ಒಬ್ಬ ವ್ಯಕ್ತಿ ತನ್ನ ಸ್ನೇಹಿತನಿಗೆ, “ನನ್ನ ಜೀವನ ಪಯಣದಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಮತ್ತು ನಾನು ಇಂದಿನ ಸ್ಥಿತಿಗೆ ಬರಲು ಅದರಿಂದ ಕಲಿತಿದ್ದೇನೆ" ಎಂದು
ಅವನು ಹೇಳುತ್ತಾನೆ, ಅದಕ್ಕೆ "ಪರವಾಗಿಲ್ಲ, ಒಳ್ಳೆಯದು, ಸಂತೋಷ" ಎಂದು ಸ್ನೇಹಿತ ಉತ್ತರಿಸಿದ. ಆ ವ್ಯಕ್ತಿ ತಕ್ಷಣ ಹೇಳಿದ, "ಆದರೆ ನಾನು ಇದನ್ನು ಮನೆಯಲ್ಲಿ ಹೇಳಿದಾಗ ನನ್ನ ಹೆಂಡತಿ, ತಂದೆ ಮತ್ತು ತಾಯಿ ನನ್ನನ್ನು ಬೈಯುತ್ತಾರೆ." "ಯಾಕೆ"ಎಂದು ಗೆಳೆಯ ಕೇಳಿದ್ದ. ಜೀವನದಲ್ಲಿ ಇದಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಬರಲು ನಾನು ಹೆಚ್ಚು ತಪ್ಪುಗಳನ್ನು ಮಾಡುತ್ತೇನೆ ಎಂದು ಹೇಳಿದ್ದಕ್ಕೆ ನನ್ನನ್ನು ಬೈಯುತ್ತಿದ್ದಾರೆ ಅಂತ. ನೋಡಿ, ತಿಳಿಯದೆ ಮಾಡಿದರೆ ತಪ್ಪು, ತಿಳಿದೂ ಮಾಡಿದರೆ ಅಪರಾಧ. (ಆಲೋಚನೆಯಂತೆ ಜೀವನ)