹುತಾತ್ಮನಾಗಿದ್ದ.
ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
ಈ ಸಂಚಿಕೆಯಲ್ಲಿ ನಾವು ಉಪಯೋಗಿಸಿದ ಹಾದಿ, ಕಂಡ ದೃಶ್ಯಗಳ ಚಿತ್ರಗಳು ಈ ಬ್ಲಾಗಿನಲ್ಲಿವೆ : http://antarangada-mrudanga.blogspot.com/2020/09/blog-post.html
ನಿಮಗೆ ಗೊತ್ತಿರೊ ಹಾಗೆ : *ದನಿಪಯಣ* ಪಾಡ್ಕಾಸ್ಟ್ ಕಾರ್ಯಕ್ರಮದ ಉದ್ದೇಶ ಶಾಲೆಯಲ್ಲಿ ಕಲಿಸದ, ಪಠ್ಯ ಪುಸ್ತಕಗಳಲ್ಲಿ ಇರದ ನಮ್ಮ ಊರು-ನಾಡುಗಳ ಕತೆ-ಇತಿಹಾಸ ತಿಳಿದುಕೊಳ್ಳೋದು ಮತ್ತು ಮಕ್ಕಳಿಗೆ ತಿಳಿಸುವುದು.
ಈ ಪಾಡ್ಕಾಸ್ಟ್ ಸಂಚಿಕೆಗಳು ರೇಡಿಯೋ-ಗಿರ್ಮಿಟ್ನಲ್ಲಿ (radiogirmit.com) ಎರಡು ವಾರಕ್ಕೊಮ್ಮೆಯಂತೆ ಗುರುವಾರ ಪ್ರಸಾರ ಆಗುತ್ತವೆ.
ದನಿಪಯಣ ದ ಹಿಂದಿನ ಸಂಚಿಕೆಗಳು ಗೂಗಲ್ಪಾಡ್ಕಾಸ್ಟ್ ನಲ್ಲಿ ಲಭ್ಯವಿವೆ: https://www.google.com/podcasts?feed=aHR0cHM6Ly9hbmNob3IuZm0vcy8xMTAwMTAyMC9wb2RjYXN0L3Jzcw==
ನಮ್ಮ ದನಿಪಯಣದ ಸಂಚಿಕೆಗಳನ್ನು ಇತರ ಆಸಕ್ತರಿಗೆ ಫಾರ್ವರ್ಡ್ ಮಾಡಿ.
ನಿಮಗೆ ಕೇಳಲು ಆಸಕ್ತಿ ಇಲ್ಲವಾದರೆ, ದಯವಿಟ್ಟು ತಿಳಿಸಿ. ಮುಂದಿನ ಸಂಚಿಕೆಯಿಂದ ತೊಂದರೆ ಕೊಡೋದಿಲ್ಲ🙏
ಅನಿಮಿಷ ಮತ್ತು ಗುರುರಾಜ ಕುಲಕರ್ಣಿ