(ಆಲೋಚನೆಯಂತೆ ಜೀವನ)073
ನಮ್ಮ ದೇಹದಿಂದ ಹೊರಬರುವ ಬೆವರು, ರಕ್ತ, ಜೊಲ್ಲು, ಕಫ, ಮಲ ಮತ್ತು ಮೂತ್ರ ಎಲ್ಲವೂ ಅಸಹ್ಯಕರ ಮತ್ತು ದುರ್ವಾಸನೆಯಿಂದ ಕೂಡಿರುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ಮೂಡುವ ಆಲೋಚನೆ, ಬಾಯಿಂದ ಬರುವ ಮಾತು, ನಾವು ಮಾಡುವ ಕ್ರಿಯೆ ಇನ್ನೊಬ್ಬರಿಗೆ ಇಷ್ಟವಾಗಬಹುದು. ನಾವು ಮಾಡಬೇಕಾಗಿರುವುದು 800 ಕೋಟಿ ಆತ್ಮಗಳಿಗೆ ನೆಮ್ಮದಿ, ಶಾಂತಿ, ಸಂಪತ್ತು, ಸಂತೋಷ ಮತ್ತು ಆರೋಗ್ಯವನ್ನು ಆಲೋಚನೆ, ಮಾತು ಮತ್ತು ಕಾರ್ಯಗಳ ಮೂಲಕ ನೀಡುವುದು.